This is the title of the web page
This is the title of the web page

Please assign a menu to the primary menu location under menu

Local News

ಕೇಂದ್ರದಲ್ಲಿ ED ದುರ್ಬಳಿಕೆ ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ


ಅಥಣಿ: ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಂಡು ರಾಹುಲ್ ಗಾಂಧಿ ಅವರನ್ನ ವಿಚಾರಣೆ ನೆಪದಲ್ಲಿ ಹತ್ತಿಕ್ಕೂವ ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ವಿರುದ್ಧ ಅಥಣಿಯ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಅಥಣಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿನಾಕಾರಣ ನಮ್ಮ ಕಾಂಗ್ರೆಸ್ ನಾಯಕರನ್ನ ಹತ್ತಿಕ್ಕೂವ ಕೇಲಸ ಬಿಜೆಪಿಯವರು ಮಾಡುತ್ತಿದ್ದು ಇದು ಖಂಡನಿಯ ಎಂದು ಗುಡುಗಿದರು

ಇದೆ ಸಂದರ್ಭದಲ್ಲಿ ಅಥಣಿಯ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ದೇಶದ ತನಿಖಾ ಸಂಸ್ಥೆಗಳನ್ನ ಕೇಂದ್ರದ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ತಂತ್ರ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅಥಣಿ ತಹಸಿಲ್ದಾರ್ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಿದರು

ಇದೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಧರೇಪ್ಪಾ ಠಕ್ಕನ್ನವರ, ಅನೀಲ ಸುಣಧೊಳಿ, ರಾವಸಾಬ ಐಹೋಳೆ, ಮಹಾದೇವಿ ಹೋಳಿಕಟ್ಟಿ, ಸುನೀತಾ ಐಹೋಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Gadi Kannadiga

Leave a Reply