This is the title of the web page
This is the title of the web page

Please assign a menu to the primary menu location under menu

State

ಗಾಂಧಿ ಕುಟುಂಬದ ವರ್ಚಸ್ಸು ಹಾಳು ಮಾಡಲು ಕೇಂದ್ರ ಸರ್ಕಾರ ಯತ್ನ -ಆರ್ ಬಿ ತಿಮ್ಮಾಪುರ


ಬೆಳಗಾವಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುಟುಂಬದ ವರ್ಚಸ್ಸನ್ನು ಹಾಳು ಮಾಡಲು ಕೇಂದ್ರ ಸರ್ಕಾರ ಇಡಿ ಯ೦ತಹ ಸಂಸ್ಥೆಯನ್ನು ಬಳಸಿಕೊಂಡು ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಆರ್ ಬಿ ತಿಮ್ಮಾಪುರ್ ಆರೋಪಿಸಿದ್ದಾರೆ .

ಅವರೆಂದೂ ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಇಡಿ ಸಂಸ್ಥೆಯಿಂದ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಮನವಿ ಸಲ್ಲಿಸಿದ ನಂತರ ನೆರೆದ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು .
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಜಮ್ಮು ಕಾಶ್ಮೀರದಿಂದ ಪಾದಯಾತ್ರೆ ಹೊರಡುವ ಕಾರ್ಯಕ್ರಮವನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಹುನ್ನಾರ ಹೂಡಿದೆ ,ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ದಿಂದಲೇ ಎಂದೋ ಮುಗಿದು ಹೋಗಿರುವ ಪ್ರಕರಣವನ್ನು ಕೆದಕಿ ಕೆದಕಿ ಅವರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದೆ ಎಂದು ಅವರು ಆರೋಪಿಸಿದರು .
ದೇಶದಲ್ಲಿನ ವಿರೋಧಿ ಪಕ್ಷಗಳ ಪ್ರತಿಷ್ಟಿತ ನಾಯಕರುಗಳನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಸರ್ಕಾರ ತೊಂದರೆ ನೀಡುತ್ತಿದೆ ,ಅವರುಗಳ ವರ್ಚಸ್ಸು ಹಾಳು ಮಾಡಲು ಪ್ರಯತ್ನಿಸುತ್ತಿದೆ ,40% ಕಮಿಷನ್ ಪಡೆಯುತ್ತಿರುವುದಾಗಿ ಕಂತ್ರಾಟುದಾರರ ಸಂಘ ನೇರವಾಗಿ ಪ್ರಧಾನಿ ಯವರಿಗೆ ದೂರು ಸಲ್ಲಿಸಿತ್ತು ಆ ಕುರಿತು ಈವರೆಗೆ ಯಾವುದೇ ರೀತಿಯ ಕ್ರಮ ಆಗಿಲ್ಲ ,ಅದಾನಿ ಮತ್ತು ಅಂಬಾನಿ ಗಳಂಥ ವರು ಶ್ರೀಮಂತರಾಗಲು ಮತ್ತು ದೇಶ ಅಧೋಗತಿಗೆ ಇಳಿಯಲು ನೇರವಾಗಿ ಕಾರಣರಾದ ಪ್ರಧಾನಿ ಮೋದಿ ಅವರು ತಮ್ಮ ಅಧಿಕಾರಾವಧಿಯ 8 ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾ ಪರಿಷತ್ತಿನಲ್ಲಿ ಎದುರಿಸುವ ಧೈರ್ಯ ತೋರಿಲ್ಲ ಎಂದವರು ಟೀಕಿಸಿದರು .
ಪೆಟ್ರೋಲ್ ಡೀಸೆಲ್ ಗ್ಯಾಸ್ ಸೇರಿದಂತೆ ದಿನಬಳಕೆಯ ಬಹುತೇಕ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಿದೆ ,ಸಾಮಾನ್ಯ ಜನರ ಜೀವನ ದುಬಾರಿಯಾಗಿದೆ ,ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆ ಸೆಳೆಯಲು ಕೋಮುವಾದ ಮತ್ತು ಜಾತಿವಾದ ದಂಥ ವಿಚಾರಗಳಿಗೆ ಮುನ್ನೆಲೆ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ತಿಮ್ಮಾಪುರ್ ಅವರು ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಪರೋಕ್ಷವಾಗಿ ಒಪ್ಪಿಕೊಳ್ಳುವ ಗೃಹಸಚಿವ ಅರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಅದರಲ್ಲೂ ಬೆಂಗ್ಳೂರು ಮಹಾನಗರದಲ್ಲಿ ಹೆಚ್ಚುತ್ತಿರುವ ಗುಂಡಾಗಿರಿಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದರು .ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ರಾಜು ಸೇಠ್ ಅರವಿಂದ ದಳವಾಯಿ , ಕಾಂಗ್ರೆಸ್ ಪಕ್ಷದ ಎಸ್ ಸಿ ಘಟಕದ ರಾಜ್ಯ ಸಂಚಾಲಕ ಗಜು ಧರನಾಯ್ಕ ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರ್ತಿಕ್ ಪಾಟೀಲ್ ,ಮಾಜಿ ಕಾರ್ಪೊರೇಟರ್ ಜಯಶ್ರೀ ಮಾಳಗಿ ಮುಂತಾದವರು ಉಪಸ್ಥಿತರಿದ್ದರು .


Gadi Kannadiga

Leave a Reply