This is the title of the web page
This is the title of the web page

Please assign a menu to the primary menu location under menu

Local News

ಚಲನಚಿತ್ರ ನಟರು ಯುವಕರ ರೋಲ್ ಮಾಡೆಲ್ ಆಗಬಾರದು: ಶಾಸಕ ಅಭಯ ಪಾಟೀಲ


ಬೆಳಗಾವಿ: ನಗರದ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ಸಂಚರಿಸಿ, ಜನರ ಸಮಸ್ಯ ಆಲಿಸಿ ಪರಿಹಾರ ಸೂಚಿಸುತ್ತಾ, ವಿದ್ಯಾರ್ಥಿ ಹಾಗೂ ಯುವಕರ ಕುರಿತಾಗಿ ಈ ಮೇಲಿನಂತೆ ಹೇಳಿದ್ದಾರೆ.

ವಡಗಾವಿಯ 9ನೆಯ ವಾರ್ಡಿನ ನಜಾರಗಲ್ಲಿ ಅಲ್ಲಿಯ ಅಶುತೋಷ್ ನಾರ್ಯಾಗೊಳ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇಕಡಾ 98 ರಷ್ಟು ಅಂಕ ಪಡೆದು, ನಗರದ ಸರ್ಕಾರಿ ಕಾಲೇಜುಗಳಲ್ಲೇ ಉತ್ತಮ ಸಾಧನೆ ಮಾಡಿದ್ದಾನೆ, ಈ ವಿದ್ಯಾರ್ಥಿಗೆ ನಮ್ಮ ಕಡೆಯಿಂದ ಅಭಿನಂದನೆಗಳು ಎಂದರು.

ಈತನ ಸಾಧನೆಗೆ ಅವರ ಪಾಲಕರು ಶಿಕ್ಷಕರು ಮತ್ತು ಹಿತೈಷಿಗಳು ಕಾರಣಿಕರ್ತರು, ಅವರ ಪಾಲಕರಿಗೆ ಆದಷ್ಟೆ ಖುಷಿ ಹೆಮ್ಮೆ ನಮಗೂ ಆಗಿದೆ, ಮುಂದೆ ಆತನ ಶೈಕ್ಷಣಿಕ ಸಾಧನೆಗೆ ಏನೇ ಸಹಾಯ ಬೇಕಾದರೂ ನಾವು ಮಾಡುತ್ತೇವೆ ಎಂದರು.

ವಿದ್ಯಾರ್ಥಿಗಳು ಇಂತಾ ಸಾಧನೆ ಮಾಡಿದ ಯುವಕರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು, ಅದನ್ನು ಬಿಟ್ಟು ಸಿನಿಮಾ ಹೀರೋಗಳನ್ನ ಆದರ್ಶವಾಗಿ ಇಟ್ಟುಕೊಳ್ಳಬಾರದು ಎಂದರು.

ಇವತ್ತಿನ ದೀನ ಶಿಕ್ಷಣಕ್ಕೆ ಬಹಳ ಮಹತ್ವ ಇದೆ, ವಿಜ್ಞಾನ ವಿಭಾಗದಲ್ಲಿ ಅದು ಸರ್ಕಾರಿ ಕಾಲೇಜಿನಲ್ಲಿ ಓದಿ ಈ ರೀತಿಯ ಪಲಿತಾಂಶ ಪಡೆದದ್ದು ಮುಂದೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ, ಬರುವಂತ ದಿವಸಗಳಲ್ಲಿ ಇಂತಾ ವಿದ್ಯಾರ್ಥಿಗಳಿಗೆ, ಅವರ ಪಾಲಕರಿಗೆ ನಮ್ಮ ಕಡೆಯಿಂದ ಸಹಕಾರ ಇದ್ದೆ ಇರುತ್ತದೆ ಎಂದರು.

ನಮ್ಮ ಕ್ಷೇತ್ರದಲ್ಲಿ ಈಗಾಗಲೇ 20ಕೋಟಿ ರೂಪಾಯಿ ಹಣವನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಂಜೂರು ಮಾಡಿದ್ದು, ವಾಡಗಾವಿಯ ಶಾಲಾ ಕಾಲೇಜು, ಸರಸ್ವತಿ ಶಾಲಾ ಕಾಲೇಜು ಮತ್ತು ಚಿಂತಾಮನರಾವ ಶಾಲಾ ಕಾಲೇಜು ಇವುಗಳ ಸಂಪೂರ್ಣ ಅಭಿವೃದ್ದಿ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಬಳಸಿ, ಕ್ಷೇತ್ರದಲ್ಲಿ ಎಲ್ಲರಿಗೂ ಉತ್ತಮ ಶಿಕ್ಷಣ ಸಿಗುವಂತೆ ಆಗಬೇಕು ಎಂದರು.

ಮುಂದಿನ ಕೆಲ ತಿಂಗಳಲ್ಲಿ ನಮ್ಮ ಸರ್ಕಾರಿ ಶಾಲಾ ಕಾಲೇಜುಗಳು ಯಾವುದೇ ಖಾಸಗಿ ಶಿಕ್ಷಣ ಸಂಸ್ಥಗಿಂತ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಬೆಳವಣಿಗೆ ಆಗುತ್ತವೆ ಎಂದರು

ಈ ಸಂದರ್ಭದಲ್ಲಿ ನಗರ ಸೇವಕರಾದ ಮಂಗೇಶ್ ಪವಾರ್, ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು


Gadi Kannadiga

Leave a Reply