This is the title of the web page
This is the title of the web page

Please assign a menu to the primary menu location under menu

Local News

ಮಹಿಳೆಯರು ಆರ್ಥಿಕವಾಗಿ ಸದೃಡಗೊಳ್ಳಬೇಕು ; ಸತೀಶ ಜಾರಕಿಹೊಳಿ


ಯಮಕನಮರಡಿ:- ಮಹಿಳೆಯರು ಸ್ವಾಲಂಬನೆ ಬದುಕು ಕಟ್ಟಿಕೊಳ್ಳಲು ಸರ್ಕಾರವು ಸಹಾಯಧನ ನೀಡುತ್ತಿದ್ದು ಮಹಿಳೆಯರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಅವರು ಸೋಮವಾರ ದಿ. ೨೬ ರಂದು ಯಮಕನಮರಡಿಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳ ಸಭಾಭವನದಲ್ಲಿ ಯಮಕನಮರಡಿ ಮತಕ್ಷೇತ್ರದ ೨೦ ಸ್ತ್ರಿ ಶಕ್ತಿ ಗುಂಪುಗಳಿಗೆ ಅಮೃತ ಸಹಾಯ ಕಿರು ಉದ್ಯಮೆ ಯೋಜನೆಯಡಿಯಲ್ಲಿ ಬೀಜಧನ(ಸಿಡ್‌ಮನಿ) ಚೆಕ್ ಗಳನ್ನು ವಿತರಿಸಿ ಮಾತನಾಡಿದರು. ಸ್ವಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಕಟ್ಟಡದ ಅವಶ್ಯಕತೆಯಿದ್ದು, ಆಯಾ ಗ್ರಾ.ಪಂ ಮಟ್ಟದಲ್ಲಿ ಉತ್ಪನ್ನಗಳ ಮಾಡುಕಟ್ಟೆಯ ಕಟ್ಟಡ ಕಟ್ಟಿಕೊಡಲು ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಸಿಡಿಪಿಓ ಮಂಜುನಾಥ ಪರಸನ್ನವರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹುಕ್ಕೇರಿ ತಹಶೀಲ್ದಾರ ಡಿ.ಎಚ್.ಹೂಗಾರ, ಯಮಕನಮರಡಿ ಗ್ರಾ.ಪಂ. ಅಧ್ಯಕ್ಷೆ ವಂದನಾ ಓಂಕಾರ ತುಬಚಿ, ಉಪಾಧ್ಯಕ್ಷ ಜಾವೀದ ಜಕಾತಿ, ಯಮಕನಮರಡಿ ಬ್ಲಾಕ ಕಾಂಗ್ರೇಸ ಅದ್ಯಕ್ಷ ವೀರಣ್ಣಾ ಬಿಸಿರೊಟ್ಟಿ, ಹತ್ತರಗಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಾದೇವ ಪಟೋಳಿ, ತಾ.ಪಂ. ಮಾಜಿ ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ಕಿರಣಸಿಂಗ ರಜಪೂತ, ಎ.ಸಿಡಿಪಿಓ ಎನ್.ಎಚ್. ನಾಗಾಲೋಟ, ಎಚ್. ಹೊಳೆಪ್ಪಗೋಳ, ಪಿಡಿಓ ಎಸ್.ಎಸ್. ಡಂಗ, ವಲಯ ಮೇಲ್ವಿಚಾರಕಿ ಎಮ್.ಎಮ್. ನಾವಲಗಟ್ಟಿ, ಕಾರ್ಮಿಕ ನಿರೀಕ್ಷಕ ಅಧಿಕಾರಿ ಜಾನವಿ ತಳವಾರ, ಹಿರಿಯ ಕಾರ್ಮಿಕ ನಿರೀಕ್ಷಕ ರಮೇಶ ಕೇಸರೂರ, ನಾಗರಾಜ ಹಲಗೆ ಉಪಸ್ಥಿತರಿದ್ದರು. ಅನುರಾದಾ ಕಾಪಸಿ ಕಾರ್ಯಕ್ರಮ ನಿರೂಪಿಸಿದರು. ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.


Gadi Kannadiga

Leave a Reply