ಯರಗಟ್ಟಿ: ಕರೊನಾ ಸಂದರ್ಬದಲ್ಲಿ ಎರಡು ವರ್ಷಗಳಲ್ಲಿ ಶಾಲಾ ಮಕ್ಕಳ ಅಭ್ಯಾಸ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಲು ಸಾಧ್ಯವಾಗದ ಕಾರಣ ಶಾಲಾ ಪರಿಸರಕ್ಕೆ ಹೊಂದಿಕೊಳ್ಳಲು ಮಕ್ಕಳನ್ನು ಹುರುದುಂಬಿಸಿ ಅವರಿಗೆ ಉತ್ತಮ ಕಲಿಕಾ ಅನುಭವನ್ನು ನೀಡುವುದು ಅವಶ್ಯವಾಗಿದೆ ಎಂದು ಕೋ.ಶಿವಾಪೂರ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ವಿಜಯ ಪಡಿ ಪ್ರಾಸ್ತಾವಿಕವಾಗಿ ತಿಳಿಸಿದರು.
ಅವರು ಮಂಗಳವಾರ ದಿ.೩೧ರಂದು ಮಾಡಮಗೇರಿ ಗ್ರಾಮದ ಸರಕಾರಿ ಪ್ರಾಥಮೀಕ ಕನ್ನಡ ಮಾದರಿ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದಕ್ಕು ಮುಂಚೆ ಗ್ರಾಮದಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಕರಬಲ್ ಮುಂತಾದ ವಿವಿದ ವೇಷ ಭೂಷನ ವಿಧ್ಯಾರ್ಥಿಗಳಿಂದ ಅದ್ದೂರಿಯಿಂದ ಅಕ್ಷರ ಜಾತ್ರೆ, ರಥದ ಮೇರವಣಿಗೆ ನಡೆಯಿತು ಗ್ರಾಮದಲ್ಲಿ ಹಬ್ಬದ ಸಡಗರ ವಾತಾವರಣ ಹಬ್ಬದಂತೆ ರಥವನ್ನು ಸ್ವಾಗತ ಮಾಡಿಕೊಂಡರು. ಗ್ರಾಮದ ಬೀದಿಗಳಲ್ಲಿ ಟ್ರಾö್ಯಕ್ಟರ್, ಎತ್ತಿನ ಬಂಡಿಗಳಲ್ಲಿ ವಿವಿದ ಕಲಾವಿದರು ರೈತರು, ಸೈನಿಕರು, ದೇಶಕ್ಕೆ ಹೋರಾಟ ಮಾಡಿದ ರಾಷ್ಟ್ರೀಯ ನಾಯಕರ ವೇಷಗಳು, ಕಂಡುಬಂದವು.
ಬೆಳಗಾವಿ ಡೈಟ್ ಉಪನ್ಯಾಸಕ ಎನ್ ಆರ್ ಪಾಟೀಲ ಮಾತನಾಡಿ ಶಿಕ್ಷಣ ಅಕ್ಷರ ಕಲಿಕೆ ಒಂದೆ ಅಲ್ಲಿ ಸಮಾಜದಲ್ಲಿ ನಡೆಯುವ ಗ್ರಾಮೀಣ ಸೂಗಡು ಮುಂದಿನ ಪೀಳಿಗೆಗೆ ಪರಿಚಯಸುವ ಮಹತ್ವದ ಕಾರ್ಯವನ್ನು ಮಕ್ಕಳು ಮುಂದೆ ನಾವು ಯಾವ ರೀತಿ ಬದುಕಬೇಕು ಶಿಕ್ಷಣದೊಂದಿಗೆ ನೈತಿಕ ಶಿಕ್ಷಣ ಕಲಿಸಬೇಕು ಎಂದು ಶಿಕ್ಷಕರಿಗೆ ಮತ್ತು ಪಾಲಕರಿಗೆ ತಿಳಿಸಿದ್ದಾರೆ. ಮಾಡಮಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಮಂಜುಳಾ ಬಂಡಿವಡ್ಡರ, ಸಿದ್ದಪ್ಪ ಚಿಕ್ಕನ್ನವರ, ಕಲ್ಲೂಳೆಪ್ಪ ಸಿದ್ದನ್ನವರ, ಮಹೇಶ ಖಂಡ್ರಿ, ಶಿವಾನಂದ ಬಗನಾಳ, ಪಾರವ್ವ ಬಾಗಿಲದ, ಮಲ್ಲವ್ವ ನಾಯ್ಕರ, ರೇಣುಕಾ ಗಂಗಾಪೂರ, ಸರಸ್ವತಿ ಖಂಡ್ರಿ, ಶಾಲಾ ಪ್ರದಾನ ಗುರು ಎಸ್ ಬಿ ಪಠಗುಂದಿ, ಆರ್ ಎನ್ ಗುದಗಪ್ಪನವರ, ನೀಲಪ್ಪ ಸಿದ್ದಣ್ಣವರ, ಮಲಕನ್ನವರ, ಕೋ.ಶಿವಾಪೂರ ಕ್ಲಸ್ಟರ್ ಎಲ್ಲಾ ಶಾಲೆಯ ಪ್ರಧಾನ ಗುರುಗಳು ಶಿಕ್ಷಕರು, ಎಲ್ಲಾ ಶಾಲಾ ಶಾಲೆಯ ಎಸ್‌ಡಿಎಮ್ ಸಿ ಪಾಧಾಧಿಕಾರಿಗಳು ಉಪಸ್ಥಿತರಿದ್ದರು.