This is the title of the web page
This is the title of the web page

Please assign a menu to the primary menu location under menu

Local News

ರಸ್ತೆ ಸುಧಾರಿಸುವಂತೆ ಆಗ್ರಹಿಸಿ ಜಿ.ಪಂ ಎದುರು ಗ್ರಾಮಸ್ಥರ ಪ್ರತಿಭಟನೆ


ಬೆಳಗಾವಿ: ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾ.ಪಂ ವ್ಯಾಪ್ತಿಯ ಅಸೋದೇ ತೋಟದ ರಸ್ತೆ ಸುಧಾರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮೀತಿ ಪದಾಧಿಕಾರಿಗಳು ಪ್ರತಿಭಟಿಸಿ ಜಿ.ಪಂ ಸಿ.ಇ.ಒ ಗೆ ಮನವಿ ಸಲ್ಲಿಸಿದರು.

ಮುಗಳಿ ಗ್ರಾಮದಿಂದ ಸುಮಾರು 2 ಕಿ.ಮೀ ಅಂತರದಲ್ಲಿರುವ ಅಸೋದೆ ತೊಟಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದೆ. ತೋಟದ ವಸತಿ ಜನ ಮತ್ತು ಶಾಲಾ ಮಕ್ಕಳು ಗ್ರಾಮಕ್ಕೆ ತೆರಳಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ರಸ್ತೆ ಮಾರ್ಗ ಸಂಪೂರ್ಣ ಕಡಿತವಾಗುತ್ತದೆ ಎಂದರು.

ಗ್ರಾ.ಪಂ, ತಾ.ಪಂ ಮತ್ತು ತಹಶೀಲ್ದಾರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಸಮಸ್ಯೆ ಪರಿಹರಿಸದಿದ್ದಲ್ಲಿ ಉಘ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಈ ವೇಳೆ ರವಿ ಬಸ್ತವಾರಕರ, ರಾಯಪ್ಪ, ದುರ್ಗಪ್ಪ ಚೊಕವಾಡಿ, ಮುರಗೇಶ ತನಾಲಕರ, ರಾಮ ಕಾಂಬಳೆ, ವಿನಾಯಕ ಕೊಲಕರ, ನಿಂಗಪ್ಪ ಕಾಂಬಳೆ, ಅರ್ಜುನ್ ಕಾಂಬಳೆ ಮೊದಲಾದವರು ಉಪಸ್ಥಿತರಿದ್ದರು.


Gadi Kannadiga

Leave a Reply