This is the title of the web page
This is the title of the web page

Please assign a menu to the primary menu location under menu

State

ವಾಲಿಬಾಲ್ ಕ್ರೀಡಾಪಟುಗಳ ಗಮನಕ್ಕೆ


ಗದಗ ಸೆಪ್ಟೆಂಬರ್ ೨೬: ಸೆಪ್ಟೆಂಬರ್ ೨೯ ರಿಂದ ಅಕ್ಟೋಬರ್ ೧೨ ರವರೆಗೆ ಗುಜರಾತ್‌ನಲ್ಲಿ ನಡೆಯುವ ೩೬ನೇ ರಾಷ್ಟ್ರೀಯ ಕ್ರೀಡಾಕೂಟ ೨೦೨೨ಕ್ಕೆ ಕರ್ನಾಟಕ ರಾಜ್ಯದಿಂದ ವಾಲಿಬಾಲ್ ಪುರುಷರ/ ಮಹಿಳೆಯರ ತಂಡದ ಆಯ್ಕೆ ಪ್ರಕ್ರಿಯಯನ್ನು ಸೆಪ್ಟೆಂಬರ್ ೨೭ ರಂದು ಬೆಳಿಗ್ಗೆ ೮ ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದ ವಾಲಿಬಾಲ್ ಅಂಕಣದಲ್ಲಿ ಇಲಾಖಾ ವತಿಯಿಂದ ನಡೆಸಲಾಗುತ್ತಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ಜಿಲ್ಲೆಯ ವಾಲಿಬಾಲ್ ಕ್ರೀಡಾಪಟುಗಳು ಹಾಗೂ ಸ್ಥಳೀಯ ವಾಲಿಬಾಲ್ ಕ್ರೀಡಾಪಟುಗಳು ಬಾಗವಹಿಸಬೇಕಾಗಿರುತ್ತದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟೋಪಹಾರ ಹಾಗೂ ಪ್ರಯಾಣಭತ್ಯೆ, ದಿನಭತ್ಯೆಯನ್ನು ಇಲಾಖೆಯಿಂದ ಭರಿಸಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಹ ವಾಲಿಬಾಲ್ ಕ್ರೀಡಾಪಟುಗಳು ಸೆಪ್ಟೆಂಬರ್ ೨೭ ರಂದು ಬೆಳಿಗ್ಗೆ ೮-೦೦ ಗಂಟೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ವಾಲಿಬಾಲ್ ಅಂಕಣದಲ್ಲಿ ವರದಿ ಮಾಡಿಕೊಳ್ಳಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply