This is the title of the web page
This is the title of the web page

Please assign a menu to the primary menu location under menu

Local News

ಪ್ರಾಣಿಯ ದಾಳಿಯಿಂದ ೧೨ ಮೇಕೆಗಳು ಸಾವು


ಮೂಡಲಗಿ: ಕಳೆದ ಹತ್ತು ದಿನಗಳಿಂದ ರೈತರ ಮನೆಯ ಅಂಗಳದಲ್ಲಿ ಕಟ್ಟಿದ ಮೇಕೆಗಳ ಮೇಲೆ ರಾತೋರಾತ್ರಿ ಯಾವುದೋ ಪ್ರಾಣಿಯ ದಾಳಿಯಿಂದ ಇಲ್ಲಿಯರೆಗೆ ಸುಮಾರು ೧೨ ಮೇಕೆಗಳು ಸಾವಿಗೀಡಾಗಿದ್ದು, ಬುಧುವಾರದಂದು ಇಬ್ಬರ ರೈತರ ಮನೆಯ ಮುಂದೆ ಕಟ್ಟಿರುವ ಆರು ಮೇಕೆಗಳು ಸಾವನ್ನಪ್ಪಿವೆ.
ಮೂಡಲಗಿ ಪಟ್ಟಣದ ಸೈನಿಕ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಇಲ್ಲಿಯವರೆಗೆ ಸುಮಾರು ೧೮ ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೇಕೆಗಳ ಮೇಲೆ ರಾತೋರಾತ್ರಿ ಯಾವುದೋ ಪ್ರಾಣಿಯಿಂದ ದಾಳಿಯಿಂದ ಮೇಕೆಗಳು ತೀರಿ ಹೋಗ್ತಿವೆ. ಇದರಿಂದ ಸೈನಿಕ ನಗರದ ಸಾರ್ವಜನಿಕರು ಮೇಕೆಗಳ ಸರಣಿ ಸಾವಿನಿಂದ ಕಂಗಾಲಾಗಿದ್ದು, ಪ್ರತಿ ಮೇಕೆಗಳ ಮೌಲ್ಯ ಸುಮಾರು ಏಂಟು ಸಾವಿರಕ್ಕೂ ಅಧಿಕ ಇದ್ದು, ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭಿಸುವಂತಾಗಿದೆ ರೈತರು.
ಜೂ.೭ರಂದು ಮಂಗಳವಾರ ರಾತೋರಾತ್ರಿ ಸೈನಿಕ ನಗರದ ನಿವಾಸಿ ಚಂದ್ರ ಶಂಕರ ಮಾಲೋಜಿ ಎಂಬುವÀರ ಎರಡು ಮೇಕೆಗಳು ಹಾಗೂ ಶಿವಭೋದರಂಗ ಶಿವಪ್ಪ ಬಿರಡಿ ಎಂಬುವವರ ನಾಲ್ಕು ಮೇಕೆಗಳು ಸಾವನ್ನಪ್ಪಿದರಿಂದ ಸ್ಥಳೀಯ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಿಯ ಸ್ಥಳೀಯರು ಹೇಳುವ ಪ್ರಕಾರ ಈ ರೀತಿಯಲ್ಲಿ ನಾಯಿಗಳು ಹಾಗೂ ನರಿಗಳು ಮೇಕೆಗಳ ಮೇಲೆ ದಾಳಿ ಮಾಡುವುದಿಲ್ಲ ಇದು ತೋಳದ ದಾಳಿಯಾಗಿದ್ದು, ಇದರಿಂದ ರಾತ್ರಿ ಸಮಯದಲ್ಲಿ ಸಣ್ಣ ಮಕ್ಕಳನ್ನು ಮನೆಯಿಂದ ಹೊರಗಡೆ ಕಳಿಸಲು ಭಯದ ಭೀತಿ ಆವರಿಸಿಕೊಂಡಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಹಾಗೂ ಪಶು ಇಲಾಖೆಯ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಮಹಾಂತೇಶ ಹಿಪ್ಪರಗಿ ಹಾಗೂ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ ಎಮ್ ಬಿ ವಿಭೂತಿ, ಪೊಲೀಸ ಸಿಬ್ಬಂದಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿ, ಪ್ರಾಣಿಯ ಹೆಜ್ಜೆ ಗುರುತುಗಳನ್ನು ಪರೀಶಿಲನೆಗಾಗಿ ಕಳಿಸಿದ್ದಾರೆ. ವರದಿ ಬಂದ ನಂತರ ಸಂಬಂಧಪಟ್ಟ ಇಲಾಖೆಗಳ ಮೇಲಾಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಪರಿಹಾರವನ್ನು ಒಗಿಸಲಾಗುವುದು ಎಂದು ರೈತರಿಗೆ ಭರವಸೆಯನ್ನು ನೀಡಿದ್ದಾರೆ.


Gadi Kannadiga

Leave a Reply