This is the title of the web page
This is the title of the web page

Please assign a menu to the primary menu location under menu

State

೫ ಕೋಟಿ ಲೂಟಿ ಮಾಡಿದ್ದರೆ ಬನ್ನಿಕಟ್ಟಿಗೆ ಬಂದು ಬಿಜೆಪಿ ಮುಖಂಡರು ಸಾಬೀತು ಪಡಿಸಿ : ಶಾಸಕ ಅಮರೇಗೌಡ ಬಯ್ಯಾಪುರ ಅವರಿಂದ ಪಂಥಾಹ್ವಾನ


ಕುಷ್ಟಗಿ: ಇತ್ತೀಚಿಗೆ ಪುರಸಭೆ ಸಾಮಾನ್ಯಸಭೆಯಲ್ಲಿ ಬಿಜೆಪಿ ಸದಸ್ಯರು ನನ್ನ ಮೇಲೆ ಶಾಸಕರು ಪುರಸಭೆ ಅನುದಾನ 5 ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೇನಾದರೂ ಲೂಟಿ ಮಾಡಿದ್ದಾರೆ ಎಂದು ದಾಖಲೆ ಸಮೇತ ಮಾರ್ಚ ತಿಂಗಳ ಮೊದಲ ವಾರದಲ್ಲಿ ಯಾವಾಗ ಬೇಕಾದರೂ ಬಂದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಾಸಕ ಅಮರೇಗೌಡ ಬಯ್ಯಾಪುರ ಬಿಜೆಪಿ ಸದಸ್ಯರು ಹಾಗೂ ಮುಖಂಡರಿಗೆ ಪಂಥಾಹ್ವಾನ ನೀಡಿ ಸೇರಿಗೆ ಸವಾ ಸೇರು ಎಂದು ಸವಾಲ್ ಹಾಕಿದ್ದಾರೆ.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಶಾಸಕನಾದ ಮೇಲೆ ಕಳೆದ ನಾಲ್ಕು ವರ್ಷಗಳಿಂದ ಪ್ರತಿವರ್ಷ ಯಾವ ಯಾವ ಅನುದಾನ ಎಷ್ಟು ಖರ್ಚು ಮಾಡಿದ್ದೇನೆ ಅನುದಾನವನ್ನು ಯಾವ ರೀತಿ ಕ್ರಿಯಾಯೋಜನೆ ಮಾಡಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಿದ್ದೇನೆ ಎಂಬುದು ಪ್ರತಿಯೊಂದು ದಾಖಲೆಗಳು ನನ್ನ ಹತ್ತಿರ ಇದೆ. ಈ ತಿಂಗಳು ವೈಯಕ್ತಿಕ ಹಾಗೂ ಬೆಂಗಳೂರು ಕಛೇರಿಗಳಲ್ಲಿ ಸ್ವಲ್ಪ ಕೆಲಸವಿದ್ದು ಬಿಜೆಪಿ ಸದಸ್ಯರು ಬೇಕೆಂದರೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಬನ್ನಿಕಟ್ಟಿ ಹತ್ತಿರ ವೇದಿಕೆಗೆ ಬಂದು ಸಾಬೀತುಪಡಿಸಲಿ. ಸಾಬೀತಾದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು. ತಮಗೆ ಬೇಕಾದ ಕಂಟ್ರಾಕ್ಟರ್ ಗೆ ಕಾಮಗಾರಿ ಕೆಲಸ ನೀಡಿದ್ದಾರೆ ಎಂದಿದ್ದಾರೆ. ಅಸಲಿಗೆ ಕಾಂಟ್ರಾಕ್ಟರ್ ಯಾರು ಎಂಬುದೆ ನಂಗೆ ಗೊತ್ತಿಲ್ಲ. ಇನ್ನು ಲೂಟಿ ಎಲ್ಲಿಂದ ಬಂತು. ನಿಮ್ಮ ಹತ್ತಿರ ದಾಖಲಾತಿ ಇದ್ರೆ ಬಂದು ತೋರಿಸಿ. ನಾನು ೫ ರೂಪಾಯಿ ಪಡೆದಿದ್ದರೆ ತಕ್ಷಣ ಅಲ್ಲೆ ರಾಜಿನಾಮೆ ಘೋಷಿಸಿ ಮಾತಿನಂತೆ ನಡೆದುಕೊಳ್ಳುತ್ತೇನೆ. ಆ ತಾಕತ್ತು ಇದ್ದರೆ ಬಿಜೆಪಿಯವರು ಸಾಬೀತು ಪಡಿಸಲಿ ಎಂದರು. ೫ ಕೋಟಿ ರೂಪಾಯಿಗಳನ್ನು ಕುಡಿಯುವ ನೀರಿಗೆ ಪಟ್ಟಣಕ್ಕೆ ಅನುದಾನ ನೀಡಿದ್ದೇನೆ. ತಡೆಹಿಯಲಾಗಿದ್ದ ಎಸ್ಎಫ್ಸಿ ಅನುದಾನವನ್ನು ಮರುಮಂಜೂರು ಮಾಡಿಸಲಾಗಿದೆ.
ಬೇಕಿದ್ದರೆ ದಾಖಲೆ ಕೊಡಲು ಸಿದ್ಧ ಎಂದು ಕಟುವಾಗಿ ಟೀಕಿಸಿದರು.

ಬಿಜೆಪಿಯವರ ತಾರತಮ್ಯ ಪರಿಪಾಠವೆ ಮುಂದುವರೆದಿದೆ:

ಬಿಜೆಪಿ ಸದಸ್ಯರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅನುದಾನ ನೀಡುವಲ್ಲಿ ಬಿಜೆಪಿಯವರೆ ತಾರತಮ್ಯ ಮಾಡೋದು. ಇದಕ್ಕೆ ತಾಜಾ ಉದಾಹರಣೆ ಎಂದರೆ ಕಳೆದ ಒಂದು ವಾರದಲ್ಲಿ ಸಿಎಂ ಬೊಮ್ಮಾಯಿಯವರು ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತಲಾ ೫೦ ಕೋಟಿ ನೀಡಿದ್ದಾರೆ. ಆದರೆ ನಮಗೆ ಇಲ್ಲ. ಬಿಜೆಪಿಯವರೆ ಮಾಡಿದ ಪರಿಪಾಠದಂತೆ ತಾರತಮ್ಯ ಮುನ್ನಡೆದಿದೆ. ಹೆಚ್ಚು ಮತ ನೀಡಿದ್ದೆ ನನಗೆ ಕುಷ್ಟಗಿ ನಗರದಲ್ಲಿ. ಗ್ರಾಮೀಣವಾಗಲೀ ಅಥವಾಗ ನಗರವಾಗಲೀ ಯಾವುದೇ ತಾರತಮ್ಯವನ್ನು ನಾನು ಮಾಡುವದಿಲ್ಲ ಎಂದರು. ಚುನಾವಣೆ ಸಮೀಪ ಬಂದಾಗ ಮಾತ್ರ ಬಿಜೆಪಿ ಮುಖಂಡರಿಂದ ನಮ್ಮ ಮೇಲೆ ಆಪಾದನೆ ಬರುತ್ತವೆ. ನಾನು ಸಮಯ ಬಂದಾಗ ಅಟೆಂಡರ ಕೆಲಸವನ್ನು ಮಾಡುತ್ತೇನೆ. ಹಾಗೆಯೇ ಜಿಲ್ಲಾಧಿಕಾರಿಯವರು ಮಾಡಬೇಕಾದ ಕೆಲಸವನ್ನು ಸಹ ಮಾಡಬೇಕಾಗುತ್ತದೆ ಎಂದರು. ನಾನು ಎಂದೂ ಜಾತಿ ಬೇಧ, ಪಕ್ಷ ಎಂದು ತಾರತಮ್ಯವನ್ನು ಮಾಡಿಲ್ಲ. ಶಾಸಕನಾದ ಮೇಲೆ ಮರುದಿನವೇ ಸಮಾನತೆ ದೃಷ್ಟಿಯಿಂದ ಶ್ರಮಿಸಿ ಅಭಿವೃದ್ದಿಗೆ ಸಹಕರಿಸಿದ್ದೇನೆ ಎಂದು ನುಡಿದರು.

ತೊಗರಿ ಖರೀದಿ ಕೇಂದ್ರ ಬಂದ್; ತಹಶಿಲ್ದಾರಿಗೆ ತರಾಟೆ

ಕಳೆದ ಒಂದು ವಾರದಿಂದ ರೈತರ ತೊಗರಿ ಕೇಂದ್ರ ಬಂದ್ ಆಗಿದೆ ಎಂಬುದನ್ನು ಕೇಳಿದ ಶಾಸಕರು ತಕ್ಷಣ ತಹಶಿಲ್ದಾರ ಎಂ.ಸಿದ್ದೇಶ ಅವರಿಗೆ ಪೋನ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಕೂಡಲೇ ಖರೀದಿ ಕೇಂದ್ರದಲ್ಲಿ ರೈತರ ಮಾಲನ್ನು ಖರೀದಿಸಬೇಕು. ರೈತರು ಬೆಳೆದ ಮಾಲು ಸ್ವಲ್ಪ ವ್ಯಾತ್ಯಾಸ, ಕಳಪೆ ಬಂದರೂ ಸ್ವಲ್ಪ ಸಹಕರಿಸಬೇಕು ಎಂದರು. ಅಲ್ಲದೇ ರೈತರ ಬೆಳೆಯನ್ನು ಖರೀದಿಸಲೇಬೇಕು ಎಂದು ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ನೇಮಕಾತಿಯಲ್ಲಿ ಅನ್ಯಾಯ:

ಕಲ್ಯಾಣ ಕರ್ನಾಟಕ ಭಾಗಕ್ಕೆ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅನೇಕ ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಇದರ ಬಗ್ಗೆ ನಾನು ಮತ್ತು ಈಶ್ವರ ಖಂಡ್ರೆ ಚರ್ಚೆ ನಡೆಸಿ, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಶಾಸಕರನ್ನು ಒಗ್ಗೂಡಿಸಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಡಲಾಗಿದೆ ಮುಖ್ಯಮಂತ್ರಿಗಳು ಸಹ ಎಲ್ಲಕ್ಕು ಸ್ಪಂದನೆ ನೀಡಿದ್ದು ಕ್ರಮಕ್ಕೆ ಭರವಸೆ ನೀಡಿದ್ದಾರೆ. ಇತ್ತೀಚೆಗೆ ನಡೆದ ವ್ಯಾಸಾಯ ನೇಮಕಾತಿಯಲ್ಲೂ ಸಹ ಅನ್ಯಾಯವಾಗಿದ್ದು ನೇಮಕಾತಿಯನ್ನು ತಡೆಹಿಡಿಯುವಂತೆ ಮನವಿ ಮಾಡಲಾಗಿದೆ.

ಸೇವೆಯಲ್ಲಿರುವ ನೌಕರರಿಗೆ ಬಡ್ತಿಯಲ್ಲಿ ಪ್ರಮುಖವಾಗಿ ತೊಂದರೆಯಾಗುತ್ತಿದೆ. ಅದರಲ್ಲೂ ನೀರಾವರಿ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಬಡ್ತಿ ಕೊಟ್ಟಿರಲಿಲ್ಲ. ಹೀಗೆ ಕೆಲವು ನ್ಯೂನ್ಯತೆಗಳು ಇದ್ದು ಸರಿಪಡಿಸಲು ಮನವಿ ಮಾಡಲಾಗಿದೆ ಎಂದರು.

೧೫ ಸಾವಿರ ಶಿಕ್ಷಕರ ಹುದ್ದೆಗೆ ಸಿಎಂ ಅಸ್ತು:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಅತ್ಯಂತ ಹೆಚ್ಚು ಇದ್ದು, ಶಿಕ್ಷಕರ ನೇಮಕಾತಿಯಲ್ಲೂ ಸಹ ಅನ್ಯಾಯವಾಗುತ್ತಿದೆ. ಸದ್ಯ ರಾಜ್ಯದಲ್ಲಿ ೪೦ ಸಾವಿರ ಹುದ್ದೆ ಖಾಲಿ ಇವೆ. ಕೆಲವು ನಿಯಮಗಳನ್ನು ಸರಿಪಡಿಸಿ ಕೆಲವು ಬದಲಾವಣೆ ತಂದು ನೇಮಕಾತಿಗೆ ಆಹ್ವಾನಿಸಬೇಕೆಂದು ಮನವಿ. ಮಾಡಿದ ಪ್ರಯುಕ್ತ ಮಾನ್ಯ ಕಾನೂನು ಮಂತ್ರಿ ಮಾಧುಸ್ವಾಮಿ, ಹಾಗೂ ಸಿಎಂ ಬೊಮ್ಮಾಯಿಯವರು ೧೫ ಸಾವಿರ ಶಿಕ್ಷರ ಹುದ್ದೆಗಳ ನೇಮಕಾತಿಗೆ ಆದೇಶಿಸಿದ್ದು, ಜೂನ್ ಹೊತ್ತಿಗೆ ಕರೆಯಲಿದ್ದು, ಅದರಲ್ಲಿ ಕೆಕೆ ಭಾಗಕ್ಕೆ ೫ಸಾವಿರ ಆಧ್ಯತೆ ಸಿಗಲಿದೆ. ಜೂನ್ ಒಳಗೆ ಭರ್ತಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಇತ್ತೀಚಿಗೆ ನಡೆದ ೫೪೫ ಪಿಎಸ್ಸೈ ನೇಮಕಾತಿಯನ್ನು ತಡೆಹಿಡಿಯಬೇಕೆಂದು ಮನವಿ ನೀಡಲಾಗಿದೆ. ಇದರಲ್ಲೂ ಸಹ ಕೆಕೆ ಭಾಗದ ಅಭ್ಯರ್ತಿಗಳಿಗೆ ಬಹಳ ಅನ್ಯಾಯವಾಗಿದ್ದು, ಸುಮಾರು ೬೫ ಜನರಿಗೆ ಸಿಗಬೇಕಿತ್ತು ಆದರೆ ನೀಡಿಲ್ಲ. ಇದು ಕೇವಲ ಪೊಲಿಸ್ ಇಲಾಖೆಯಲ್ಲಿ ಅಷ್ಟೆ ಅಲ್ಲ ಎಲ್ಲಾ ಇಲಾಖೆಯ ನೇಮಕಾತಿಯಲ್ಲಿ ಸ್ಥಳೀಯ ವೃಂದಕ್ಕೆ ಆಧ್ಯತೆ ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪದ್ಮಶ್ರಿ ಪುರಸ್ಕೃತ ಸರ್ವ ಧರ್ಮ ಆಧ್ಯತ್ಮಕ ಚಿಂತಕ ದಿವಂಗತ ಇಬ್ರಾಹಿಂ ಸುತಾರ ಅವರಿಗೆ ಶ್ರಧ್ದಾಂಜಲಿ ಅರ್ಪಿಸಿದರು.

ಸಭೆಯಲ್ಲಿ ಮುಖಂಡರಾದ ಶೇಖರಗೌಡ ಮಾಲಿಪಾಟೀಲ, ಶಿವಶಂಕರಗೌಡ ಕಡೂರ, ಪರಶುರಾಮ ನಾಗರಾಳ, ದೊಡ್ಡಯ್ಯ ಗದ್ದಡಕಿ, ಶ್ಯಾಮರಾವ್ ಕುಲಕರ್ಣಿ ಇದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply