This is the title of the web page
This is the title of the web page

Please assign a menu to the primary menu location under menu

Local News

ಯಲ್ಲಮ್ಮನ ಗುಡ್ಡದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 10 ಜೋಡಿಗಳು


ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಪ್ತಪದಿ ಯೋಜನೆ ಅಡಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು.

ತಾಯಿ ಯಲ್ಲಮ್ಮನ ಸನ್ನಿಧಿಯಲ್ಲಿ 10 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು‌. ಈ ಹಿಂದೆ ಕೋವಿಡ್‌ ಹಾಗೂ ವಿಧಾನ ಪರಿಷತ್‌ ಚುನಾವಣೆ ಕಾರಣ ವಿವಾಹ ಮಹೋತ್ಸವವನ್ನು ಎರಡು ಬಾರಿ ಮುಂದೂಡಲಾಗಿತ್ತು. ಈಗ ಕೊರೊನಾ ಹಾವಳಿ ತಗ್ಗಿದ್ದರಿಂದ ಎಲ್ಲ ಕಾರ್ಯಗಳು ಸುಗಮವಾಗಿ ನೆರವೇರಿದವು.

ವಧುವಿಗೆ 40 ಸಾವಿರ ಮೌಲ್ಯದ ಚಿನ್ನದ ತಾಳಿ, ಮೂರು ಚಿನ್ನದ ಗುಂಡುಗಳ ಜತೆಗೆ ಧಾರೆಯ ಸೀರೆ, ರವಿಕೆ ಖರೀದಿಗಾಗಿ 10 ಸಾವಿರ ಪ್ರೋತ್ಸಾಹಧನ ನೀಡಲಾಗಿದೆ. ವರನಿಗೆ ಪಂಚೆ, ಶರ್ಟ್, ಶಲ್ಯಕ್ಕಾಗಿ 5 ಸಾವಿರ ನೀಡಲಾಯಿತು.

ಕಾರ್ಯಕ್ರಮವನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಉದ್ಘಾಟಿಸಿದರು. ಉಗರಗೋಳದ ಮಹಾಂತ ಸ್ವಾಮೀಜಿ ಬೈಲಹೊಂಗಲ ಎಸಿ ಶಶಿಧರ ಉಪಸ್ಥಿತರಿದ್ದರು.


Gadi Kannadiga

Leave a Reply