This is the title of the web page
This is the title of the web page

Please assign a menu to the primary menu location under menu

State

ಸ್ವಯಂ ಉದ್ಯಮ ಪ್ರಾರಂಭಿಸುವವರಿಗೆ ಹತ್ತು ದಿನಗಳ ತರಬೇತಿ : ಹೆಸರು ನೋಂದಾಯಿಸಲು ಸೂಚನೆ


ಕೊಪ್ಪಳ ಜನವರಿ ೧೮: ಸ್ವಯಂ ಉದ್ಯಮ ಪ್ರಾರಂಭಿಸುವವರಿಗೆ ಕೊಪ್ಪಳದಲ್ಲಿ ಹತ್ತು ದಿನಗಳ ತರಬೇತಿಗಾಗಿ ಆಸಕ್ತರು ತಮ್ಮ ಹೆಸರುಗಳನ್ನು ಜನವರಿ ೨೧ ರೊಳಗಾಗಿ ನೋಂದಾಯಿಸಿಕೊಳ್ಳಬೇಕು ಎಂದು ಕೊಪ್ಪಳ ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಸ್ವಯಂ ಉದ್ಯೋಗ ಪ್ರಾರಂಭಿಸಲು ಆಸಕ್ತರಿರುವರಿಗೆ ಕೊಪ್ಪಳದಲ್ಲಿ ಜನವರಿ ೨೩ ರಿಂದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ತರಬೇತಿಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಹಾಗೂ ಉದ್ಯಮ ನಿರ್ವಹಣೆ, ಉದ್ಯಮಶೀಲತೆ, ಉದ್ಯಮ ಪ್ರಾರಂಭದ ಹಂತಗಳು, ಉದ್ಯಮಗಳನ್ನು ಪ್ರಾರಂಭಿಸಲು ಸರ್ಕಾರದ ಯೋಜನೆಗಳು, ಸಾಲ ಸೌಲಭ್ಯಗಳು, ಬ್ಯಾಂಕ್ ಬಗ್ಗೆ, ಜಾಹಿರಾತು ಮತ್ತು ಮಾರುಕಟ್ಟೆಯ ಕುರಿತು, ನೋಂದಣೆ ಮಾಡುವ ವಿಧಾನಗಳು, ಯಶಸ್ವಿ ಉದ್ಯಮಿಗಳ ಜೊತೆ ಸಂವಾದ, ಉದ್ಯಮ ನಿರ್ವಹಣೆ ಮಾಡುವ ವಿಧಾನಗಳು ಮತ್ತು ಇತ್ಯಾದಿ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುವುದು, ಇದಕ್ಕಾಗಿ ಕೊಪ್ಪಳ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ೧೮ ವರ್ಷ ದಿಂದ ೪೦ ವರ್ಷ ವಯಸ್ಸಿನವರಾಗಿರಬೇಕು ಹಾಗೂ ಓದಲು/ಬರೆಯಲು ಬರುತ್ತಿರಬೇಕು. ಮಹಿಳೆಯರಿಗೆ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತರು ನೋಂದಣಿಯನ್ನು ಜನವರಿ ೨೧ ರೊಳಗಾಗಿ ಮೊಬೈಲ್ ಮುಖಾಂತರ ತಮ್ಮ ಹೆಸರುವನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೬೩೬೨೫೫೭೩೩೨/ ೬೩೬೨೬೮೧೧೯೦ ಈ ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Leave a Reply