WhatsApp Group
Join Now
ಬೆಳಗಾವಿ; ಸೊಡ್ಡಳ ಅಂಕಿತದಲ್ಲಿ 102 ವಚನಗಳು ಉಪಲಬ್ದವಾಗಿವೆ.ತತ್ವ ವಿವೇಚನೆ ನೀತಿಭೋದೆ ಅನ್ಯ ದೈವದೊಂದಿಗೆ ಶಿವಭಕ್ತಿ ನಿಷ್ಟೆ ಇವುಗಳಲ್ಲಿ ವ್ಯಕ್ತವಾಗಿವೆ ಎಂದು ಪೂಜ್ಯ ಕುಮಿದಿನಿ ತಾಯಿಯವರು ಹೇಳಿದರು.
ಅವರು ವಚನ ಪಿತಾಮಹ ಫಗುಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ 14.08.2025ರಂದು ಸೊಡ್ಡಳ ಬಾಚರಸರ ವಚನಗಳ ಕುರಿತುಉಪನ್ಯಾಸ ನೀಡಿದರು.
ಸೊಡ್ಡಳ ಬಾಚರಸರ ವಚನ ಹೇಳಿದರು.ಪೂಜ್ಯ ವಾಗ್ದೇವಿ ತಾಯಿಯವರು ಮಾತನಾಡುತ್ತಾ ಕಲ್ಯಾಣದ ಶರಣರು ಕಾಯಕ ಬಿಡುತ್ತಿರಲ್ಲಿಲ್ಲ.ಸೊಡ್ಡಳ ಬಾಚರಸ ಬಸವಣ್ಣವರಿಗೆ ತುಂಬ ಆಪ್ತರು.ಕಲ್ಯಾಣ ನಗರದ ಬಿಜ್ಡಳನ ಅರಮನೆಯ ಕಣಜದಿಂದ ದಾನ್ಯವನ್ನು ಅಳೆದು ಕೊಡುವ ಮತ್ತು ಕೊಟ್ಟಿದ್ದರ ಲೆಕ್ಕವನ್ನು ಬರೆಯುವ ಕರಣಿಕರಾಗಿದ್ದರು.ಇವರ ಕಾಲ1160 ಆಗಿತ್ತು.
ಶಿವಶರಣ ಶರಣೆಯರ ವಚನದಲ್ಲಿ ಹೇಳಿರುವ ಒಳ್ಳೆಯ ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾತಿನ ಚಪಲಕ್ಕಾಗಿಯೇ ಇಲ್ಲವೇ ಉದರ ಪಾಡಿಗಾಗಿಯೋ ವಚನದ ಸಂಗತಿಗಳನ್ನು ಇತರರ ಮುಂದೆ ಹಾಡಿ ಹೊಗಳುವ ವ್ಯಕ್ತಿಗಳು ಎಂದಿಗೂ ಶಿವನ ಒಲವಿಗೆ ಪಾತ್ರರಾಗಲಾರರು ಎಂದರು.
ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.ಶರಣೆ ಶ್ರೀದೇವಿ ಕಾಡಣ್ಣವರ ದಾಸೋಹ ಸೇವೆಗೈದರು.ಶರಣೆ ಸುಲೋಚನಾ ವಸ್ತ್ರದ, ಕಾಶೆಕ್ಕ ಯಮಕನಮರಡಿ,ಗುತ್ತಿಗೋಳಿ, ಮ೦ಗಳಾ ಕಾಗತಿಕರ,ಲೀಲಾವತಿ ರಾಚೋಟಿಮಠ, ರಾಜಶ್ರೀ ಖನಗಣಿ, ಶೋಭಾ ಅ೦ಗಡಿ, ಸುಜಾತಾ ಮತ್ತಿಕಟ್ಟಿ, ವಿದ್ಯಾ ಕರಕಿ, ಶಾಂತಾ ತಿಗಡಿ,ರತ್ನಾ ಬೆಣಚನಮರಡಿ,ಪ್ರೀತಿ ಗುರಯ್ಯ ಮಠದ,ಶೋಭಾ ದೇಯನ್ನವರ, ದೀಪಾ ಪಾಟೀಲ, ರತ್ನಾ ಮು೦ಗರವಾಡಿ,ಬಸವರಾಜ ಕರಡಿಮಠ,ಶಿವಾನಂದ ನಾಯಕ,ಶ೦ಕರ ಗುಡಗನಟ್ಟಿ,ವಿ.ಕೆ. ಪಾಟೀಲ,ಆನಂದ ಕರಕಿ,ಬಸವರಾಜ ಮತ್ತಿಕಟ್ಟಿ, ಮಹಾಂತೇಶ ಮೆಣಸಿನಕಾಯಿ,ಶರಣ ಶರಣೆಯರು ಉಪಸ್ಥಿತರಿದ್ದರು , ಆರಂಭದಲ್ಲಿ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡಿಸಿಕೊಟ್ಟರು. ಸುರೇಶ ನರಗುಂದ ಸ್ವಾಗತಿಸಿದರು ಸಂಗಮೇಶ ಅರಳಿ ನಿರೂಪಿಸಿದರು.ವಚನ ಮಂಗಲದೊಂದಿಗೆ ಸಂಪನ್ನಗೊಂಡಿತು.