This is the title of the web page
This is the title of the web page

Please assign a menu to the primary menu location under menu

Local News

೧೨೬೪ ಆಶ್ರಯ ಮೆನಗಳ ಶಂಕುಸ್ಥಾಪನೆಗೆ ಶಾಸಕರಿಂದ ಸ್ಥಳ ಪರಿಶೀಲನೆ


ಬೆಳಗಾವಿ ೧೭ : ದಿ ೧೭ ಬುಧವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ ಮಂಜೂರಾಗಿರುವ ೧೨೬೪ ಆಶ್ರಯ ಮನೆಗಳ ಶಂಕುಸ್ಥಾಪನೆಗೆ ನೆರವೇರಿಸುವ ಪ್ರಯುಕ್ತ ಅಲಾರವಾಡಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ಆಶ್ರಯ ರಹಿತರಿಗೆ ಆಶ್ರಯ ಮನೆಗಳನ್ನು ಒದಗಿಸುವ ಸಲುವಾಗಿ ಅವಿರತವಾಗಿ ಶ್ರಮಿಸಿದ ಶಾಸಕ ಅನಿಲ ಬೆನಕೆ ಅವರು ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ ಮಂಜೂರಾಗಿರುವ ೧೨೬೪ ಆಶ್ರಯ ಮನೆಗಳ ಶಂಕುಸ್ಥಾಪನೆ ಮಾಡುವ ಸಲುವಾಗಿ ಪೂರ್ವಬಾವಿಯಾಗಿ ಇಂದು ರಾಜೀವ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಎನ್. ಮಹಾದೇವ ಪ್ರಸಾದ ಹಾಗೂ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಮತ್ತು ಇತರ ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಅಲಾರವಾಡಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಂಜೂರಾಗಿರುವ ಆಶ್ರಯ ಮನೆಗಳ ಶಂಕುಸ್ಥಾಪನೆಗೆ ವಸತಿ ಸಚಿವರಾದ ಸನ್ಮಾನ್ಯ ವಿ. ಸೋಮಣ್ಣರವರು ಆಗಮಿಸುವವರಿದ್ದು, ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿನ ಎಲ್ಲರಿಗೂ ವಸತಿ ಯೋಜನೆಯಡಿ ಮನೆಗಳನ್ನು ನೀಡಲು ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ರಾಜೀವ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಎನ್. ಮಹಾದೇವ ಪ್ರಸಾದ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಸಾಮಾಜಿಕಕ ಅಭಿವೃಧ್ದಿ ತಜ್ಞರು ವಸತಿ ಯೋಜನೆ ಜಿಲ್ಲಾ ನಗರಾಭಿವೃಧ್ದಿ ಕೋಶ ಅಧಿಕಾರಿಯಾದ ಛಾಯಾ ಕೋಟಿ, ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜೂಶ್ರೀ ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply