ಬೆಳಗಾವಿ: ಇದೇ ಡಿಸೆಂಬರ್ ೫ ರಿಂದ ೮ ವರೆಗೆ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿ ಮಠದ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ನೇತೃತ್ವವನ್ನು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ.
ಸೋಮವಾರ ದಿನಾಂಕ 5 ರಂದು ಮುಂಜಾನೆ 9-30 ಗಂಟೆಗೆ ಅರಭಾವಿಯ ದುರದುಂಡೇಶ್ವರ ಪುಣ್ಯಾರಣ್ಯ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅದೇ ದಿವಸ ಸಂಜೆ 5:30 ಗಂಟೆಗೆ ಕನ್ನಡ ರಾಜ್ಯೋತ್ಸವ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ವಿಜಯಪುರ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕೋಡಿಯ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ, ಮುದುಗಲ್ ತಿಮ್ಮಾಪುರ ಕಲ್ಯಾಣ ಆಶ್ರಮದ ಶ್ರೀ. ಮಹಾಂತ ಸ್ವಾಮೀಜಿ ಅವರಿಗೆ ಈ ಸಂದರ್ಭದಲ್ಲಿ ಗೌರವ ಸನ್ಮಾನ ನೀಡಲಾಗುವುದು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಳಗಾವಿಯ ರಾಮಕೃಷ್ಣ ಮರಾಠೆ , ಶ್ರೀ ಶಂಕರ ಬುಚಡಿ , ಧಾರವಾಡದ ಶ್ರೀ ಶ್ರೀಶೈಲ ಹುದ್ದಾರ, ಜಾಗನೂರಿನ ಶ್ರೀ ಹನುಮಂತ ಹುಕ್ಕೇರಿ ಅವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅದೇ ರೀತಿ ಶ್ರೀಮಠದಿಂದ ಕೊಡ ಮಾಡುವ ,” ಕನ್ನಡ ನುಡಿಶ್ರೀ ” ಪ್ರಶಸ್ತಿಯನ್ನು ಬೆಂಗಳೂರಿನ ಶ್ರೀ ಗುರುದೇವ್ ನಾರಾಯಣ ಕುಮಾರ್ ಮತ್ತು ಮೈಸೂರಿನ ಶ್ರೀ ಬಿ.ಎ .ಶಿವಶಂಕರ ಅವರುಗಳಿಗೆ ನೀಡಿ ಸನ್ಮಾನಿಸಲಾಗುವುದು.
ಮಂಗಳವಾರ ದಿನಾಂಕ 6 ರಂದು ಸಂಜೆ 5:30 ಗಂಟೆಗೆ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಆತ್ಮ ಸ್ವಾಸ್ಥ್ಯ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕರ್ನಾಟಕ ಮಧ್ಯಪಾನ ಸಂಯಮ ಮಂಡಳಿಯಿಂದ ” ಸಂಯಮ ” ಪ್ರಶಸ್ತಿ ಪುರಸ್ಕೃತರಾದ ಭಾಲ್ಕೀಯ ಸಂಸ್ಥಾನ ಹಿರೇಮಠದ ಶ್ರೀ ಗುರುಬಸವ ಪಟ್ಟದೇವರ ಸಾನಿಧ್ಯದಲ್ಲಿ ಜರುಗುವ ಈ ಕಾರ್ಯಕ್ರಮದ ನೇತೃತ್ವವನ್ನು ಬೆಳಗಾವಿಯ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಹಿಸಲಿದ್ದಾರೆ, ಚಿಂಚಣಿಯ ಸಿದ್ದ ಸಂಸ್ಥಾನ ಮಠದ ಶ್ರೀ. ಅಲ್ಲಮಪ್ರಭು ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬೆಳಗಾವಿ ಕಾರಂಜಿ ಮಠದ ಕಿರಿಯ ಶ್ರೀಗಳಾದ ಡಾ.ಶಿವಯೋಗಿ ದೇವರಿಗೆ ಗೌರವ ಸನ್ಮಾನ ನೀಡಲಾಗುತ್ತಿದೆ. ನಾಗನೂರು ಮಠದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರೊ .ಎಂ .ಆರ್. ಉಳ್ಳೆಗಡ್ಡಿ ಅವರು ಅಧ್ಯಕ್ಷತೆ ವಹಿಸಲಿದ್ದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕುಲಪತಿ ಡಾ.ಕೆ.ಬಿ.ಗುಡಿಸಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನವದೆಹಲಿಯ ಡಾ. ಕುಲಜಿತ್ ಸಿಂಗ್ ಅವರಿಗೆ
“ಆತ್ಮಸ್ವಾಸ್ಥ್ಯ ಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅದೇ ರೀತಿ ಶ್ರೀಮಠದಿಂದ ಕೊಡ ಮಾಡಲಾಗುವ “ಪ್ರಸಾದ ಶ್ರೀ ” ಪ್ರಶಸ್ತಿಯನ್ನು ಬೈಲಹೊಂಗಲದ ಶ್ರೀ ಈರಣ್ಣ ಬಗನಾಳ , ಬೆಳಗಾವಿಯ ಶ್ರೀ ಬಸವರಾಜ್ ರೊಟ್ಟಿ , ಶ್ರೀ ಎನ್. ಬಿ .ಪಾಟೀಲ್ , ಬದಾಮಿಯ ನಿವೃತ್ತ ಜಿಲ್ಲಾ ಸರ್ಜನ್ ಡಾ . ಕರವೀರಪ್ರಭು ಕ್ಯಾಲಕೊಂಡ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಗುವುದು.
ಬುಧುವಾರ ದಿನಾಂಕ 7 ರಂದು ಸಂಜೆ 5-30 ಗಂಟೆಗೆ ಅಕ್ಕನ ಬಳಗದ ಅಮೃತ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಘಟಪ್ರಭಾ- ಮುಂಡರಗಿಯ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ನೇತೃತ್ವವನ್ನು ಬೆಲ್ಲದ ಬಾಗೇವಾಡಿ ವಿರಕ್ತಮಠದ ಶ್ರೀ. ಶಿವಾನಂದ ಮಹಾಸ್ವಾಮಿಗಳು ಮತ್ತು ಶೆಗುಣಿಶಿ ವಿರಕ್ತಮಠದ ಶ್ರೀ.ಮಹಾಂತ ಸ್ವಾಮಿಗಳು ವಹಿಸಲಿದ್ದಾರೆ. ಕರ್ನಾಟಕದ ಮುಜರಾಯಿ ಮತ್ತು ವಕ್ಫ್ ಖಾತೆ ಸಚಿವೆ ಶ್ರೀಮತಿ ಶಶಿಕಲಾ ಜಲ್ಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ,” ಧರೆಗಿಳಿದ ಶರಣಿಯರು “ಎಂಬ ಜಯಶ್ರೀ ನಿರಾಕರಿ ವಿರಚಿತ ಗ್ರಂಥವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬೆಳಗಾವಿ ಅಕ್ಕನ ಬಳಗದ ಅಧ್ಯಕ್ಷ ಶ್ರೀಮತಿ ಜಯಶ್ರೀ ನಿರಾಕರಿ ಅಧ್ಯಕ್ಷತೆ ವಹಿಸಲಿದ್ದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ .ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿಕೊಂಡ ನಿವೃತ್ತ ಪ್ರಾಚಾರ್ಯರುಗಳಾದ ಡಾ. ಎಫ್.ವಿ.ಮಾನವಿ ಮತ್ತು ಶ್ರೀ.
ಬಿ.ಎಸ್.ಗವಿಮಠ ಅವರುಗಳನ್ನು ಶ್ರೀಮಠದಿಂದ ವಿಶೇಷವಾಗಿ ಸತ್ಕರಿಸಲಾಗುತ್ತಿದೆ. ನಂತರ ಅಕ್ಕನ ಬಳಗದ ತಾಯಿಯಂದಿರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಗುರುವಾರ ದಿನಾಂಕ 8 ರಂದು ಮುಂಜಾನೆ 10:30 ಗಂಟೆಗೆ ಡಾ ಶಿವಬಸವ ಮಹಾಸ್ವಾಮಿಗಳವರ 133 ನೇ ಜಯಂತಿ ಶ್ರೀಮಠದಿಂದ ಕೊಡ ಮಾಡಲಾಗುವ ” ಸೇವಾ ರತ್ನ ” ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಡಾ. ಶಿವಬಸವ ಮಹಾಸ್ವಾಮಿಗಳವರ ವಸ್ತು ಸಂಗ್ರಹಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಲಿದ್ದು, ಅಧ್ಯಕ್ಷತೆಯನ್ನು ಶಿವಮೊಗ್ಗ ಬಸವ ಕೇಂದ್ರದ ಶ್ರೀ . ಬಸವ ಮರುಳಸಿದ್ದ ಮಹಾಸ್ವಾಮಿಗಳು ವಹಿಸಲಿದ್ದಾರೆ, ನೇತೃತ್ವವನ್ನು ಮಂಗಳೂರು ಶ್ರೀರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಏಕಗಮ್ಯಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ .ವಿದ್ಯಾಶಂಕರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶ್ರೀ ಮಠದಿಂದ ಕೊಡಲಾಗುವ. ” ಸೇವಾರತ್ನ ” ಪ್ರಶಸ್ತಿಯನ್ನು ಬೆಳಗಾವಿಯ ಶ್ರೀ ಎಂ ಎಸ್ ಚೌಗಲಾ ಶ್ರೀ ಅಡಿವೆಪ್ಪ ಬೆಂಡಿಗೇರಿ ಶ್ರೀ ರಮೇಶ್ ಜಂಗಲ್ ಶ್ರೀ ಪ್ರಭಯ್ಯ ಜಡಿಮಠ ಬೈಲಹೊಂಗಲದ ಶ್ರೀಮತಿ ಪ್ರೇಮಕ್ಕ ಅಂಗಡಿ ಧಾರವಾಡದ ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗುವದು. ಗದುಗಿನ ಲಿಂಗೈಕ್ಯ .ಶರಣಪ್ಪ ಬರಡಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುವುದು. ಗದುಗಿನ ಶ್ರೀಮತಿ ಸುಮಲತಾ ಸಂಗನಾಳ ಮಠ ವಿರಚಿತ ಡಾ. ಶಿವಬಸವ ಸ್ವಾಮೀಜಿ ಗ್ರಂಥ ಲೋಕಾರ್ಪಣೆ ನಡೆಯಲಿದೆ ಬೆಳಗಾವಿಯ ಆರ್ಕಿಟೆಕ್ಟ್ ಶ್ರೀ. ರಾಹುಲ್ ಪಾಟೀಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವದು.