This is the title of the web page
This is the title of the web page

Please assign a menu to the primary menu location under menu

Local News

ಬಿ.ವಿ.ವಿ ಸಂಘದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ 15 ರ‍್ಯಾಂಕ್


ಬಾಗಲಕೋಟೆ: ಬಸವೇಶ್ವರ ವೀರಶೈವ ವಿದ್ಯಾವರ್ಥಕ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ವ್ಯಾಪ್ತಿಯ ವಿವಿಧ ಮಹಾವಿದ್ಯಾಲಯಗಳಿಗೆ ಬಿ.ಎ, ಬಿಕಾಂ, ಬಿಎಸ್.ಸ್ಸಿ, ಬಿಸಿಎ, ಬಿಎಡ್, ಎಮ್.ಪಿ.ಎಡ್, ಎಂ.ಎ, ಎಮ್.ಎಸ್.ಸಿ, ಇತ್ಯಾದಿ ಕೋರ್ಸುಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು 15 ರ‍್ಯಾಂಕ್ ಗಳಿಸುವುದರ ಮೂಲಕ ಬಿವಿವಿ ಸಂಘಕ್ಕೆ ಕೀರ್ತಿ ತಂದಿದ್ದಾರೆ ಮತ್ತು ಸಂಘದ ಕಾರ್ಯಕ್ಷಮತೆಯನ್ನು ಸಾಕ್ಷಿಕರಿಸಿದ್ದಾರೆ.

ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಎಂ.ಎಸ್.ಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ರಶ್ಮಿ ಬಿಳಗಿ ಪ್ರಥಮ ಸ್ಥಾನ, ಬಿ.ಎಸ್.ಸ್ಸಿ ವಿಭಾಗದಲ್ಲಿ ಪ್ರಿಯಾಂಕಾ ಕೊಲುರ ಪ್ರಥಮ ಸ್ಥಾನ, ಐಶ್ವರ್ಯ ಹಿರೇಮಠ ದ್ವಿತೀಯ ಸ್ಥಾನ, ರಾಕೇಶ ಸೂಳಿಕೇರಿ ತೃತಿಯ ಸ್ಥಾನ ಮತ್ತು ದೀಪಾ ಕೊಂತಿಕಲ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಸಂಘದ ಇನ್ಸಿ÷್ಟಟ್ಯೂಟ್ ಆಫ್ ಮ್ಯಾನೇಜಮೇಂಟಿನ ಎಂ.ಬಿ.ಎ ವಿಭಾಗದಲ್ಲಿ ಗೌರಾ ಆನೆಪ್ಪಣವರ ಪ್ರಥಮ ಸ್ಥಾನ ಪಡೆದಿದ್ದರೆ, ಶಿಕ್ಷಣ ಮಹಾ ವಿದ್ಯಾಲಯದ ಎಮ್.ಎಡ್ ವಿಭಾಗದಲ್ಲಿ ಉಮಾ ಕೊಳ್ಳಿಯವರ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನು ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಎಂ.ಎ ಇಂಗ್ಲಿಷ್ ವಿಭಾಗದಲ್ಲಿ ಮುಬೀನಾ ನಾಗರದಿನ್ನಿ ಹಾಗೂ ಎಂ.ಎ ಕನ್ನಡ ವಿಭಾಗದಲ್ಲಿ ಕೊನವ್ವಾ ಚಿನ್ನಕ್ಕನವರ ದ್ವಿತಿಯ ಸ್ಥಾನ ಪಡೆದಿದ್ದು, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಎಮ್.ಪಿ.ಎಡ್ ವಿಭಾಗದಲ್ಲಿ ರ‍್ವಾ ಮಾದರಸಾಬ ದ್ವಿತೀಯ ಸ್ಥಾನ, ಕೃಷ್ಣಪ್ಪ ಸಾಂತಗೇರಿ ತೃತೀಯ ಸ್ಥಾನ ಗÀಳಿಸಿದ್ದಾರೆ.

ಮುಧೋಳದ ಎಸ್.ಆರ್ ಕಂಠಿ ಕಾಲೇಜಿನ ಎಂ.ಕಾಮ್ ವಿಭಾಗದಲ್ಲಿ ನೆಹಾ ಶಾಹ ದ್ವಿತೀಯ ಸ್ಥಾನ ಮತ್ತು ಬಿಎ ವಿಭಾಗದಲ್ಲಿ ಪ್ರೀತಿ ಪರೀಟ್ ದ್ವಿತೀಯ ಸ್ಥಾನ ಹಾಗೂ ಬಿ.ಕಾಮ್ ವಿಭಾಗದಲ್ಲಿ ನಾಯನೇಶ ಶಾಹ ಹತ್ತನೆ ಸ್ಥಾನ ಪಡೆದಿದ್ದು ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಮ್ ವಿಭಾಗದಲ್ಲಿ ಶ್ರೇಯಾ ಗೋಲಬಾವಿ ತೃತೀಯ ಸ್ಥಾನ ಮುಡಿಗೇರಿಸಿಕೊಂಡಿದ್ದಾರೆ.

ಬಸವೇಶ್ವರ ವೀರಶೈವ ವಿದ್ಯಾವರ್ಥಕ ಸಂಘದ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಒಟ್ಟು ನಾಲ್ಕು ಪ್ರಥಮ ಸ್ಥಾನಗಳು, ಆರು ದ್ವಿತೀಯ ಸ್ಥಾನಗಳು, ಮೂರು ತೃತೀಯ ಸ್ಥಾನಗಳು, ನಾಲ್ಕನೇ ಸ್ಥಾನಕ್ಕೆ ಒಂದು ಹಾಗೂ ಹತ್ತನೆ ಸ್ಥಾನಕ್ಕೆ ಒಂದು ರ‍್ಯಾಂಕ್ ಪಡೆದಿದ್ದು ಈ ಎಲ್ಲ ವಿದ್ಯಾರ್ಥಿಗಳಿಗೆ ಬಿವಿ ಸಂಘದ ಕಾರ್ಯಾಧ್ಯಕ್ಷ ಹಾಗೂ ಮಾನ್ಯ ಶಾಸಕರಾದ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಗುರುಬಸವ ಸೂಳಿಭಾವಿ, ಆಡಳಿತ ಮಂಡಳಿಯ ಸದಸ್ಯರು ಹಾಗೂ ವಿವಿಧ ಕಾಲೇಜಿನ ಪ್ರಾಚಾರ್ಯರು ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ ಅಭಿನಂದಿಸಿದ್ದಾರೆ.


Gadi Kannadiga

Leave a Reply