ಬೆಳಗಾವಿ: ಏಷ್ಯಾದಲ್ಲೇ ಅತೀ ದೊಡ್ಡ ಲಾಜಿಸ್ಟಿಕ್ಸ್ ಕಂಪನಿಯಾಗಿರುವ ವಿಆರ್ ಎಲ್ ಹೊಸದಾಗಿ 1600 ಹೊಸ ವಾಹನಗಳನ್ನು ಖರೀದಿಸಲು ಮುಂದಾಗಿದೆ. ಈ ಕುರಿತು ಈಗಾಗಲೆ ಬುಕ್ಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರಮನ್ ವಿಜಯ ಸಂಕೇಶ್ವರ ತಿಳಿಸಿದ್ದಾರೆ.
ಟಾಟಾ ಮೋಟಾರ್ಸ್ ನಿಂದ 1300 ವಾಹನಗಳು ಹಾಗೂ ಅಶೋಕ ಲೈಲ್ಯಾಂಡ್ ಕಂಪನಿಯಿಂದ 300 ವಾಹನಗಳನ್ನು ಖರೀದಿಸಲಾಗುತ್ತಿದೆ. ಇದಕ್ಕಾಗಿ 500ರಿಂದ 600 ಕೋಟಿ ರೂ. ಬಂಡವಾಳ ಹೂಡಲಾಗುತ್ತಿದೆ. ಒಂದು ವರ್ಷದೊಳಗೆ ಈ ವಾಹನಗಳು ವಿಆರ್ ಎಲ್ ಮಡಿಲಿಗೆ ಸೇರಲಿವೆ ಎಂದು ಸಂಕೇಶ್ವರ ತಿಳಿಸಿದರು.
ಈ ಕುರಿತು ಪ್ರಕಟಣೆ ನೀಡಿರುವ ಟಾಟಾ ಮೋಟಾರ್ಸ್, ಭಾರತದಲ್ಲಿ ವಿಆರ್ ಎಲ್ ಲಾಜಿಸ್ಟಿಕ್ಸ್ ನ ವಾಣಿಜ್ಯ ವಾಹನಗಳ ಪಡೆಯ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಭಾರತದಲ್ಲಿನ ಮೇಲ್ಮೈ ಲಾಜಿಸ್ಟಿಕ್ಸ್ನಲ್ಲಿ ಮುಂಚೂಣಿಯಲ್ಲಿರುವ ವಿಆರ್ ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ನಿಂದ 1,300 ವಾಣಿಜ್ಯ ವಾಹನಗಳ ಆರ್ಡರ್ ಅನ್ನು ಪಡೆದುಕೊಂಡಿದೆ ಎಂದು ತಿಳಿಸಿದೆ.