This is the title of the web page
This is the title of the web page

Please assign a menu to the primary menu location under menu

Local News

“ಗೃಹಲಕ್ಷ್ಮೀ” ಯೋಜನೆ ಸೌಲಭ್ಯ ವಿತರಣಾ ಕಾರ್ಯಕ್ರಮ ಆ.೩೦ ರಂದು ಲ್ಲೆಗೆ ೧೯೫.೬೩ ಕೋಟಿ ಮೊದಲ ಹಂತದ ಅನುದಾನ ಬಿಡುಗಡೆ


ಬೆಳಗಾವಿ, ಆ.೨೯ : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯನ್ನು ಅಗಸ್ಟ್ ೩೦ ರಂದು ಮೈಸೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳು, ಇಲಾಖಾ ಸಚಿವರು ಹಾಗೂ ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ.
ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಖಿತಿo Wಚಿಥಿ Iಟಿಣeಡಿಚಿಛಿಣioಟಿ ಮಾಡಲು ಬೆಳಗಾವಿ ತಾಲೂಕು ಹಿರೇಬಾಗೆವಾಡಿಯ ಶಿವಾಲಯ ಕಲ್ಯಾಣ ಮಂಟಪ ಹಾಗೂ ಬೆಳಗಾವಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಬುಧವಾರ (ಆ.೩೦) ಬೆಳಿಗ್ಗೆ ೧೧. ೩೦ ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ.
ಸದರಿ ಕಾರ್ಯಕ್ರಮಕ್ಕೆ ಎಲ್ಲಾ ಫಲಾನುಭವಿಗಳು, ಸಾರ್ವಜನಿಕರು ಭಾಗಿಯಾಗಲು ಹಾಗೂ ಪ್ರತಿ ಗ್ರಾಮ ಪಂಚಾಯತ ಹಂತದಲ್ಲಿ ಮೈಸೂರಿನಿಂದ ಕಾರ್ಯಕ್ರರ್ಮದ ನೇರ ಪ್ರಸಾರವನ್ನು ವೀಕ್ಷಿಸಲು ಒಂದು ಟಿವ್ಹಿ/ಎಲ್.ಇ.ಡಿ ಪರದೆ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ೨೦೦೦ ಫಲಾನುಭವಿಗಳು ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ಚುನಾಯಿತ ಪ್ರತಿ ನಿಧಿಗಳು, ಸಂಸದರು, ಪರಿಷತ್ ಸದಸ್ಯರು ಎಲ್ಲರನ್ನು ಆಹ್ವಾನಿಸಿ ಯೋಜನೆಗೆ ಚಾಲನೆಯನ್ನು ನೀಡುವಂತೆ ಕ್ರಮವಹಿಸಲಾಗಿದೆ. ಖಿತಿo Wಚಿಥಿ Iಟಿಣeಡಿಚಿಛಿಣioಟಿನ್ನು ಆಯೋಜಿಸಿದ ಸ್ಥಳಗಳಲ್ಲಿ ತಾಂತ್ರಿಕ ಸಲಹೆಗಾರರ ಸಹಾಯದೊಂದಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಗ್ರಾಮಗಳಲ್ಲಿಯೂ ದಿನಾಂಕ:೩೦-೦೮-೨೦೨೩ ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ಮಾಡಲು ಹಾಗೂ ಕಾರ್ಯಕ್ರಮದ ಬ್ಯಾನರ್‌ಗಳನ್ನು ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ಜರುಗಿಸಲಾಗಿದೆ. ಕಾರ್ಯಕ್ರಮ ನಡೆಯುವ ಪ್ರತಿಯೊಂದು ಸ್ಥಳದಲ್ಲಿಯೂ ಹಬ್ಬದ ವಾತಾವರಣ ಮೂಡಿಸಿ ಪ್ರತಿಯೊಂದು ಮನೆಯ ಮುಂದೆ “ನಾನೇ ಯಜಮಾನಿ ನಾನೇ ಗೃಹಲಕ್ಷ್ಮೀ” ಎಂಬ ಧ್ಯೇಯ ವಾಕ್ಯದ ರಂಗೋಲಿ ಬಿಡಿಸುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಕುಟುಂಬದ ನಿರ್ವಹಣೆಯ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು ರೂ.೨೦೦೦/- ಗಳನ್ನು ನೇರ ನಗದು ವರ್ಗಾವಣೆ ಮೂಲಕ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಅಗಸ್ಟ್ ೩೦ ರಂದು ರಾಜ್ಯಾದ್ಯಾಂತ ಏಕಕಾಲಕ್ಕೆ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೫೦೦ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ೩೯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯಲ್ಲಿ ಒಟ್ಟು ೧೧೮೭೪೬೯ ಮಹಿಳೆಯರು ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಿದ್ದು, ಇಲ್ಲಿಯವರೆಗೆ ೯೯೭೪೬೦ ಕುಟುಂಬದ ಯಜಮಾನಿ ಮಹಿಳೆಯರು ನೊಂದಣಿಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇಕಡಾ ೮೪.೦೦% ರಷ್ಟು ಸಾಧನೆಯನ್ನು ಮಾಡಲಾಗಿರುತ್ತದೆ.
ಜಿಲ್ಲೆಗೆ ಮೊದಲ ಹಂತದ ಅನುದಾನ ರೂ. ೧೯೫.೬೩ ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ಇಲ್ಲಿಯವರೆಗೆ ೧೭೨.೦೦ ಕೋಟಿ ಆರ್ಥಿಕ ಸಾಧನೆಯನ್ನು ಸಾಧಿಸಲಾಗಿದೆ. ಒಟ್ಟು ೮೬೦೦೦೦ ಫಲಾನುಭವಿಗಳಿಗೆ ೨೦೦೦ ರೂ.ಗಳ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಆರ್. ನಾಗರಾಜ ಅವರು ತಿಳಿಸಿರುತ್ತಾರೆ. ಯೋಜನೆಯ ಅಧಿಕೃತ ಚಾಲನೆಯ ಪೂರ್ವಭಾವಿ ಸಿದ್ದತೆ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಬೆಳಗಾವಿ ಇವರು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳಿಗೆ ಸಭೆ ನಡೆಸಿ ಪೂರ್ವಬಾವಿ ಸಿದ್ದತೆಯನ್ನು ಮಾಡಿಕೊಳ್ಳುವ ಕುರಿತು ಸಲಹೆ ಸೂಚನೆಗಳನ್ನು ಹಾಗೂ ಮಾರ್ಗದರ್ಶನಗಳನ್ನು ನೀಡಿರುತ್ತಾರೆ.
ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಅಧೀಕೃತ ಚಾಲನೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ತಿಳಿಸಿರುತ್ತಾರೆ.


Leave a Reply