This is the title of the web page
This is the title of the web page

Please assign a menu to the primary menu location under menu

Local News

೨೦೨೧-೨೨ನೇ ಸಾಲಿನ ಬೆಳಗಾವಿ ಸಿ.ಜಿ.ಎಸ್.ಟಿ ಆಯುಕ್ತಾಲಯದಿಂದ ಒಟ್ಟು ೧೦,೧೭೨ ಕೋಟಿ ಜಿ.ಎಸ್.ಟಿ ಸಂಗ್ರಹ


ಬೆಳಗಾವಿ,ಜೂನ್೩೦: ಜುಲೈ ೧ ರಂದು ಜಿ.ಎಸ್.ಟಿ ಜಾರಿಯಾಗಿ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ಹಿನ್ನೆಲೆ ಹಣಕಾಸು ಸಚಿವಾಲಯ, ಕಂದಾಯ ಇಲಾಖೆ, ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿಯು “ಉSಖಿ@೫:ಸಾಧನ್, ದೇಶ ಕೆ ಸರ್ವಾಂಗೀನ್ ವಿಕಾಸ್ ಕಾ” ಆಚರಿಸುತ್ತಿದೆ. ಈ ಹಿನ್ನೆಲೆ ಬೆಳಗಾವಿಯ ನೆಹರು ನಗರದ ಕೆ.ಎಲ್.ಇ ಕನ್ವೆನ್ಷನ್ ಸೆಂಟರ್ ನಲ್ಲಿ ಶುಕ್ರವಾರ(ಜುಲೈ೧) ಐದನೇ ಜಿ.ಎಸ್.ಟಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ, ಜೂನಿಯರ್ ಲೀರ‍್ಸ್ ವಿಂಗ್‌ನ ಮೇಜರ್ ಜನರಲ್ ಪರಮದೀಪ ಸಿಂಗ್ ಬಜ್ವಾನ್ ಅತಿಥಿಗಳಾಗಿ ಭಾಗವಹಿಸಲಿದ್ದು ಜೆಎಸ್‌ಡಬ್ಲೂö್ಯ ಗ್ರೂಪ್‌ನ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿನೀತ್ ಅಗರವಾಲ್ ಮಾತನಾಡಲಿದ್ದಾರೆ. ನೀಡಲಿದ್ದಾರೆ. ಬೆಳಗಾವಿ ಜಿಎಸ್‌ಟಿ ಕಮಿಷನರ್‌ಬಸವರಾಜ್ ನಾಲೇಗಾವಿ ಅಧ್ಯಕ್ಷತೆ ವಹಿಸಲಿದ್ದಾರೆ.
ಉತ್ತರ ಕರ್ನಾಟಕದ ೧೨ ಜಿಲ್ಲೆಗಳಲ್ಲಿ ಹರಡಿರುವ ತೆರಿಗೆದಾರರ ಅಸಾಧಾರಣ ಕಾರ್ಯಕ್ಷಮತೆಯನ್ನು ಹಾಗೂ ಬೆಳಗಾವಿ ಸಿ.ಜಿ.ಎಸ್.ಟಿ ಆಯುಕ್ತಾಲಯದ ಅಧಿಕಾರಿಗಳ ಶ್ಲಾಘನೀಯ ಸಾಧನೆಯನ್ನು ಗುರುತಿಸಿ, ವ್ಯಾಪಾರ ಮತ್ತು ಉದ್ಯಮದ ವಿವಿದ ಪಾಲುದಾರರೊಂದಿಗೆ ಸಂವಹನ ನಡೆಸಲು ಒಂದು ವೇದಿಕೆಯಾಗಿದೆ.
೨೦೨೧-೨೨ ರ ಹಣಕಾಸು ವರ್ಷದಲ್ಲಿ ಜಿ.ಎಸ್.ಟಿ ಸಂಗ್ರಹವು ದೃಢವಾದ ಆರ್ಥಿಕ ಬೆಳವಣಿಗೆಯ ಸಂಕೇತವಾಗಿ ಹೊಸ ಎತ್ತರವನ್ನು ಕಂಡಿದೆ. ಅಖಿಲ ಭಾರತ ಮಟ್ಟದಲ್ಲಿ ಕರ್ನಾಟಕ ವಲಯವು ೪೮,೪೪೦ ಕೋಟಿ ರೂಪಾಯಿ ಜಿ.ಎಸ್.ಟಿ ಸಂಗ್ರಹಿಸಿದೆ. ಮುಂಬೈ ವಲಯದ ನಂತರದ ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ.
ಕರ್ನಾಟಕದೊಳಗೆ ಬೆಳಗಾವಿ ಸಿ.ಜಿ.ಎಸ್.ಟಿ ಆಯುಕ್ತಾಲಯ ಹಿಂದಿನ ವರ್ಷದ ೭,೧೨೪ ಕೋಟಿ ರೂಪಾಯಿ ಹೋಲಿಸಿದರೆ, ೨೦೨೧-೨೨ ನೇ ವರ್ಷಕ್ಕೆ ೧೦,೧೭೨ ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಆದಾಯವನ್ನು ಸಂಗ್ರಹಿಸಿದೆ. ಹಿಂದಿನ ವರ್ಷದ ಸಂಗ್ರಹಕ್ಕಿಂತ ಶೇ ೪೩ ರಷ್ಟು ಹೆಚ್ಚು ಆಗಿದೆ. ಒ/s. ಎSW ಸ್ಟೀಲ್ ಲಿಮಿಟೆಡ್, ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜಿ.ಎಸ್.ಟಿ ಪಾವತಿಸುವ ಉದ್ಯಮವಾಗಿದೆ. ೨೦೨೧-೨೨ ನೇ ಸಾಲಿನಲ್ಲಿ ೩,೯೭೪ ಕೋಟಿ ಜಿ.ಎಸ್.ಟಿ ಪಾವತಿಸುವ ಮೂಲಕ ಬೆಳಗಾವಿ ಆಯಿಕ್ತಾಲಯದಲ್ಲಿ ಹೆಚ್ಚಿನ ಆದಾಯಕ್ಕೆ ಕೊಡುಗೆ ನೀಡಿದೆ. ಇದು ರೋಮಾಂಚಕ ಮತ್ತು ದೃಢವಾದ ಆರ್ಥಿಕತೆ ಬೆಳವಣಿಗೆ ಸಂಕೇತವಾಗಿದೆ.
ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರ, ಯಾದಗಿರು, ಕಲಬುರ್ಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಆರ್ಥಿಕ ಚಟುವಟಿಕೆಗಳು ಬೆಳಗಾವಿ ಸಿ.ಜಿ.ಎಸ್.ಟಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಒಳಗೊಂಡಿವೆ. ಬೆಳಗಾವಿ ಸಿ.ಜಿ.ಎಸ್.ಟಿ ಆಯುಕ್ತಾಲಯ ಕರ್ನಾಟಕ ವಲಯದಲ್ಲಿ ಅತೀ ದೊಡ್ಡ ಆಯುಕ್ತಾಲಯವಾಗಿದೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ, ಬೆಳಗಾವಿ ಸಿ.ಜಿ.ಎಸ್.ಟಿ ಆಯುಕ್ತಾಲಯ ತೆರಿಗೆದಾರರ ಅನುಸರಣೆಗೆ ಅನುಕೂಲವಾಗುವಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ, ವ್ಯಾಪಾರ ಸಂಸ್ಥೆಗಳ ಸದಸ್ಯರೊಂದಿಗೆ ವ್ಯಾಪಕವಾದ ಸಂವಾದ, ಸಮಸ್ಯೆಗಳನ್ನು ಆಲಿಸುವುದು, ಮಾರ್ಗದರ್ಶನ ನೀಡುವುದು ಮತ್ತು ಅವುಗಳನ್ನು ಪರಿಹರಿಸುವುದು, ಜಿ.ಎಸ್.ಟಿ ಮರುಪಾವತಿ ತ್ವರಿತವಾಗಿ ಮಂಜೂರು ಮಾಡುವ ಮೂಲಕ ಕಾರ್ಯನಿರತ ಬಂಡವಾಳದ ಸಕಾಲಿಕ ಲಭ್ಯತೆಯನ್ನು ಖಾತ್ರಿಪಡಿಸುವುದು. ರಾಷ್ಟ್ರದ “ಆಜಾದಿ ಕಾ ಅಮೃತ್ ಮಹೋತ್ಸವ” ದ ಭಾಗವಾಗಿ, ಜಿ.ಎಸ್.ಟಿ ಭವನ, ಕ್ಲಬ್ ರಸ್ಥೆ, ಬೆಳಗಾವಿ ಹಾಗೂ ವಿಭಾಗೀಯ ಕಚೇರಿಗಳಲ್ಲಿ ವ್ಯಾಪಾರ ಮತ್ತು ಉದ್ಯಮಕ್ಕೆ ಸಹಾಯ ಮಾಡಲು ತೆರಿಗೆದಾರರ ಅನುಕೂಲ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಹಾಯಕ ಆಯುಕ್ತ ಸಂದರ್ ರಾಜು ಸಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply