This is the title of the web page
This is the title of the web page

Please assign a menu to the primary menu location under menu

Local News

೨೦೨೨-೨೩ ನೇ ಸಾಲಿನ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ


ಬೆಳಗಾವಿ, ಡಿ.೦೬ : ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಬೆಳಗಾವಿ ಇವರು ಬೆಳಗಾವಿ ಜಿಲ್ಲೆಗಾಗಿ ೨೦೨೨-೨೩ ನೇ ಸಾಲಿಗಾಗಿ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಯುವ ಮಂಡಳಗಳು ಕರ್ನಾಟಕ ಸಂಘ ಸಂಸ್ಥೆಗಳ ಕಾಯ್ದೆ ೧೯೬೦ ರ ಅಡಿಯಲ್ಲಿ ನೋಂದಣಿಯಾಗಿರಬೇಕು ಮತ್ತು ನೆಹರು ಯುವ ಕೇಂದ್ರ ಬೆಳಗಾವಿ ಕಛೇರಿಯಲ್ಲಿ ಸಂಯೋಜನೆಗೊಂಡಿರಬೇಕು. ಹಾಗೂ ದಿನಾಂಕ: ೦೧-೦೪-೨೦೨೧ ರಿಂದ ೩೧-೦೩-೨೦೨೨ ರ ಅವಧಿಯಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಮಾಡಿರಬೇಕು. ಅಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪರಿಸರ ಸೌಂರಕ್ಷಣೆ, ವೃತ್ತಿ ತರಬೇತಿ, ಸಾಕ್ಷರತೆ, ಮಹಿಳಾ ಸಬಲೀಕರಣ ಸಾಂಸ್ಕೃತಿಕ ಕಾರ್ಯಕ್ರಮ, ಸ್ವಯಂ ಉದ್ಯೋಗ, ಸಾಮಾಜಿಕ ಪಿಡುಗುಗಳು, ಕ್ರೀಡೆಗಳು ಹಾಗೂ ಸಮಾಜ ಕಲ್ಯಾಣಗಳ ಬಗ್ಗೆ ಯುವ ಮಂಡಳಗಳು ಕೆಲಸ ಮಾಡಿರಬೇಕು.ಈ ಕುರಿತು ಸಂಬಂಧಿಸಿದ ದಾಖಲೆಗಳು ಇರಬೇಕು.
ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿ ರೂ.೨೫,೦೦೦ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಬೆಳಗಾವಿ ಜಿಲ್ಲೆಯ ಆಸಕ್ತ ಹಾಗೂ ಅರ್ಹ ಯುವಕ/ತಿ/ಮಹಿಳಾ ಮಂಡಳಗಳು ಜಿಲ್ಲಾ ಯುವ ಅಧಿಕಾರಿಗಳು ನೆಹರು ಯುವ ಕೇಂದ್ರ, ಅನ್ನಪೂರ್ಣ ನಿಲಯ, ೧ನೇ ಕ್ರಾಸ್ ಮಹಾಂತೇಶ ನಗರ ಬೆಳಗಾವಿಯಲ್ಲಿ ನಿಗದಿತ ಅರ್ಜಿ ನಮೂನೆಗಳನ್ನು ಪಡೆಯಬಹುದು.
ಪೂರ್ಣವಾದ ಅರ್ಜಿಗಳನ್ನು ಪ್ರಸ್ತಾವಣೆಯೊಂದಿಗೆ ಅಗತ್ಯ ದಾಖಲಾತಿಗಳು ಸೇರಿದಂತೆ ೨೦೨೧-೨೨ರ ಅಡಿಟ್ ರಿಪೋರ್ಟ ಇರಬೇಕು. ರಿನಿವಲ್ ಪ್ರಮಾಣ ಪತ್ರ ಹೊಂದಿರಬೇಕು, ಪೇಪರ್ ಕಟಿಂಗ್ ಪ್ರಮಾಣ ಪತ್ರಗಳು, ಕಾರ್ಯಕ್ರಮದ ಫೋಟೋ ಇತ್ಯಾದಿಗಳನ್ನು ಲಗತ್ತಿಸಿ ದಿನಾಂಕ ಡಿಸೆಂಬರ್ ೧೦ರ ಒಳಗಾಗಿ ನೆಹರು ಯುವ ಕೇಂದ್ರ, ಬೆಳಗಾವಿ ಸಿ,ಟಿ,ಎಸ್, ನಂ:೯೬೬೩ ಪ್ಲಾಟ್ ನಂ : ೨೩೬೭ ಅಣ್ಣಪೂರ್ಣ ನಿಲಯ, ೧ನೇ ಕ್ರಾಸ್, ಮಹಾಂತೇಶ ನಗರ, ಬೆಳಗಾವಿ ಈ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ವiಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೧-೨೪೫೩೪೯೬ ಗೆ ಸಂಪರ್ಕಿಸಬಹುದು ಬೆಳಗಾವಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ರೋಹಿತ ಕಲರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply