ಗದಗ ಅಕ್ಟೋಬರ್ : ೨೦೨೨-೨೩ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಇ-ಸ್ಕಾಲರ್ಶಿಫ್ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಪ್ರಿ-ಮೇಟ್ರಿಕ್ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅಕ್ಟೋಬರ್ ೧೫ ರವರೆಗೆ ವಿಸ್ತರಿಸಲಾಗಿದೆ. ಪೋಸ್ಟ್-ಮೇಟ್ರಿಕ್ ವಿದ್ಯಾರ್ಥಿಗಳ ಹಾಗೂ ಟಾಪ್-ಕ್ಲಾಸ್ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ ೩೧ ಆಗಿರುತ್ತದೆ.
ವಿಕಲಚೇತನ ವಿದ್ಯಾರ್ಥಿಗಳು hಣಣಠಿs://sಛಿhoಟಚಿಡಿshiಠಿs.gov.iಟಿ ಅಥವಾ ಟಿಚಿಣioಟಿಚಿಟ sಛಿhoಟಚಿಡಿshiಠಿ ಠಿoಡಿಣಚಿಟ ಈ ಜಾಲತಾಣದಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ತಮ್ಮ ವ್ಯಾಪ್ತಿಗೊಳಪಡುವ ಗ್ರಾ.ಪಂ. ವಿ.ಆರ್.ಡಬ್ಲುö್ಯ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ಯುಆರ್ ಡಬ್ಲುö್ಯ, ತಾ.ಪಂ. ಎಂ.ಆರ್.ಡಬ್ಲುö್ಯಇವರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಖಾಜಾಹುಸೇನ. ಕಾತರಕಿ. ತಾಲ್ಲೂಕ ಪಂಚಾಯತ್, ಗದಗ – ೮೮೬೭೫೫೬೪೬೫ ; ಬಸವರಾಜ. ಓಲಿ. ತಾಲ್ಲೂಕ ಪಂಚಾಯತ್, ರೋಣ – ೯೭೪೧೬೧೫೯೨೬, ಶಶಿಕಲಾ. ವಡ್ಡಟ್ಟಿ. ತಾಲ್ಲೂಕ ಪಂಚಾಯತ್, ಮುಂಡರಗಿ – ೯೬೧೧೯೨೨೪೪೫,ಭಾರತಿ. ಮುರಶಿಳ್ಳಿ. ತಾಲ್ಲೂಕ ಪಂಚಾಯತ್, ಶಿರಹಟ್ಟಿ-೮೯೫೧೧೨೮೬೭೯ ; ಶಿವಾನಂದ ಹಾದಿಮನಿ. ತಾಲ್ಲೂಕ ಪಂಚಾಯತ್, ನರಗುಂದ – ೯೫೯೧೬೭೯೦೨೨ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗದಗ ಜಿಲ್ಲಾಡಳಿತ ಭವನ, ರೂಮ್ ನಂ:೨೯ ರಲ್ಲಿನ ವಿಕಲಚೇತನರ ಮಾಹಿತಿ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ ೦೮೩೭೨-೨೨೦೪೧೯ ಮೂಲಕ ಸಂಪರ್ಕಿಸಬಹುದಾಗಿದೆ.
Gadi Kannadiga > State > ೨೦೨೨-೨೩ನೇ ಸಾಲಿನ ಕೇಂದ್ರ ಸರ್ಕಾರದ ನ್ಯಾಷನಲ್ ಇ-ಸ್ಕಾಲರ್ಶಿಪ್ ಅರ್ಜಿ