ಬೆಳಗಾವಿ: ದೇಶವ್ಯಾಪಿ ಪಾದಯಾತ್ರೆ ಮಾಡುವ ಮೂಲಕ ದೇಶದ ಜನರಲ್ಲಿ ರಕ್ತದಾನದ ಅರಿವು ಮೂಡಿಸಲು ಹೊರಟ ದೆಹಲಿ ಮೂಲದ ಕಿರಣವರ್ಮ.
ದೇಶದಲ್ಲಿ ರಕ್ತದ ಕೊರತೆಯಿಂದ ನೂರಾರು ರೋಗಿಗಳು ಜೀವ ಕಳೆದುಕೊಳ್ಳುತ್ತಿವೆ,, ಮೊನ್ನೆ ಕರೋನಾ ಸಂಧರ್ಭದಲ್ಲಿ ಬಿಳಿ ರಕ್ತಕಣಗಳ ಕೊರತೆಯಿಂದಾಗಿ ಸಾವಿರಾರು ಜನ ಸಮಸ್ಯಗಳಿಗೆ ಸಿಲುಕಿದರು, ಇಂತಾ ನಮ್ಮ ದೊಡ್ಡ ದೇಶದಲ್ಲಿ ರಕ್ತದಾನದ ಅರಿವು ಮೂಡಿಸುವುದು ತುಂಬಾ ಅವಶ್ಯಕತೆ ಇದೆ, ಅದಕ್ಕಾಗಿಯೇ ನಾನು 21 ಸಾವಿರ ಕೀ ಮೀ ದೇಶ ಸಂಚರಿಸಿ ರಕ್ತದಾನದ ಅರಿವು ಮೂಡಿಸಬೇಕೆಂದು ಅಂದುಕೊಂಡಿದ್ದೇನೆ ಎಂದು ಹೇಳಿದರು.
ದೇಶದ ಬಹುತೇಕ ಜನರಿಗೆ ನನ್ನ ಈ ಪಾದಯಾತ್ರೆ ಮೂಲಕ ರಕ್ತದಾನದ ಮಹತ್ವ ತಿಳಿಸಬೇಕು, ಮತ್ತು ಯಾರೂ ರಕ್ತದ ಕೊರತೆಯಿಂದ ಜೀವ ಕಳೆದುಕೊಳ್ಳಬಾರದು ಎಂಬುದೇ ನನ್ನ ಗುರಿ ಎಂದರು.
ನನ್ನ ಈ ಪಾದಯಾತ್ರೆ 28/12/2021 ರಂದು ತ್ರಿವೆಂದ್ರಮ ಪ್ರಾರಂಭವಾಗಿ ಕೇರಳ, ತಮಿಳ್ನಾಡು, ಕರ್ನಾಟಕದ ಮಂಡ್ಯ, ಮೈಸೂರು, ಹಾಸನ್ ಈಗ ಬೆಳಗಾವಿ, ಹೀಗೆ ಮುಂದೆ ಪಾದಯಾತ್ರೆ ಸಾಗುತ್ತದೆ.
ಹೀಗೆ ಮುಂದುವರೆದು ದೇಶದ ಪ್ರತಿ ರಾಜ್ಯ ಜಿಲ್ಲೆಗಳಿಗೆ ಬೇಟಿ ನೀಡಿ, ಜನರಲ್ಲಿ ರಕ್ತದಾನ ಮಾಡುವ ಜಾಗೃತಿ ಮೂಡಿಸುತ್ತದೆ ಎಂದರು.
ಈಗ ನಾಲ್ಕು ತಿಂಗಳಲ್ಲಿ ನಾನು ಸುಮಾರು 3500 ಕೀ ಮೀ ಪಾದಯಾತ್ರೆ ಮಾಡಿದ್ದು, ಇದರಲ್ಲಿ 26 ರಕ್ತದಾನ ಶಿಬಿರಗಳನ್ನು ಮಾಡಿದ್ದು, ಸುಮಾರು 2500 ಜನ ರಕ್ತದಾನ ಮಾಡಿದ್ದಾರೆ.
ದಿನಾಲೂ 30 -40 ಕೀ ಮೀ ಸಂಚಾರಿಸುತ್ತಿದ್ದು, ಇನ್ನೂ ಸುಮಾರು 2 ವರ್ಷಗಳಲ್ಲಿ ದೆಹಲಿ ತಲುಪುವ ಗುರಿ ಇದೆ ಎಂದರು.
ನಾನೊಬ್ಬ ಸಾಮಾಜಿಕ ಕಾರ್ಯಕರ್ತ ಆಗಿದ್ದು, ಈವರೆಗೆ 3000 ಜನರಿಗೆ ರಕ್ತದಾನ ಮಾಡುವ ವ್ಯವಸ್ಥೆ ಮಾಡಿದ್ದೇನೆ.
ಯಾವುದೇ ರಾಜಕೀಯ ಪಕ್ಷ, ಸಂಘಟನೆ, ವ್ಯಕ್ತಿಯಿಂದ ನಮಗೆ ಸಹಾಯ ಇಲ್ಲ, ಬದಲಾಗಿ ನನ್ನ ಕುಟುಂಬ,ಹಾಗೂ ಸ್ನೇಹಿತರ ಆರ್ಥಿಕ ಸಹಾಯದಿಂದ ನಾನು ಈ ಕಾರ್ಯದಲ್ಲಿ ತೊಡಗಿದೆ ಎಂದರು.