This is the title of the web page
This is the title of the web page

Please assign a menu to the primary menu location under menu

State

ಡಿ 24ರಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ 22ನೇ ಮಹಾದೇವೇಶನ


ಬೆಳಗಾವಿ: ಡಿ 24ರಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ 22ನೇ ಮಹಾದೇವೇಶನವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ವೀರಶೈವ ಮಹಾಶ್ರೀಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,

1904ರಲ್ಲಿ ಹಾನಗಲ್ ಕುಮಾರಸ್ವಾಮಿ ಅವರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸ್ಥಾಪಿತವಾಗಿದ್ದು, ಕಳೆದ‌ 118 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ವೀರಶೈವ ಲಿಂಗಾಯತರನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಂಘಟಿಸುವ ಉದ್ದೇಶದಿಂದ ಈವರೆಗೆ 22 ಮಹಾ ಅಧಿವೇಶನ ನಡೆದಿದೆ ಎಂದರು. 23ನೇ ಮಹಾ ಅಧಿವೇಶನವನ್ನು ಡಿ.24 ರಂದು ಮಹಾ ಅಧಿವೇಶನ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ‌ ಅವರು ನೆರವೆರಿಸಲಿದ್ದಾರೆ. ಈ ಮೊದಲು ಹಾವೇರಿ, ಮೈಸೂರು, ಕೊಡುಗು, ಹಾವೇರಿಯಲ್ಲಿ ಮಾಡಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ ಅಭಿಲಾಷೆಯಂತೆ ದಾವಣಗೆರೆಯಲ್ಲಿ ‌ಮಹಾ ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ ಎಂದರು.ಮಹಿಳಾ ಸಬಲೀಕರಣ, ವೀರಶೈವ ಲಿಂಗಾಯತ ಮಹಾಸಭಾದ ಕುರಿತ ವಿಚಾರ ಗೋಷ್ಠಿ, ಮಾಧ್ಯಮದವರಿಗೆ ಅರಿವು ಕಾರ್ಯಗಾರ ಸೇರಿದಂತೆ ಹಲಾವರು ಗೋಷ್ಠಿಯನ್ನು ಆಯೋಜಿದಲಾಗಿದೆ ಎಂದು ತಿಳಿಸಿದರು.ರತ್ನಪ್ರಭಾ ಬೆಲ್ಲದ, ಜ್ಯೋತಿ ಭಾವಿಕಟ್ಟಿ, ರಮೇಶ ಕಳಸಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು


Gadi Kannadiga

Leave a Reply