This is the title of the web page
This is the title of the web page

Please assign a menu to the primary menu location under menu

State

ಅಖಿಲ ಭಾರತ ಕವಯತ್ರಿ ಯರ ಸಂಘಟನೆಯ 23ನೆಯ ಸಂಸ್ಥಾಪನಾ ದಿನಾಚರಣೆ


ಬೆಳಗಾವಿ ; ಅಖಿಲ ಭಾರತ ಕವಯತ್ರಿ ಯರ ಸಂಘಟನೆ ಹಾಗು ಲಿಂಗಾಯತ ಸಂಘಟನೆಯ ಬಸವ ಗುರು ಜ್ಞಾನ ಕೇಂದ್ರದ ಸಹಯೋಗದೊಂದಿಗೆ 23ನೆಯ ಸಂಸ್ಥಾಪನಾ ದಿನಾಚರಣೆಯನ್ನು ಹಳಕಟ್ಟಿ ಭವನದಲ್ಲಿ ಆಚರಿಸಲಾಯಿತು.
ಬಸವ ಗುರು ಬಸವ ಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆ ಹಾಗು ದುಂಡು ಅಕ್ಷರ ಬರವಣಿಗೆ ಸ್ಳರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಜೊತೆಗೆ ಅದೃಷ್ಟವಂತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಆಯ್ಕೆ ಮಾಡಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶರಣೆ ಜ್ಯೋತಿ ಬದಾಮಿ ಮಾತನಾಡುತ್ತಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಗುರು ಬಸವ ಜ್ಞಾನ ಕೇಂದ್ರ ಉಚಿತವಾಗಿ ಎರಡು ತಿಂಗಳ ಕಾಲ ನುರಿತ ಶಿಕ್ಷಕರಿಂದ ಉತ್ತಮ ಗುಣಮಟ್ಟದ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳನ್ನು ಶಿಸ್ತು ಬದ್ದವಾಗಿ ನಡೆಸುತ್ತಿದೆ. ಮಕ್ಕಳಿಗೆ ಹಿರಿಯರಾದ ಸಾರಾಪುರ ಗುರುಗಳಿಂದ
ಯೋಗ,ಧ್ಯಾನ ಪ್ರಾಣಾಯಾಮ ನಡೆಸುವುದರ ಮೂಲಕ ಕಲಿಕೆಯಲ್ಲಿ ಏಕಾಗ್ರತೆ ಉಂಟಾಗುತ್ತದೆ ಎಂದು ತಿಳಿಸಿದರು.ತರಭೇತಿ ಶಿಬಿರದಲ್ಲಿ ಪಾಲ್ಗೊಂಡ
ಕನ್ನಡ ಸರ್ಕಾರಿ ಶಾಲೆಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಲಿಂಗಾಯತ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.
ಜಯಶೀಲಾ ಬ್ಯಾಕೋಡ ಅಖಿಲ ಭಾರತ ಕವಯತ್ರಿ ಯರ ಸಂಘಟನೆಯ ಪರಿಚಯ ಮಾಡಿಕೊಡುತ್ತಾ ದೇಶದ ವಿದೇಶದ ತುಂಬೆಲ್ಲಾ 10 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಮಹಿಳೆಯರ ಸಾಹಿತ್ಯ, ಸಂಸ್ಕೃತಿ,ಕಲೆ ಇವುಗಳಿಗೆಲ್ಲಾ ವೇದಿಕೆ ಒದಗಿಸುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತದೆ, ಪ್ರೋತ್ಸಾಹಿಸುತ್ತದೆ ಎಂದು ಮಾಹಿತಿ ನೀಡಿದರು.
ಗೌರವ ಅತಿಥಿಯಾಗಿ ಲಿಂಗಾಯತ ಸಂಘಟನೆಯ ಕಾರ್ಯದರ್ಶಿ ಶರಣ ಸುರೇಶ ನರಗುಂದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಅವರಲ್ಲಿ ಧೈರ್ಯ ಆತ್ಮವಿಶ್ವಾಸ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಪ್ರಯತ್ನ ಮಾಡಿದ್ದಾರೆ.ಮಕ್ಕಳಲ್ಲಿರುವ ಜಾಣ್ಮೆಯನ್ನು ಗುರುತಿಸುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಎಐಪಿಸಿ ಸಂಸ್ಥೆಯ ಸಾಮಜಮುಖಿ ಕಳಕಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಸಂಚಾಲಕರಾದ ಶರಣ.ಪ್ರಸಾದ ಹಿರೇಮಠ ಲಿಂಗಾಯತ ಸಂಘಟನೆಯ ಅಧ್ಯಕ್ಷ ರಾದ ಶರಣ ಈರಣ್ಣ ದಯಣ್ಣವರ,ಡಾ.ಗೋಮಡಿ,ಶರಣ ಸಂಗಮೇಶ ಅರಳಿ .
ಶರಣ.ರಾಮಾಪುರೆ ಸರ್ ,ಶರಣ ಇಟಗಿ ಸರ್,ಶಿಕ್ಷಕರಾದ ರಾಜು ಪಾಟೀಲ,ಲಲಿತಾ ಪರ್ವತರಾವ,ಶಾಂತಾ ಮಸೂತಿ,ಮಂಗಲಾ ಹಿರೇಮಠ ಉಪಸ್ಥಿತರಿದ್ದರು.
ಶರಣೆ ದಾನಮ್ಮ ಅಂಗಡಿ,ಸುಮಾ ಹಿರೇಮಠ ಮಹಾನಂದಾ ಪರುಶೆಟ್ಟಿ ಜಾನಪದ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.
ಶರಣೆ ಸುಧಾ ಪಾಟೀಲ ಎಲ್ಲರನ್ನು ಸ್ವಾಗತಿಸಿದರು.ಶರಣೆ ರಾಜನಂದಾ ಗಾರ್ಗಿ ಕಾರ್ಯಕ್ರಮ ನಿರೂಪಿಸಿದರು.ದಾನಮ್ಮ ಅಂಗಡಿ ಶರಣು ಸಮರ್ಪಣೆ ಮಾಡಿದರು.
ಮಕ್ಕಳಿಗೆ ಎಐಪಿಸಿಯ ಹಿರಿಯ ಸದಸ್ಯೆ ಜಯಶೀಲಾ ಬ್ಯಾಕೋಡ ಬಹುಮಾನ ಪ್ರಾಯೋಜಕತ್ವ ನೀಡಿದ್ದರು


Leave a Reply