ಬೆಳಗಾವಿ: ನಗರದ ಶ್ರೀ ಕಾರಂಜಿಮಠದಲ್ಲಿ ದಿನಾಂಕ : ೩-೬-೨೦೨೩ ಸೋಮವಾರ ಸಾಯಂಕಾಲ ೬ ಗಂಟೆಗೆ ೨೬೫ನೇ ಶಿವಾನುಭವ ಮತ್ತು ಗುರುಪೂರ್ಣಿಮಾ ಮಹತ್ವ ಕಾರ್ಯಕ್ರಮ ಜರುಗುವುದು. ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ, ಬೆಳಗಾವಿ ಅವರು ವಹಿಸಲಿದ್ದು, ಹಳಿಂಗಳಿ ಕಮರಿಮಠದ ಪೂಜ್ಯ ಶ್ರೀ ಶಿವಾನಂದ ದೇವರು ಗುರುಪೂರ್ಣಿಮಾ ಮಹತ್ವ ಕುರಿತು ಅನುಭಾವ ನೀಡುವರು. ಖ್ಯಾತ ಪ್ರವಚನಕಾರರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ಹಿರೇಮಠ ಗಂದಿಗವಾಡ ಅವರು ಅಧ್ಯಕ್ಷತೆ ವಹಿಸುವರು. ಕಾರಂಜಿಮಠದ ಮಾತೃಮಂಡಳಿ ತಾಯಂದಿರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವರು ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.