This is the title of the web page
This is the title of the web page

Please assign a menu to the primary menu location under menu

Local News

ಡಾ.ಬಾಬು ಜಗಜೀವನರಾಮ್ ರವರ ೧೧೫ ನೇ ಜನ್ಮ ದಿನಾಚರಣೆ ಅಸ್ಪೃಶ್ಯತೆ ನಿವಾರಣೆಗೆ ಶಿಕ್ಷಣವೇ ಅಸ್ತ್ರವಾಗಲಿ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ


ಬೆಳಗಾವಿ, ಏಪ್ರಿಲ್ ೫ : ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಜನಾಂಗದವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಅದಕ್ಕೆ ಶಿಕ್ಷಣವನ್ನು ಮೂಲ ಅಸ್ತ್ರವಾಗಿಸಬೇಕು. ಶಿಕ್ಷಣದಲ್ಲಿ ಸಾಧನೆ ಮಾಡಿ ಉನ್ನತ ಹುದ್ದೆಯನ್ನು ಪಡೆದು ಸಮಾಜ ಸೇವೆಯಲ್ಲಿ ಮುಂದಾಗಬೇಕು ಅಂದಾಗ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಸಂಗಮೇಶ್ವರ ನಗರ ಡಾ.ಬಾಬು ಜಗಜೀವನರಾಮ್ ಉದ್ಯಾನವನದಲ್ಲಿ ಮಂಗಳವಾರ(ಏಪ್ರಿಲ್ ೫) ನಡೆದ ಹಸಿರು ಕ್ರಾಂತಿ ಹರಿಕಾರ ರಾಷ್ಟ್ರ ನಾಯಕ ಹಾಗೂ ಭಾರತದ ಮಾಜಿ ಉಪಪ್ರಧಾನಮಂತ್ರಿಯಾದ ಡಾ.ಬಾಬು ಜಗಜೀವನರಾಮ್ ರವರ ೧೧೫ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಬಾಬು ಜಗಜೀವನರಾಮ್ ಒಬ್ಬ ದಕ್ಷ ಆಡಳಿತಗಾರರು, ಅವರು ೩೦ ವರ್ಷಗಳ ಕಾಲ ಸಂಪುಟ ದರ್ಜೆಯ ಸಚಿವರಾಗಿ, ಸಂಸದರಾಗಿ ಕಾರ್ಯನಿರ್ವಹಿಸಿದ್ದು ಅವರ ದಕ್ಷತೆಯ ಪ್ರತೀಕವಾಗಿದೆ. ಅವರು ಅಸ್ಪೃಶ್ಯತೆ ನಿವಾರಣೆಯ ಹರಿಕಾರರು, ಅಸ್ಪೃಶ್ಯತೆ ನಿವಾರಣೆ ಆಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಾತ್ರವಲ್ಲದೇ ಎಲ್ಲ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಮಕ್ಕಳಲ್ಲಿ ಶಿಕ್ಷಣದ ಕುರಿತು ಅರಿವನ್ನು ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಎಲ್ಲ ಅಧಿಕಾರಿಗಳಿಗೆ ತಿಳಿಸಿದರು.
ಪಿ.ಯು.ಸಿ, ಎಲ್.ಎಲ್.ಬಿ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಅವರನ್ನು ಸನ್ಮಾನ ಮಾಡಿರುವುದರಿಂದ ಡಾ. ಬಾಬು ಜಗಜೀವನರಾಮ್ ಅವರ ಜಯಂತಿ ಅರ್ಥಪೂರ್ಣವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಕಾಶ ಎಸ್. ಕಟ್ಟೀಮನಿ ಅವರು ಡಾ.ಬಾಬು ಜಗಜೀವನರಾಮ್ ಅವರ ಸಾಧನೆಯ ಕುರಿತು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ ಮತ್ತು ಡಾ. ಬಾಬು ಜಗಜೀವನರಾಮ್ ಅವರು ದಲಿತ ನಾಯಕರಲ್ಲ ಅವರು ಸಮಾಜದ ನಾಯಕರು. ಇವರು ಕೇವಲ ದಲಿತ ಸಮುದಾಯಕ್ಕಾಗಿ ಮಾತ್ರ ಹೋರಾಡದೇ ಎಲ್ಲ ಸಮಾಜದವರ ನಾಯಕರಾಗಿ ಹೋರಾಟ ಮಾಡಿದ್ದಾರೆ ಎಂದರು.
ಸಂವಿಧಾನ ಎಂದರೆ ದಲಿತರ ಮೀಸಲಾತಿ ಎನ್ನುವುದಲ್ಲ, ಮೀಸಲಾತಿಯನ್ನು ಭಾರತದ ಪ್ರತಿಯೊಂದು ಸಮುದಾಯಕ್ಕು ಇದೆ. ಮೀಸಲಾತಿ ಎನ್ನುವುದು ಸಂವಿಧಾನದ ಒಂದು ಭಾಗ ಮಾತ್ರ ಎಂದರು.
ಭಾವಚಿತ್ರದ ಮೆರವಣಿಗೆ:
ಇದಕ್ಕೂ ಮುಂಚೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀಡಿದಗಳ ಮೂಲಕ ಬೆಳಗಾವಿಯ ಸಂಗಮೇಶ್ವರ ನಗರ ಡಾ.ಬಾಬು ಜಗಜೀವನರಾಮ್ ಉದ್ಯಾನವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಉಮಾ ಸಾಲಿಗೌಡರ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧಿಕ್ಷಕರಾದ ಎಂ.ಬಿ.ಹೊಸಮನಿ ಅವರು ಕಾರ್ಯಕ್ರಮದ ನಿರೂಪಿಸಿದರು. ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಡಿ.ಸಿ.ಪಿ ಯಾದ ರವೀಂದ್ರ ಗಡಾದ , ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ರುದ್ರೇಶ್ ಘಾಳಿ, ಮಹಾನಗರ ಪಾಲಿಕೆಯ ಉಪ ಆಯುಕ್ತ(ಆಡಳಿತ)ರಾದ ಭಾಗ್ಯಶ್ರೀ ಹುಗ್ಗಿ, ಜಿಲ್ಲಾ ಪಂಚಾಯತಿ (ಆಡಳಿತ) ಉಪ ಕಾರ್ಯದರ್ಶಿಗಳಾದ ಭೀಮಪ್ಪ ಲಾಳಿ ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾದಿಗ ಮಿಸಲಾತಿ ಹೋರಾಟ ಸಮಿತಿ ಜಿಲ್ಲಾ ಅದ್ಯಕ್ಷರಾದ ಶಂಕರ ದೊಡಮನಿ, ಪ.ಜಾತಿ ಮತ್ತು ಪ.ಪಂಗಡದ ಜಿಲ್ಲಾ ಮುಖಂಡರಾದ ಮಲ್ಲೇಶ ಚೌಗಲಾ, ಸಮುದಾಯದ ಮುಖಂಡರಾದ ಯಲ್ಲಪ್ಪ ಹುದಲಿ, ಬಾಬು ಪೂಜಾರಿ, ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply