This is the title of the web page
This is the title of the web page

Please assign a menu to the primary menu location under menu

Local News

ರೈತ ಬಾಂಧವರ ಗಮನಕ್ಕೆ : ವಿಮಾ ಕಂತು ಪಾವತಿಸಲು ಜುಲೈ ೩೧ ಕೊನೆಯ ದಿನ


ಗದಗ ಜುಲೈ ೨೧: ೨೦೨೩-೨೪ ನೇ ಸಾಲಿನಲ್ಲಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲು ಸರ್ಕಾರದ ಆದೇಶದಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ದಾಳಿಂಬೆ, ಪಪ್ಪಾಯ, ದ್ರಾಕ್ಷಿ ಹಾಗೂ ಮಾವು ಬೆಳೆಗಳನ್ನು ಬೆಳೆದ ರೈತರು ವಿಮಾ ಕಂತನ್ನು ಪಾವತಿಸಲು ಜುಲೈ ೩೧ ರಂದು ಕೊನೆಯ ದಿನವಾಗಿದೆ. ಬೆಳೆ ಸಾಲ ಪಡೆದ ರೈತರು ಸಂಬಂಧಿತ ಬ್ಯಾಂಕ್‌ಗಳ ಮೂಲಕ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದದ ಮೂಲಕ ಕೂಡಾ ಈ ಯೋಜನೆಯಡಿ ನೋಂದಾಯಿಸಬಹುದಾಗಿದೆ. ಬೆಳೆವಾರು ಪ್ರತಿ ಎಕರೆಗೆ ವಿಮಾ ಕಂತು ಮಾವು-ರೂ.೧೬೦೦/-, ದ್ರಾಕ್ಷಿ-ರೂ.೫೬೦೦/-, ದಾಳಿಂಬೆ ರೂ.೨೫೪೦/- ಹಾಗೂ ಪಪ್ಪಾಯ ರೂ.೨೬೮೦/- ಗಳನ್ನು ನಿಗದಿಪಡಿಸಲಾಗಿರುತ್ತದೆ. ಪಹಣಿ ಪತ್ರಿಕೆ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ಮತ್ತು ಆಧಾರ ಕಾರ್ಡನ ಪ್ರತಿ ಸೇರಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತೋಟಗಾರಿಕೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿರುತ್ತಾರೆ.


Leave a Reply