This is the title of the web page
This is the title of the web page

Please assign a menu to the primary menu location under menu

State

೩೪ ವಸಂತಗಳ ಸಾರ್ತಕ ಸೇವೆ : ಚಾರ್ಜಮ್ಯಾನ್ ಬಾಲಕೃಷ್ಣಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ರೈಟರ್ ಬಾಲಣ್ಣ ಎಂದೇ ಹೆಸರಾಗಿದ್ದು ಸಂತಸ : ಡಿಸಿ ವೆಂಕಟೇಶ್


ಕೊಪ್ಪಳ : ಸಾರಿಗೆ ಇಲಾಖೆಯಲ್ಲಿ ವಿದ್ಯುತ್ ವಿಭಾಗದ ಕುಶಲಕರ್ಮಿಯಾಗಿ ಸೇವೆಗೆ ಸೇರಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಸಿಬ್ಬಂದಿಗಳೊಂದಿಗೆ ಉತ್ತಮ ಒಡನಾಟ ಹೊಂದಿ ಸಾರ್ಥಕ ಸೇವೆ ಸಲ್ಲಿಸಿದ ಬಾಲಕೃಷ್ಣ ರವರಿಗೆ ಇಂದು ಬೀಳ್ಗೊಡಲು ನಮಗೆ ನೋವು ಎನಿಸುತ್ತದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ನಿಯಂತ್ರಣಾಧಿಕಾರಿ ವೆಂಕಟೇಶ ಎಂ. ಹೇಳಿದರು.
ಅವರು ಕೆ.ಕೆ.ಆರ್.ಟಿ.ಸಿ.ಕೊಪ್ಪಳ ವಿಭಾಗದಲ್ಲಿ ಚಾರ್ಜಮ್ಯಾನ್ ಬಾಲಕೃಷ್ಣ ವಯೊನಿವೃತ್ತಿ ನಿಮಿತ್ಯ ಹೃದಯಸ್ಪರ್ಶಿ ಬೀಳ್ಗೊಡುಗೆ ಸಮಾರಂಭದಲ್ಲಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು. ಬಾಲಕೃಷ್ಣ ಅವರಿಗೆ ಅತ್ಯುತ್ತಮ ಬರವಣಿಗೆ ಇದೆ, ನೂರಾರು ಕೇಸಗಳಿಗೆ ಇತರರ ಪರವಾಗಿ ಬರೆದುಕೊಟ್ಟ ಅಚ್ಚುಕಟ್ಟಾದ ಉತ್ತರಗಳಿಂದಾಗಿ ಅವರು ರೈಟರ್ ಬಾಲಣ್ಣ ಆಗಿದ್ದು ಸಂತೋಷ. ಸರ್ಕಾರಿ ಸೇವೆಯಲ್ಲಿ ವೃತ್ತಿಯಂದ ನಿವೃತ್ತಿ ಅನಿವಾರ್ಯ, ನಿವೃತ್ತಿವರೆಗೆ ದುಡಿಮೆ ಅನಿವಾರ್ಯ ಮುಂದಿನ ಜೀವನವನ್ನು ನೆಮ್ಮದಿಯಿಂದ ಕಳೆಯಲಿ ತಮ್ಮ ಪಾಲಿನ ಜವಾಬ್ದಾರಿಗಳನ್ನು ನಿರ್ವಹಿಸಲಿ ತಮಗೆ ಬಯಸಿದ್ದು ದೇವರು ಕರುಣಿಸಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ, ರಾಜೇಂದ್ರ ಜಾದವ್ ವಿಭಾಗೀಯ ಸಂಚಾರಾಧಿಕಾರಿಗಳು, ಬಿ.ವಿ. ಬಟ್ಟೂರ್ ಘಟಕ ವ್ಯವಸ್ಥಾಪಕರು, ಸಹಾಯಕ ಸಂಚಾರ ಅಧೀಕ್ಷಕ ಸಿದ್ದಪ್ಪ ಚಿಗರಿ ಎ.ಐ.ಟಿ.ಯು.ಸಿ. ಎಐಟಿಯುಸಿ ಗೌರವಾಧ್ಯಕ್ಷ ವಕೀಲರಾದ ಯು. ಎಸ್. ಸೊಪ್ಪಿಮಠ, ಎಐಟಿಯುಸಿ ಪ್ರದಾನ ಕಾರ್ಯದರ್ಶಿ ಎ.ಬಿ. ದಿಂಡೂರ, ಎ.ಐ.ಟಿ.ಯು.ಸಿ. ಅದ್ಯಕ್ಷ ಬಸಯ್ಯ ಕಡ್ಲಿ, ಕಾರ್ಮಿಕ ಮುಖಂಡ ರವೀಂದ್ರ, ಬಾಲಕೃಷ್ಣ ಅವರ ಪತ್ನಿ ಶಿಕ್ಷಕಿ ಸುನಿತಾ, ಮಕ್ಕಳು ಅಪಾರ ಬಂಧುಗಳು, ಕಾರ್ಮಿಕರು, ಸಿಬ್ಬಂದಿ ಭಾಗವಹಿಸಿದ್ದರು. ಸಂಚಾರಿ ನಿಯಂತ್ರಕಿ ಶಾಲುತಾಯಿ ಪ್ರಾರ್ಥಿಸಿದರು, ಪ್ರಾಸ್ತಾವಿಕವಾಗಿ ಚಾಲಕ ಎಫ್. ಎಸ್. ಪವಾಡಶೆಟ್ಟರ್ ಮಾತನಾಡಿಸರು, ತಾಂತ್ರಿಕ ಸಹಾಯಕ ನಾಗರಾಜ ನಾಗರಡ್ಡಿ ನಿರೂಪಿಸಿದರು, ರಾಜ್ಯ ಮುಖಂಡ ಎ. ಜಿ. ಮಣ್ಣೂರ ವಂದಿಸಿದರು.


Leave a Reply