This is the title of the web page
This is the title of the web page

Please assign a menu to the primary menu location under menu

State

5 ರ0ದು ನಮ್ಮೂರ ಬಾನುಲಿ 7ನೇ ವಾರ್ಷಿಕೋತ್ಸವ ಹಾಗೂ ಪತ್ರಕರ್ತರ ವಿಚಾರ ಸಂಕಿರಣ


ಬೆಳಗಾವಿ : ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆ ನಡೆಸುತ್ತಿರುವ ನಮ್ಮೂರ ಬಾನುಲಿ ಕೇಂದ್ರದ ಏಳನೇ ವಾರ್ಷಿಕೋತ್ಸವ ಹಾಗೂ ಪತ್ರಕರ್ತರ ವಿಚಾರ ಸಂಕಿರಣ ಇಂದು ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಮ್ ಹತ್ತಿರದ ಕರಗುಪ್ಪಿಯಲ್ಲಿ ನಡೆಯಲಿದೆ .
ಕರ್ನಾಟಕ ಪತ್ರಕರ್ತರ ಸಂಘ ಹಾಗೂ ನಮ್ಮೂರ ಬಾನುಲಿ ರೇಡಿಯೋ ಕೇಂದ್ರ ಸಂಯುಕ್ತವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ರವಿವಾರ ದಿ :05-06-2022 ರಂದು ಮುಂಜಾನೆ 10-30 ಗಂಟೆಗೆ ನಡೆಯಲಿದೆ .
ಘೋಡಗೇರಿಯ ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಲಕ್ಷ್ಮಣ್ ನಿಂಬರಗಿ ಅವರು ಉದ್ಘಾಟಿಸಲಿದ್ದಾರೆ ,ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಕ್ರೈಮ್ ವಿಭಾಗದ ಎಸಿಪಿ ಶ್ರೀ ನಾರಾಯಣ ಭರಮನಿ ,ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಎಸ್ ವಿ ಕಲಗೌಡ ಪಾಟೀಲ ಆಗಮಿಸಲಿದ್ದಾರೆ .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ   ಮುರುಗೇಶ್  ಶಿವಪೂಜಿ ವಹಿಸಲಿದ್ದಾರೆ .
ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಮತ್ತು ಹೊಣೆಗಾರಿಕೆ ವಿಷಯದ ಕುರಿತು ನಡೆಯುವ ವಿಚಾರ ಸಂಕಿರಣದಲ್ಲಿ ಬೆಳಗಾವಿಯ ವಕೀಲ ಶ್ರೀ ಮಂಜುನಾಥ ತೊರಗಲ್ ವಿಷಯ ಮಂಡಿಸಲಿದ್ದಾರೆ .
ಅದೇ ರೀತಿ ಪ್ರಸ್ತುತ ದಿನಮಾನದಲ್ಲಿ ರೇಡಿಯೊ ಅಸ್ತಿತ್ವ ಕುರಿತು ವಿಷಯವನ್ನು ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ನಿಲಯ ನಿರ್ದೇಶಕ ಶ್ರೀ ಅಕ್ಷಯ ಕುಲಕರ್ಣಿ ಮಂಡಿಸಲಿದ್ದಾರೆ .
ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ , ನಿರ್ದೇಶಕರಾದ ಶ್ರೀ ಎಂ ಎಸ್ ಚೌಗಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ .ಜಿಲ್ಲೆಯ ಎಲ್ಲಾ ತಾಲ್ಲೂಕುಗಳ 1 ನೂರಕ್ಕೂ ಅಧಿಕ ಪತ್ರಕರ್ತರು ಮತ್ತು ಯೂಟ್ಯೂಬ್ ಚಾನೆಲ್ ಗಳನ್ನು ನಡೆಸುವವರು ಭಾಗವಹಿಸಲಿದ್ದಾರೆಂದು ರೇಡಿಯೋ ಕೇಂದ್ರದ ಪ್ರಕಟಣೆ ತಿಳಿಸಿದೆ .


Gadi Kannadiga

Leave a Reply