This is the title of the web page
This is the title of the web page

Please assign a menu to the primary menu location under menu

Local News

ಕಾಳಸಂತೆಯಲ್ಲಿ ರೇಶನ್ ಮಾರಾಟ ಮಾಡಿದರೆ 6 ತಿಂಗಳ ಪಡಿತರ ಚೀಟಿ ಅಮಾನತು


ಬೆಳಗಾವಿ :ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ವಿತರಿಸಿದ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರ ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಫಲಾನುಭವಿಗಳಿಗೆ ಎನ್.ಎಫ್.ಎಸ್.ಎ ಮತ್ತು ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಪಡಿತರವನ್ನು ವಿತರಿಸಲಾಗುತ್ತಿದೆ.

ಪಡಿತರವನ್ನು ಯಾವುದೇ ಪಡಿತರ ಚೀಟಿದಾರರು ಅಥವಾ ಅದರಲ್ಲಿರುವ ಸದಸ್ಯರು ತಮಗೆ ಹಂಚಿಕೆಯಾದ ಆಹಾರ ಧಾನ್ಯವನ್ನು ತಮ್ಮ ಸ್ವಂತ ಲಾಭಕ್ಕಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರ ಪಡಿತರ ಚೀಟಿಯನ್ನು 6 ತಿಂಗಳ ಅವಧಿಗೆ ಅಮಾನತ್ತುಪಡಿಸುವ ಕ್ರಮ ವಹಿಸಲಾಗುವುದು ಮತ್ತು ಮಾರಾಟ ಮಾಡಿರುವಂತಹ ಆಹಾರ ಧಾನ್ಯ ಪ್ರಮಾಣಕ್ಕನುಗುಣವಾಗಿ ಮುಕ್ತ ಮಾರುಕಟ್ಟೆಯ ದರದಂತೆ ದಂಡವನ್ನು ವಿಧಿಸಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವ ಕ್ರಮ ವಹಿಸುವಂತೆ ಸರ್ಕಾರವು ಆದೇಶಿಸಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 


Gadi Kannadiga

Leave a Reply