This is the title of the web page
This is the title of the web page

Please assign a menu to the primary menu location under menu

Local News

ಧಾರವಾಡದಲ್ಲಿ ಭೀಕರ ಅಪಘಾತ : ನಿಶ್ಚಿತಾರ್ಥ ಮುಗಿಸಿ ಬರುತ್ತಿದ್ದ 7ಜನ ಸ್ಥಳದಲ್ಲೇ ಸಾವು


ಧಾರವಾಡ : ತಾಲೂಕಿನ ಬಾಡ ಗ್ರಾಮದ ಬಳಿಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ನಿಶ್ಚಿತಾರ್ಥ ಮುಗಿಸಿಕೊಂಡು ರಾತ್ರಿ ಒಂದು ಗಂಟೆ ಸುಮಾರಿಗೆ ನಿಗದಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಮರಕ್ಕೆ ಡಿಕ್ಕಿಯಾಗಿದೆ.

ಪರಿಣಾಮ 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತರನ್ನು ಅನನ್ಯ (14,) ಹರೀಶ (13) ಶಿಲ್ಪಾ (34) ನೀಲವ್ಚ (60,) ಮಧುಶ್ರೀ (20) ಮಹೇಶ್ವರಯ್ಯ (11) , ಶಂಭುಲಿಂಗಯ್ಯ (35,) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತದ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Leave a Reply