ಗದಗ ಮೇ ೧೧: ರಾಜ್ಯ ವಿಧಾನಸಭಾ ಚುನಾವಣೆ ಅಂಗವಾಗಿ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಮೇ.೧೦ ಮಂಗಳವಾರದಂದು ಶಾಂತಿಯುತವಾಗಿ ಮತದಾನ ಜರುಗಿತು. ಜಿಲ್ಲೆಯಲ್ಲಿ ೪೩೪೯೯೭ ಪುರುಷ, ೪೩೨೮೯೭ ಮಹಿಳಾ ಹಾಗೂ ೬೧ ಇತರೆ ಮತದಾರರು ಸೇರಿದಂತೆ ಒಟ್ಟು ೮೬೭೯೫೫ ಮತದಾರರಿದ್ದಾರೆ. ಈ ಪೈಕಿ ೩೩೬೦೦೩ (೭೭.೨೪%) ಪುರುಷ, ೩೨೦೨೭೩ (೭೩.೯೮%) ಮಹಿಳಾ, ಹಾಗೂ ೮ (೧೩.೧೧%)ಇತರೆ ಮತದಾರರು ಚಲಾಯಿಸಿದ್ದು ಜಿಲ್ಲೆಯಲ್ಲಿ ಒಟ್ಟಾರೆ ೬೫೬೨೮೪ (೭೫.೬೧%)ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.
೬೫-ಶಿರಹಟ್ಟಿ: ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ ೧೧೩೮೮೫ ಪುರುಷ, ೧೧೨೯೨೨ ಮಹಿಳಾ ಹಾಗೂ ೧೪ ಇತರೆ ಮತದಾರರು ಸೇರಿದಂತೆ ಒಟ್ಟು ೨೨೬೮೨೧ ಮತದಾರರ ಪೈಕಿ ೮೩೮೪೦(೭೩.೬೨%) ಪುರುಷ ಮತದಾರರು, ೭೮೬೧೩(೬೯.೬೨%) ಮಹಿಳಾ ಮತದಾರರು, ಇತರ ೨(೧೪.೨೯%) ಮತದಾರರು ಸೇರಿದಂತೆ ಒಟ್ಟು ೧೬೨೪೫೫ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ೭೧.೬೨% ರಷ್ಟು ಮತದಾನವಾಗಿದೆ.
೬೬-ಗದಗ: ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ೧೧೦೩೩೧ ಪುರುಷ, ೧೧೨೨೨೧ ಮಹಿಳಾ ಹಾಗೂ ೧೭ ಇತರೆ ಮತದಾರರು ಸೇರಿದಂತೆ ಒಟ್ಟು ೨೨೨೫೬೯ ಮತದಾರ ಪೈಕಿ ೮೫,೦೩೮(೭೭.೦೮%) ಪುರುಷ, ೮೩,೧೯೨(೭೪.೧೩%) ಮಹಿಳಾ ಇತರೆ ೩(೧೭.೬೫%) ಮತದಾರರು ಸೇರಿದಂತೆ ಒಟ್ಟು ೧೬೮೨೩೩ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ೭೫.೫೯% ರಷ್ಟು ಮತದಾನವಾಗಿದೆ.
೬೭-ರೋಣ: ರೋಣ ಮತಕ್ಷೇತ್ರದಲ್ಲಿ ೧೧೬೧೭೬ ಪುರುಷ, ೧೧೫೮೨೮ ಮಹಿಳಾ, ೨೩ ಇತರೆ ಮತದಾರರು ಸೇರಿದಂತೆ ಒಟ್ಟು ೨೩೨೦೨೭ ಮತದಾರರ ಪೈಕಿ ೯೦೦೦೮(೭೭.೪೮%) ಪುರುಷ, ೮೬೫೭೯(೭೪.೭೫%) ಮಹಿಳಾ, ೧(೪.೩೫%) ಇತರೆ ಮತದಾರರು ಸೇರಿದಂತೆ ಒಟ್ಟು ೧೭೬೫೮೮ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ೭೬.೧೧%ರಷ್ಟು ಮತದಾನವಾಗಿದೆ.
೬೮-ನರಗುಂದ: ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ೯೪೬೦೫ ಪುರುಷ, ೯೧೯೨೬ ಮಹಿಳಾ, ೭ ಇತರೆ ಸೇರಿದಂತೆ ಒಟ್ಟು ೧೮೬೫೩೮ ಮತದಾರರ ಪೈಕಿ ೭೭೧೧೭(೮೧.೫೧%) ಪುರುಷ, ೭೧೮೮೯(೭೮.೨೦%) ಮಹಿಳಾ, ೨ (೨೮.೫೭%) ಇತರೆ ಮತದಾರರು ಸೇರಿದಂತೆ ಒಟ್ಟು ೧೪೯೦೦೮ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ೭೯.೮೮ %ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ತಿಳಿಸಿರುತ್ತಾರೆ.
Gadi Kannadiga > State > ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಪ್ರತಿಶತ ೭೫.೬೧ ರಷ್ಟು ಮತದಾನ
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಪ್ರತಿಶತ ೭೫.೬೧ ರಷ್ಟು ಮತದಾನ
Suresh11/05/2023
posted on
More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023