ಕೊಪ್ಪಳ, ಅಕ್ಟೋಬರ್ ೨೧: ಚಿತ್ರದುರ್ಗ-ಆಲಮಟ್ಟಿ ಹೊಸ ರೈಲು ಮಾರ್ಗವನ್ನು ೨೦೨೩ರ ರೈಲ್ವೆ ಬಜೆಟ್ನಲ್ಲಿ ಸೇರ್ಪಡೆ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಕೊಪ್ಪಳ ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ ಅವರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
೨೦೧೮ರಲ್ಲಿ ಕೇಂದ್ರ ಸರ್ಕಾರದಿಂದ ನೂತನ ರೈಲು ಮಾರ್ಗ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಸುಮಾರು ೨೭೯.೯೪ ಕಿ.ಮೀ ಉದ್ದದ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಆದೇಶ ನೀಡಲಾಗಿತ್ತು. ಅದರಂತೆ ಮುಖ್ಯ ಎಂಜಿನಿಯರ್ ನೈರುತ್ಯ ರೈಲ್ವೆ ವಿಭಾಗದ ಹುಬ್ಬಳ್ಳಿ ಇವರು ೮೪೩೧.೪೪ ಕೋಟಿ ರೂ.ಗಳಿಗೆ ಅಂದಾಜು ಮೊತ್ತದ ಯೋಜನೆಯನ್ನು ತಯಾರಿಸಿ ದಿನಾಂಕ ೧೪-೧೦-೨೦೨೧ರಂದು ರೈಲ್ವೆ ಮಂಡಳಿ ಹೊಸದಿಲ್ಲಿಗೆ ಅನುಮೋದನೆಗಾಗಿ ಸಲ್ಲಿಸಿರುತ್ತಾರೆ.
ಸದರಿ ಈ ರೈಲು ಮಾರ್ಗವು ಕೂಡಲಸಂಗಮ, ಹುನಗುಂದ, ಕುಷ್ಟಗಿ, ಬೇವೂರ ಇರಕಲಗಡ, ಕೊಪ್ಪಳ, ಹಿರೇಸಿಂಧೋಗಿ, ಕಾತರಕಿ, ತಮ್ರಹಳ್ಳಿ, ಆನಂದದೇವನಹಳ್ಳಿ, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಚಿತ್ರದುರ್ಗ ತಲುಪಲಿದೆ. ಈ ಯೋಜನೆಯ ಬಗ್ಗೆ ಚರ್ಚಿಸಲು ಕೊಪ್ಪಳ ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರಿಗೆ ೧೮-೧೦-೨೦೨೨ರಂದು ಖುದ್ದಾಗಿ ಭೇಟಿ ಮಾಡಿ, ಈ ಹೊಸ ರೈಲಯ ಮಾರ್ಗದ ಬಗ್ಗೆ ಸಮಗ್ರ ವಿವರಿಸಿ, ಸದರಿ ಈ ಯೋಜನೆಯನ್ನು ೨೦೨೩-೨೦೨೪ನೇ ರೈಲ್ವೆ ಬಜೆಟ್ನಲ್ಲಿ ಘೋಷಿಸಿ ಅನುದಾನ ಬಿಡುಗಡೆ ಮಾಡಿ ತೀವ್ರಗಯಲ್ಲಿ ಕಾರ್ಯಾರಂಭ ಮಾಡಲು ವಿನಂತಿಸಿದ್ದಾರೆ ಎಂದು ಸಂಸದರ ಕಚೇರಿಯ ಪ್ರಕಟಣೆ ತಿಳಿಸಿದೆ.