ಮಲ್ಲಮ್ಮನ: ಬೆಳವಡಿ ಸಮೀಪದ ಉಡಕೇರಿ ಗ್ರಾಮದಲ್ಲಿ ವಿಶ್ವದ ಮೊದಲ ಪ್ರಜಾಪ್ರಭುತ್ವದ ಜನಕ ಮಹಾನ್ ಮಾನವತಾವಾದಿ ಸಮಾನತೆಯ ಹರಿಕಾರ ಶ್ರೀ ಶ್ರೀ ಬಸವೇಶ್ವರ ವಿಶ್ವಗುರು ಬಸವಣ್ಣನವರ 889 ನೇಯ ಜಯಂತಿಯ ಉತ್ಸವ ಅಕ್ಷಯ ತೃತೀಯ ದಂದು ಉಡಕೇರಿ ಯಲ್ಲಿ ಅತಿ ವಿಜೃಂಭಣೆಯಿಂದ ಜರುಗಿತು.
ಈ ದಿನ ಉಡ ಕೇರಿಯಲ್ಲಿ ಬಸವ ಜಯಂತಿ ಯನ್ನು ಅತಿ ವಿಜೃಂಭಣೆಯಿಂದ ಸಂಭ್ರಮದಿಂದ ಊರಿನ ಸಮಸ್ತ ಭಕ್ತಾದಿಗಳು ಸಮಸ್ತ ನಾಗರಿಕರು ಆಚರಿಸಿದರು ಬೆಳಿಗ್ಗೆ ಶ್ರೀ ರಾಮಲಿಂಗೇಶ್ವರ ರುದ್ರಾಭಿಷೇಕ ಜರುಗಿತು ಊರಿನ ಪ್ರಮುಖ ಸ್ಥಳದಲ್ಲಿ ಬಸವ ಪ್ರತಿಮೆಗೆ ಮಹಾಪೂಜೆಯು ಗಣ್ಯಮಾನ್ಯ ರ ಸಮ್ಮುಖದಲ್ಲಿ ನಡೆಯಿತು.
ಊರಿನ ಪ್ರಮುಖ ಬೀದಿಬೀದಿಗಳಲ್ಲಿ ಬಸವಣ್ಣನ ಮೆರವಣಿಗೆ ತುಂಬಾ ಅದ್ಭುತವಾಗಿ ತು ಮಧ್ಯಾಹ್ನ ಸಾಮೂಹಿಕ ವಿವಾಹಗಳು ಜರುಗಿದವು ಹಾಗೂ ಮಹಾ ಪ್ರಸಾದವು ಇತ್ತು ಸಾಯಂಕಾಲ ಮಹಾರಥೋತ್ಸವ ಶ್ರೀ ಮ ನಿ ಪ್ರ ಸ್ವ ಸಿದ್ಧಲಿಂಗ ಮಹಾಸ್ವಾಮಿಗಳು ಪುಣ್ಯರಣ್ಯ ಅರಭಾವಿಮಠ ರವರ ಅಮೃತ ಹಸ್ತದಿಂದ ಮಹಾರಥೋತ್ಸವವು ಅತಿ ವಿಜೃಂಭಣೆಯಿಂದ ಜರುಗಿತು ಹರಹರ ಮಹದೇವ್ ಎಂಬ ಘೋಷಣೆಯೊಂದಿಗೆ ಮಹಾರಥೋತ್ಸವ ಮುಕ್ತಾಯಗೊಂಡಿತು.