ಬೆಳಗಾವಿ: ಜಿಲ್ಲಾಡಾಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ವಾರ್ತಾ ಭವನದಲ್ಲಿ ರವಿವಾರ ದಿನಾಂಕ 24 ರಂದು ಡಾ ರಾಜಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮದಿನಾಚರಣೆ ಆಚರಿಸಲಾಯಿತು.
ಮಾಲಾರ್ಪಣೆ ಮಾಡಿ ಮಾತನಾಡಿದ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಅಶೋಕ್ ದುಡಗುಂಟಿ ಅವರು ರಾಜಕುಮಾರ ಅವರ ಸರಳತೆ, ನಿಷ್ಕಲ್ಮಶ ವ್ಯಕ್ತಿತ್ವ, ಅದ್ಭುತ ನಟನೆ, ಸಮಯ ಪ್ರಜ್ಞೆ, ಮುಗ್ಧತೆ ಹೀಗೆ ಹಲವಾರು ವಿಶಿಷ್ಟ ಗುಣಗಳಿಂದ ನಾಡಿನ ಜನರ ಮನದಲ್ಲಿ ಹಸಿರಾಗಿ ಉಳಿದುಕೊಂಡಿದ್ದಾರೆ,, ಅವರು ಮಾಡಿದ ಒಂದೊಂದು ಸಿನಿಮಾ ಕೂಡ ಜೀವನದ ಪಾಠ ಇದ್ದಂತೆ, ಸಿನಿಮಾ ಹಾಗೂ ಅವರ ಪಾತ್ರದ ಮೂಲಕ ನೀಡುವ ಸಂದೇಶವನ್ನು ನಮ್ಮ ಜೀವನದಲ್ಲಿ ಸ್ವಲ್ಪ ಆದರೂ ಅಳವಡಿಸಿಕೊಂಡರೆ ನಮ್ಮೆಲ್ಲರ ಜೀವನ ಬಂಗಾರವಾಗುವುದು ಎಂದರು..
ಡಾ ರಾಜಕುಮಾರ್ ಅವರು ಕನ್ನಡ ಸಂಸ್ಕೃತಿಯ ರಾಯಭಾರಿಗಳಾಗಿದ್ದರು, ಭಾಷೆ, ನೆಲ, ಜಲ, ಯಾವುದೇ ವಿಷಯಕ್ಕೆ ದಕ್ಕೆ ಬಂದಾಗ, ಸಂರಕ್ಷಣೆಗಾಗಿ ಎದ್ದು ನಿಲ್ಲುತ್ತಿದ್ದರು, ಗೋಕಾಕ್ ಚಳುವಳಿಯೇ ಅದಕ್ಕೆ ಸೂಕ್ತ ನಿದರ್ಶನ ಎಂದು ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ರಾಜಶೇಖರ್ ತಳವಾರ ಅವರು ಕನ್ನಡಿಗರಿಗೆ ಸ್ಪೂರ್ತಿಚೈತನ್ಯ ಆಗಿರುವ ಮೇರುನಟ ರಾಜಕುಮಾರ್ ಅವರ ಪ್ರತಿಮೆಯನ್ನು ಬೆಳಗಾವಿಯ ಮಹಾನಗರ ಪಾಲಿಕೆಯ ಹತ್ತಿರ ಸ್ಪಾಪಿಸುವ ಅಗತ್ಯವಿದೆ ಎಂದರು.
ಈ ಸಂಧರ್ಬದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ್ ಕಡಬುರ, ಪತ್ರಕರ್ತರಾದ ಪುರುಷೋತ್ತಮ್, ಇಮಾಮಹುಸೇನ್ ಗುಡನವರ, ಶ್ರೀಶೈಲ ಮಠದ, ಏಳುಕೋಟಿ, ಮುಚಳಬಿ, ರಾಜಶೇಖರ ಹಿರೇಮಠ, ಶುಬಾನಿ ಮುಲ್ಲಾ, ಸುಭಾಷ ನೆಲ್ರಿ ಮುಂತಾದವರು ಉಪಸ್ಥಿತರಿದ್ದರು.