ಬೆಳಗಾವಿ, ಮೇ.೧೫ : ಬೆಳಗಾವಿ ನಗರದ ಪಾಟೀಲ ಗಲ್ಲಿ ಶಿಂಗಾರಿ ಕಾಲನಿಯ ನಿವಾಸಿಯಾದ ಕುಮಾರ ಓಂಕಾರ ಅಮರ ಪಾಟೀಲ(೧೬) ಇವನಿಗೆ ಸರಿಯಾಗಿ ಅಭ್ಯಾಸ ಮಾಡಿ ಒಳ್ಳೆ ಅಂಕಗಳನ್ನು ಪಡೆದುಕೊಳ್ಳಬೇಕು ಅಂತ ಬುದ್ದಿ ಮಾತು ಹೇಳಿದ್ದಕ್ಕೆ ಸಿಟ್ಟು ಮಾಡಿಕೊಂಡು ಮೇ.೧೪ ೨೦೨೩ ರಂದು ೩ ಗಂಟೆಯಿಂದ ಬೆಳಿಗ್ಗೆ ೬ ಗಂಟೆ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಹೋದವನು ಮರಳಿ ಮನೆಗೆ ಬರದೆ ಕಾಣೆಯಾಗಿದ್ದಾನೆ ಎಂದು ಇವರ ತಂದೆಯಾದ ಅಮರ ವಿಷ್ಣು ಪಾಟೀಲ ಅವರು ದೂರು ದಾಖಲಿಸಿದ್ದಾರೆ.
ಕಾಣೆಯಾದ ಬಾಲಕನ ಚಹರೆ ಪಟ್ಟಿ:
೫ ಪೂಟ ೧ ಇಂಚ ೮ ಎತ್ತರ, ಸದೃಢ ಮೈಕಟ್ಟು, ದುಂಡು ಮುಖ, ನೆಟ್ಟನೆಮೂಗು, ಗೋದಿಗಪ್ಪು ಮೈಬಣ್ಣ, ಕಪ್ಪು ಕೂದಲು ಇದ್ದು, ಎದೆಯ ಮೇಲೆ ದೊಡ್ಡ ಮಚ್ಚೆ ಇರುತ್ತದೆ ಹಾಗೂ ಮರಾಠಿ, ಹಿಂದಿ, ಇಂಗ್ಲೀಷ ಭಾಷೆ ಮಾತನಾಡುತ್ತಾನೆ. ಕೆಂಪು ಬಣ್ಣದ ಜಾಕೆಟ್, ಕಡು ನೀಲಿ ಬಣ್ಣದ ಬಣ್ಣದ ಟ್ರಾö್ಯಕ್ ಪ್ಯಾಂಟ್ ಧರಿಸಿರುತ್ತಾನೆ.
ಈ ರೀತಿ ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ದೊರೆತಲಿ ್ಲ ಶಹಾಪೂರ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೪೪ ಮೊಬೈಲ್ ಸಂಖ್ಯೆ ೯೪೮೦೮೦೪೦೪೬, ಅಥವಾ shಚಿhಚಿಠಿuಡಿbgm@ಞsಠಿ.gov.iಟಿ ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ೧೬ ವರ್ಷ ವಯಸ್ಸಿನ ಬಾಲಕ ನಾಪತ್ತೆ
೧೬ ವರ್ಷ ವಯಸ್ಸಿನ ಬಾಲಕ ನಾಪತ್ತೆ
Suresh15/05/2023
posted on
