ಬೆಳಗಾವಿ ೨೯- ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಇದೇ ದಿ. ೩೧ ಸೋಮವಾರ ಸಾಯಂಕಾಲ ೭ ಗಂಟೆಗೆ ಬೆಂಗಳೂರಿನ ರಂಗಪಯಣ ತಂಡದವರು ರಂಗಸಂಪದ ಸಹಯೋಗದೊಂದಿಗೆ “೫೫ ನಿಮಿಷದ ಒಂದು ಪ್ರೇಮದ ಕಥೆ” ನಾಟಕ ಪ್ರದರ್ಶನಗೊಳ್ಳಲಿದೆ.
“೫೫ ನಿಮಿಷದ ಒಂದು ಪ್ರೇಮದ ಕಥೆ” ಇದು ಇದೇ ದಿ ೩೧ ರಂದು ೩೧ ಕಲಾವಿದರೊಂದಿಗೆ ೩೧ ರಂಗಮಂದಿರಗಳಲ್ಲಿ ಏಕಕಾಲಕ್ಕೆ ಪ್ರದರ್ಶನಗೊಳ್ಳೂತ್ತಿರುವ ನಾಟಕವಿದಾಗಿದ್ದು ೨೦೨೩ ರ ಲಿಮ್ಕಾ ದಾಖಲೆಗೆ ಸೇರ್ಪಡೆಗೊಳ್ಳಲು ಹೊರಟಿರುವ ಈ ನಾಟಕದ ಪೂರ್ವ ಸಿದ್ಧತೆಗಾಗಿ ೨೨೦ ಕ್ಕೂ ಹೆಚ್ಚು ತಂತ್ರಜ್ಞರು ೩ ತಿಂಗಳಿಂದ ಶ್ರಮಿಸುತ್ತಿದ್ದಾರೆ.
ಪ್ರವೇಶ ಉಚಿತವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲ ರಂಗಾಸಕ್ತರು ಇದರ ಉಪಯೋಗ ಪಡೆಯುವಂತೆ ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > “೫೫ ನಿಮಿಷದ ಒಂದು ಪ್ರೇಮದ ಕಥೆ” ನಾಟಕ ಪ್ರದರ್ಶನ
“೫೫ ನಿಮಿಷದ ಒಂದು ಪ್ರೇಮದ ಕಥೆ” ನಾಟಕ ಪ್ರದರ್ಶನ
Suresh29/07/2023
posted on
More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023