ಬೆಳಗಾವಿ; ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ನೆಹರು ನಗರದಲ್ಲಿರುವ ಕನ್ನಡ ಭವನ ದಲ್ಲಿಂದು ಬೆಳಗಿನ 10:30 ಗಂಟೆಗೆ ಶತಮಾನ ಕಂಡ ಸಾಹಿತಿಗಳು ತಿಂಗಳ ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ.ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುರಮುರಿಯ ಗಂಗಾಧರ ಮಡಿವಾಳೇಶ್ವರ ಅವರ ಬದುಕು ಮತ್ತು ಬರಹ ಕುರಿತು ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗಡಿ ಕನ್ನಡಿಗ ದಿನಪತ್ರಿಕೆಯ ಸಂಪಾದಕ ಮುರುಗೇಶ ಶಿವಪೂಜಿ ಆಗಮಿಸಲಿದ್ದಾರೆ, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ.ಮಂಗಲಾ ಮೆಟ ಗುಡ್ಡ ಅವರು ವಹಿಸಲಿದ್ದಾರೆ. ಬೈಲಹೊಂಗಲದ ಹಿರಿಯ ಸಾಹಿತಿ ಶ್ರೀಮತಿ.ಗೌರದೇವಿ ತಾಳಿಕೋಟಿಮಠ ಅವರು ತುರಮುರಿಯ ಗಂಗಾಧರ ಮಡಿವಾಳೇಶ್ವರ ಅವರ ಬದುಕು ಮತ್ತು ಬರಹ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ, ಶ್ರೀಮತಿ ಪ್ರತಿಭಾ ಕಳ್ಳಿಮಠ, ವೀರಭದ್ರ ಅಂಗಡಿ, ಸುನಿಲ್ ಹಲವಾಯಿ ಮುಂತಾದವರು ಉಪಸ್ಥಿತರಿರಲಿದ್ದಾರೆ.