This is the title of the web page
This is the title of the web page

Please assign a menu to the primary menu location under menu

State

ಜನಮನ ರಂಜಿಸಿದ ಸಂಗೀತ ಕಾರ್ಯಕ್ರಮ


ಕುಷ್ಟಗಿ:ಸ್ಥಳೀಯ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಕೊಪ್ಪಳ ಮತ್ತು ಶ್ರೀ ಚಂದಾಲಿಂಗೇಶ್ವರ ಕ್ರೀಡಾ ಸಾಂಸ್ಕೃತಿಕ ಯುವಕ ಸಂಘದ ಸಹಯೋಗದೊಂದಿಗೆ ಸಂಗೀತ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದ ಮಹಾಂತಯ್ಯ ಹಿರೇಮಠ ನಿ.ಶಿಕ್ಷಕರು ಮಾತನಾಡುತ್ತಾ ನಮ್ಮ ಜನಸಾಮಾನ್ಯರ ಬದುಕನ್ನು ಬಿಂಬಿಸುವಂತಹ ಕಲೆ ಜಾನಪದ ಕಲೆಯಾಗಿದೆ. ಸಂಗೀತಕ್ಕೆ ಖಾಯಿಲೆಗಳನ್ನು ವಾಸಿ ಮಾಡುವ ಶಕ್ತಿ ಇದೆ ಎಂದರೆ ತಪ್ಪಾಗಲಾರದು. ನಮ್ಮ ಭಾರತೀಯ ಸಾಂಪ್ರದಾಯಿಕ ಸಂಗೀತ ಕಲೆಗಳಿಗೆ ಹೆಚ್ಚಿನ ಮಹತ್ವ ಇದ್ದು ಇಂದಿನ ಯುವಕರು ಆಸಕ್ತಿ ವಹಿಸಿ ಮೈಗೂಡಿಸಿಕೊಂಡು ಕಲೆಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ನಂತರ ಹಿರಿಯ ಕಲಾವಿದ ಶರಣಪ್ಪ ವಡಗೇರಿ ಮಾತನಾಡಿ ಕಲಾವಿದರ ಬದುಕು ತುಂಬಾ ದುಸ್ಥರವಾಗಿದೆ. ಇಲಾಖೆ ನೀಡುವ ಪ್ರಾಯೋಜಿತ ಕಾರ್ಯಕ್ರಮದ ಅನುದಾನ ಹೆಚ್ಚಿಸಬೇಕಿದೆ. ಇಂದಿನ ಬೆಲೆ ಏರಿಕೆ ಯುಗದಲ್ಲಿ ಕಾರ್ಯಕ್ರಮದ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಕೂಡಲೆ ಇಲಾಖೆ ಹೆಚ್ಚು ಅನುದಾನ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಕಲಾವಿದರ ಅಳಲು ತೋಡಿಕೊಂಡರು.

ನಂತರ ಕಲಾವಿದ ದೇವೆಂದ್ರಪ್ಪ ಕಮ್ಮಾರ ಹಾಗೂ ಸಂಗಡಿಗರು ಜನಪದ, ಸುಗಮ ಸಂಗೀತ ಹಾಗೂ ಇನ್ನೋರ್ವ ಕಲಾವಿದ ಭೀಮಪ್ಪ ಪೂಜಾರ ತತ್ವಪದ ಹಾಗೂ ಸುಗಮ ಸಂಗೀತ ಗೀತೆಗಳನ್ನು ಹಾಡಿ ರಂಜಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕಾಂತಗೌಡ ಪಾಟೀಲ್ ವಹಿಸಿದ್ದರು. ವೇದಿಕೆಯ ಮೇಲೆ ಅಮರೇಗೌಡ ಪಾಟೀಲ್, ಹಿರಿಯ ಕಲಾವಿದ ಎಸ್.ಎಸ್ ಹಿರೇಮಠ, ಮಲ್ಲನಗೌಡ ಅಸಿಮುಂದಿನ, ಚೆನ್ನಪ್ಪ ಬಾವಿಮನಿ, ಪರಸಪ್ಪ ನಂದಿಹಾಳ, ಮರಿಸ್ವಾಮಿ ಪೂಜಾರ್, ನಾಗರಾಜ್ ನಿಡಗುಂದಿ, ಶಿವಣ್ಣ ಪೂಜಾರಿ, ಶಿಕ್ಷಕ ಹನಮಂತಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Gadi Kannadiga

Leave a Reply