This is the title of the web page
This is the title of the web page

Please assign a menu to the primary menu location under menu

Local News

ಮಕ್ಕಳ ಕಲ್ಯಾಣ ಪೋಲಿಸ ಅಧಿಕಾರಿಗಳಿಗೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ಮತ್ತು ಕಾನೂನು ತರಬೇತಿ ಕಾರ್ಯಗಾರ ಮಕ್ಕಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ: ಮುರಳಿ ಮೋಹನ ರೆಡ್ಡಿ


ಬೆಳಗಾವಿ, ಸೆ.೦೬ : ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇಂತಹ ತರಬೇತಿ ಕಾರ್ಯಾಗಾರವು ತುಂಬಾ ಮಹತ್ವವಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಮಗು ತಮ್ಮ ಮುಂದೆ ಬಂದಾಗ ಆ ಮಗುವಿನ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸೂಕ್ತ ರೀತಿಯ ಆಪ್ತ ಸಮಾಲೋಚನೆ ಒದಗಿಸಿ ತಿಳುವಳಿಕೆ ನೀಡಬೇಕು. ವಿಶೇಷ ಮಕ್ಕಳ ಪೋಲಿಸ ಘಟಕದಲ್ಲಿ ಪೋಲಿಸ ಅಧಿಕಾರಿಗಳ ಪಾತ್ರ ಬಿನ್ನವಾಗಿರುತ್ತದೆ, ಎಕೆಂದರೆ ಕಾನೂನಿನ ಕುರಿತು ಅದರ ಪಾತ್ರ ಬದಲಾಗಿರುತ್ತದೆ ಅದರ ಜೊತೆಗೆ ಇತ್ತಿಚಿಗೆ ಮಕ್ಕಳಿಗೆ ಸಂಬಂಧಿಸಿದ ಕೆಲವು ಕಾಯ್ದೆ ಕಾನೂನುಗಳು ಕೂಡ ಬದಲಾಗಿರುತ್ತದೆ, ಈ ನಿಟ್ಟಿನಲ್ಲಿ ಪೋಲಿಸ ಅಧಿಕಾರಿಗಳ ಮನಸ್ಥಿತಿಯು ಸಹ ಬದಲಾಗಬೇಕಾಗಿರುತ್ತದೆ. ತಾವು ಈ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ಹಲವಾರು ರೀತಿಯಾಗಿ ಪಾತ್ರ ನಿರ್ವಹಿಸಬೇಕಾಗುತ್ತದೆ, ಎಕೆಂದರೆ ಮಗುವಿನ ಆಪ್ತರಾಗಿ, ಹಿತೈಶಿಯಾಗಿ ಭಾಷಾಂತಕಾರನಾಗಿ, ಆಪ್ತ ಸಮಾಲೋಚಕರಾಗಿ ಹೀಗೆ ನಾನಾ ರೀತಿಯಲ್ಲಿ ಮಗುವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಾವು ಕಾರ್ಯ ನಿರ್ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮುರಳಿ ಮೋಹನ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆ ಮಕ್ಕಳ ವಿಶೇಷ ಪೋಲಿಸ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಳಗಾವಿ, ಇವರ ಸಹಯೋಗದೊಂದಿಗೆ ಮಕ್ಕಳ ಕಲ್ಯಾಣ ಪೋಲಿಸ ಅಧಿಕಾರಿಗಳಿಗೆ ಒಂದು ದಿನದ ಸಾಮರ್ಥ್ಯ ಅಭಿವೃದ್ದಿ ಮತ್ತು ಕಾನೂನು ತರಬೇತಿ ಕಾರ್ಯಗಾರವನ್ನು ಸಪ್ಟೆಂಬರ್ ೦೪, ೨೦೨೩ ರಂದು ಬೆಳಿಗ್ಗೆ ೧೦ ಗಂಟೆಗೆ ಬೆಳಗಾವಿ ಪೊಲೀಸ್ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳಿಗೆ ಸಂಬಂದಿಸಿದಂತೆ ತಮ್ಮ ಇಲಾಖೆಯಿಂದ ತುಂಬಾ ಸಹಕಾರ ಸಿಗುತ್ತಿದ್ದು, ನಿರ್ವಹಿಸುತ್ತಿರುವ ಕಾರ್ಯವು ತುಂಬಾ ಶ್ಲಾಘನೀಯವಾದದ್ದು, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬರುವಂತಹ ಪ್ರಕರಣಗಳಾದ ಅನಾಥ, ಏಕಪೋಷಕ, ಪರಿತ್ಯಕ್ತ ಮಕ್ಕಳು, ಬಾಲಕಾರ್ಮಿಕ, ವಿಶೇಷ ನ್ಯೂನ್ಯತೆ ಹೊಂದಿರುವ ಮಕ್ಕಳು, ಜೈಲು ಖೈದಿ ವಾಸಿ ಮಕ್ಕಳು, ಸಾಂಕ್ರಾಮಿಕ ರೋಗಗಳನ್ನು ಹೊಂದಿರುವ ಮಕ್ಕಳು ತಮಗೆ ಕಂಡುಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿ ಅಂತಹ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸೋಣ ಹಾಗೂ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳಿಗೆ ಸಂಬಂದಿಸಿದಂತೆ ಪ್ರಥಮ ವರ್ತಮಾನ ವರದಿಗಳನ್ನು ಸರಿಯಾದ ಸಮಯಕ್ಕೆ ನೊಂದಣಿ ಮಾಡದಿರುವುದು ಕಂಡು ಬಂದಿರುತ್ತದೆ, ಆದ್ದರಿಂದ ತಮ್ಮ ಇಲಾಖೆಯವರಿಗೆ ಮಕ್ಕಳ ಕಲ್ಯಾಣ ಸಮಿತಿಯಿಂದ ಮನವಿ ಮಾಡುವ ವಿಷಯ ಎನೆಂದರೆ ತಮ್ಮ ಮುಂದೆ ಬಾಲ್ಯ ವಿವಾಹ ಪೋಕ್ಸೋ ಪ್ರಕರಣಗಳು ಮಾಹಿತಿ ಬಂದಲ್ಲಿ ಎಪ್ ಐ ಆರ್ ಆದಷ್ಟು ಬೇಗನೆ ನೋಂದಣಿ ಮಾಡಿ ಮಾಹಿತಿ ಮಕ್ಕಳ ಕಲ್ಯಾಣ ಸಮಿತಿಗೆ ನೀಡಬೇಕೆಂದು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾದ ಮಕ್ಕಳ ಕಲ್ಯಾಣ ಸಮಿತಿಯ ಅದ್ಯಕ್ಷರಾದ ಸಿಸ್ಟರ ಲೂರ್ದ ಮೇರಿ ಜೆ ಅವರು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೋಜನೆಗಳಾದ ಪ್ರಾಯೋಜಕತ್ವ ಯೋಜನೆ, ವಿಶೇಷ ಪಾಲನಾ ಯೋಜನೆ, ಉಪಕಾರ ಯೋಜನೆ, ಮುಖ್ಯಮಂತ್ರಿ ಬಾಲಸೇವಾ ಯೋಜನೆ ಹಾಗೂ ಪಿ.ಎಮ್. ಕೇರ್ ಪಾರ್ ಚಿಲ್ಡ್ರನ್ ಈ ಯೋಜನೆಗಳ ಕುರಿತು ಮಾಹಿತಿ ನೀಡುತ್ತಾ ಬೆಳಗಾವಿ ಜಿಲ್ಲೆಯಲ್ಲಿರುವ ಮಕ್ಕಳಿಗೆ ಸಂಬಂಧಿಸಿದ ಮಕ್ಕಳ ಪಾಲನಾ ಸಂಸ್ಥೆಗಳು ಹಾಗೂ ಮಕ್ಕಳ ಸಹಾಯವಾಣಿ-೧೦೯೮ರ ಕುರಿತು ಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಹಾಂತೇಶ ಭಜಂತ್ರಿ, ಅವರು ಮಾಹಿತಿ ನೀಡಿದರು.
ಅದೇ ರೀತಿಯಾಗಿ ಯಾವುದೇ ಮಗು ನಿಮ್ಮ ಹತ್ತಿರ ಬಂದು ಸಮಸ್ಯೆಗಳ ಅವಶ್ಯಕತೆಗಳ ಬಗ್ಗೆ ಹೇಳಿಕೊಂಡಾಗ ಆ ಮಕ್ಕಳ ಸಮಸ್ಯೆಯನ್ನು ಆಲಿಸಿ ಆ ಮಗುವಿಗೆ ಸರಿಯಾದ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆ ನೀಡಿದಾಗ ಅವರು ನಿಮ್ಮನ್ನು ದೇವರನ್ನಾಗಿ ಕಾಣುತ್ತಾರೆ. ನಮ್ಮ ದೇಶವು ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು,. ಆದ್ದರಿಂದ ಜಗತ್ತಿನಲ್ಲಿಯೇ ಮಕ್ಕಳನ್ನು ದೇವರು ಎಂದು ಕರೆದಿರುವ ರಾಷ್ಟ್ರ ಅದು ಭಾರತ ದೇಶ ಮಾತ್ರ ಅದಕ್ಕಾಗಿ ೧೮ ವರ್ಷದೊಳಗಿನ ಎಲ್ಲ ಮಕ್ಕಳು ಶಿಕ್ಷಣ ಪಡೆದು ಈ ದೇಶದ ಭವಿಷತ್ತು ಆಗಬೇಕು ಎಂದರು.
ಅದೇ ರೀತಿಯಾಗಿ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿಯ ಅನಾಥ, ಏಕಪೋಷಕ, ಬಾಲಕಾರ್ಮಿಕ, ವಿಶೇಷ ನ್ಯೂನ್ಯತೆ ಹೊಂದಿರುವ ಮಕ್ಕಳು, ಜೈಲು ಖೈದಿ ವಾಸಿ ಮಕ್ಕಳು, ಸಾಂಕ್ರಾಮಿಕ ರೋಗಗಳನ್ನು ಹೊಂದಿರುವ ಮಕ್ಕಳು ಕಂಡುಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿ, ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಸಹ ನಮ್ಮ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಮಾಡಲು ತಿಳಿಸಿದರು.
ವಿಶೇಷ ಮಕ್ಕಳ ಪೋಲಿಸ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತರುವ ಮಕ್ಕಳ ಕಲ್ಯಾಣ ಪೋಲಿಸ ಅಧಿಕಾರಿಗಳ ಪಾತ್ರ ತುಂಬಾ ಮಹತ್ವವಾದದು,್ದ ಎಕೆಂದರೆ ತಾಲೂಕೂವಾರು ಕ್ಷೇತ್ರ ಮಟ್ಟದಲ್ಲಿ ಸಾಕಷ್ಟು ಮಕ್ಕಳು ತಮ್ಮ ಮುಂದೆ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಾಗ ಆ ಮಕ್ಕಳ ಸಮಸ್ಯೆಯನ್ನು ಸರಿಯಾದ ರೀತಿಯಿಂದ ಆಲಿಸಿ ಅವರಿಗೆ ಸೂಕ್ತ ಆಪ್ತಸಮಾಲೋವನೆ ಒದಗಿಸಿ ಆ ಮಕ್ಕಳ ಸಮಸ್ಯೆಗಳನ್ನು ಆಲಿಸಬೇಕು. ಹಾಗೂ ಮಕ್ಕಳ ಜೋತೆಗೆ ಒಬ್ಬ ಪೋಲಿಸ ಅಧಿಕಾರಿಯಾಗಿ ಹಾಗೂ ಪೋಲಿಸ ಭಾಷೆಯಲ್ಲಿ ಮಾತನಾಡದೆ ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣಿ ಹಾಗೂ ಪ್ರತಿಯೊಂದು ಪೋಲಿಸ ಠಾಣೆಯಲ್ಲಿ ಮಕ್ಕಳ ಸ್ನೇಹಪರವಾದ ವಾತಾವರಣವನ್ನು ನಿರ್ಮಿಸಿ ಮಕ್ಕಳಿಗೆ ಪೋಲಿಸರ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ಭರವಸೆ ಕೊಡಬೇಕು, ಪ್ರತಿ ವಾರಕೊಮ್ಮೆ ಬೀಟ್ ಪೋಲಿಸರು ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಮತ್ತು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅವರ ಜೊತೆಗೆ ಆಟ ಆಡಿ ಅವರ ಮೂಲಭೂತ ಸಮಸ್ಯೆ/ಸೌಕರ್ಯಗಳನ್ನು ಆಲಿಸಿ ಅದಕ್ಕೆ ಸಂಬಂದಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಹಾಗೂ ಪ್ರತಿ ಗುರುವಾರಕ್ಕೋಮ್ಮೆ ತೆರೆದ ಮನೆ ಕಾರ್ಯಕ್ರಮ ಕೇವಲ ಪೋಟೊಗಳಿಗೆ ಮಾತ್ರ ಸೀಮಿತವಾಗದೆ ಮಕ್ಕಳಿಗೆ ಬಾಲ್ಯ ವಿವಾಹ, ಪೋಕ್ಸೋ, ಬಾಲಕಾರ್ಮಿಕ ಹಾಗೂ ಇನ್ನಿತರ ಪ್ರಕರಣಗಳ ಕುರಿತು ಮಕ್ಕಳ ಮನ ಮುಟ್ಟುವಂತೆ ಅರಿವು ಮೂಡಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ಪೋಲಿಸ ಅದೀಕ್ಷಕರಾದ ವಹಿಸಿದ ಡಾ ಸಂಜೀವ ಪಾಟೀಲ ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹರೀಶ ಜೋಗಿ ಅವರು ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯನಿರ್ವಹಣೆ, ಲೈಂಗಿಕ ಅಫರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ೨೦೧೨ ನಿಯಮಗಳು ಹಾಗೂ ಮಕ್ಕಳು ಕಾಣೆಯಾದ ಪ್ರಕರಣಗಳಲ್ಲಿ ಪ್ರಮಾಣಿಕ ನಿರ್ವಹಣಾ ಪ್ರಕ್ರಿಯೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಕುರಿತು ಉಪನ್ಯಾಸ ನೀಡಿದರು. ಪೋಲಿಸ ತರಬೇತಿ ಉಪನ್ಯಾಸಕರಾದ ಮಲ್ಲಪ್ಪಾ ಜಾಲಗಾರ ಇವರು ಮಕ್ಕಳ ನ್ಯಾಯ (ಆರೈಕೆ & ರಕ್ಷಣೆ) ಕಾಯ್ದೆ-೨೦೧೫ ನಿಯಮ ೨೦೧೬ ಪ್ರಕರಣಗಳ ನಿರ್ವಹಣೆ, ಬಾಲ ನ್ಯಾಯ ಮಂಡಳಿ ಕುರಿತು ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಿದರು. ವೀರೇಶ ದೊಡ್ಡಮನಿ ಸ್ವಾಗತಿಸಿದರು, ಮಲ್ಲಪ್ಪಾ ಕುಂದರಗಿ ನಿರೂಪಿಸಿದರು. ಜಿಲ್ಲಾ ಪೋಲಿಸ ಇಲಾಖೆ ಸಿಬ್ಬಂದಿಗಳು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Leave a Reply