This is the title of the web page
This is the title of the web page

Please assign a menu to the primary menu location under menu

Local News

ಅಂಗವಿಕಲ ಕುಟುಂಬದ ಮೇಲೆ ಪೊಲೀಸ್ ಮತ್ತು ಪಂಚಾಯತಿ ಸದಸ್ಯರಿಂದ ದಬ್ಬಾಳಿಕೆ ಸಹಾಯಕ್ಕೆ ಅಂಗಾಲಾಚಿದ ಕುಟುಂಬ


ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮ್ಯಾಕಲಮರಡಿ ಗ್ರಾಮದಲ್ಲಿ ಪೊಲೀಸರು ಹಾಗೂ ಪಂಚಾಯತಿಯ ಸದಸ್ಯರಿಂದ ನಮಗೆ ತುಂಬಾ ಅನ್ಯಾಯ ದೌರ್ಜನ್ಯ ಆಗಿದೆ ಎಂದು ಇಂದು ಬೆಳಗಾವಿಯಲ್ಲಿ ಗ್ರಾಮದ ಕುಟುಂಬವೊಂದು ಬಂದು ಆರೋಪ ಮಾಡಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಕುಟುಂಬದ ಸದಸ್ಯ, ನಮ್ಮ ಮನೆಯಲ್ಲಿ ಇಬ್ಬರು ಅಂಗವಿಕಲರು ಹಾಗೂ ಸಣ್ಣ ಮಕ್ಕಳು ಇರುವದರಿಂದ, ಸುಮಾರು ನಾಲ್ಕು ತಿಂಗಳ ಹಿಂದೆಯೇ ಮನೆ ಮುಂದೆ ನಡೆದಾಡಲು  ಚರಂಡಿ  ನಿರ್ಮಾಣ ಮಾಡಲು ಗ್ರಾಮ ಪಂಚಾಯತಿಗೆ ಅರ್ಜಿ ಕೊಟ್ಟರೂ ಯಾರೂ ಮಾಡಲಿಲ್ಲ.

ನಂತರ ತಾಲೂಕಾ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದರು, ಅವರು ಬಂದು ಪರೀಕ್ಷಿಸಿ ಚರಂಡಿ ನಿರ್ಮಾಣ ಮಾಡಿ ಅಂತ ಹೇಳಿದಾಗ, ಅವರು ಹೇಳಿ ಮೂರು ದಿನದಲ್ಲಿ ಅಲ್ಲಿ ತೆಗ್ಗು ಹಡ್ಡಿ, ಕಬ್ಬಿಣದ ಸಳಿ ಹಾಕಿದರು,  ಎರಡು ತಿಂಗಳಾದರೂ ಇನ್ನೂ ಹಾಗೇ ಇದೆ, ಹಾಗೆ ಹಡ್ಡಿ ಬಿಟ್ಟ ಚರಂಡಿಯಲ್ಲಿ ಅನೇಕ ಸಾರಿ ನಮ್ಮ ತಂದೆ, ಮಕ್ಕಳು ಬಿದ್ದು ಗಾಯಗೊಂಡಿದ್ದಾರೆ, ಕೊನೆಗೆ  ಈಗ ನಾಲ್ಕೈದು ದಿನಗಳ ಹಿಂದೆ ನನ್ನ ಬೈಕ್ ಕೂಡಾ ಸ್ಕಿಡ್ ಆಗಿ ಆ ತಗ್ಗಿನಲ್ಲಿ ಬಿತ್ತು.

ಈ ಸಂಬಂಧ ನಾನು ಪೊಲೀಸ್ ಠಾಣೆಗೆ ಹೋಗಿ ಹೇಳಿದಾಗ, ಎರಡು ದೀನ ನನ್ನ ಪೊಲೀಸ್ ಠಾಣೆಯಲ್ಲಿ ಕೂರಿಸಿ ಮೂರನೇ ದೀನ, ನಿನ್ನ ಗಾಡಿ ತಗೆದುಕೊಂಡು ಬಾ ನಿನಗೆ ನ್ಯಾಯ ಕೊಡಿಸುತ್ತೇವೆ ಎಂದು ನೆಸರಗಿ ಠಾಣೆಯ psi ಹೇಳಿದರು. ಅವರು ಹೇಳಿದಂತೆ ಗಾಡಿ ತಂದು ಠಾಣೆಗೆ ಹಚ್ಚಿದೆ, ಆದರೆ psi ನನ್ನ ಮೇಲೆ ದೌರ್ಜನ್ಯ ಮಾಡತೊಡಗಿದರು, ಇತ್ತ ಮನೆಕಡೆ ಗಾಡಿ ತಗೆದ ಒಂದೇ ತಾಸಿನಲ್ಲಿ ಚರಂಡಿ ನಿರ್ಮಾಣವಾಯಿತು.

ಈಗ ಆ ಚರಂಡಿ ತುಂಬಾ ಎತ್ತರ ಕಟ್ಟಿದ್ದಾರೆ ಅದನ್ನು ದಾಟಿ ನಮಗೆ ಹೋರಗೆ ಹೋಗಲು ಆಗುತ್ತಿಲ್ಲ ಒಳಗೆ ಬರಲು ಆಗುತ್ತಿಲ್ಲ, ಬೇಕಂತಲೇ ನಮಗೆ ತೊಂದರೆ ಕೊಡಬೇಕಂತಲೆ ಹೀಗೆ ಮಾಡ್ತಾ ಇದಾರೆ ಎಂದರು.

ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಳಿದಾಗ ಅಲ್ಲಿಯ psi ಸಿಗಿಹಳ್ಳಿ ಅವರು ಎಲ್ಲರ ಮುಂದೆ ನಮಗೆ ಅವಾಚ್ಯ ಶಬ್ದಗಳಿಂದ ಬೈದು, ಗಡಿಪಾರು ಮಾಡುವದಾಗಿ ಹಾಗೂ ಜೀವ ಬೆದರಿಕೆಯನ್ನು ಕೂಡಾ ಹಾಕಿದರು,, ಪಂಚಾಯತಿ ಬಗ್ಗೆ ದೂರು ನೀಡಬಾರದು, ಈ ವಿಷಯದ ಬಗ್ಗೆ ಮುಂದುವರೆದರೆ, ನಿಮಗೆ ಚಟ್ಟ ಕಟ್ಟಿ, ಗಡಿಪಾರು ಮಾಡುವೆ ಎಂದು ಬೇದರಿಸುತ್ತಾರೆ ಎಂದರು.. ನಾವೇನು ತಪ್ಪು

ಮಾಡದಿದ್ದರೂ ನಮ್ಮನ್ನ ಅಪರಾಧಿ ತರ ನೋಡಿ ಮೂರು ಸಲ ಬಂದು ವಿಚಾರಣೆ ಮಾಡಿ, ಪಂಚಾಯತಿಗೆ ನೀವು ಹೋಗಬಾರದೆಂದು ಪಿಎಸ್.ಐ ವಾರ್ನ್ ಮಾಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ, ಅಧ್ಯಕ್ಷರು ನಮಗೆ ತಿಳಿದಾಗ ನಾವು ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ, ಪಂಚಾಯತಿ ಸದಸ್ಯರೇ ಅಲ್ಲಿ ಗುತ್ತಿಗೆದಾರ ಆಗಿದ್ದು, ಅವರಿಂದಲೇ ನಮಗೆ ಅನ್ಯಾಯ ಆಗುತ್ತಿದೆ ಎಂದರು.

ಈಗ ಕಟ್ಟಿದ ಚರಂಡಿಯಿಂದ ನಮಗೆ ದಾಟಡಲು ಬರುವದಿಲ್ಲ, ಮತ್ತೆ  ಪಿಎಸಐ ಹಾಗೂ ಪಂಚಾಯತಿ ಸದಸ್ಯರಿಂದ ನಮಗೆ ಬೆದರಿಕೆ ಇದೆ ಈ ಸಮಸ್ಯೆಯಿಂದ ನಮ್ಮ ಕುಟುಂಬವನ್ನು ಪಾರು ಮಾಡಿ ಎಂದು ಕುಟುಂಬ ಸದಸ್ಯ ಈರಪ್ಪ ನಾಗನೂರ ಕೇಳಿಕೊಂಡರು.


Gadi Kannadiga

Leave a Reply