ಬೆಳಗಾವಿ: ಮದುವೆ ಸಮಾರಂಭದಲ್ಲಿ ಮಾಜಿ ಯೋಧನೋರ್ವ ಗುಂಡಿನ ಸುರಿಮಳೆಗೈದಿರುವ ಘಟನೆ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ನಡೆದಿದೆ.
ರಫಿಕ್ ಅಹಮದ್ ತಹಶೀಲ್ದಾರ ಎಂಬ ಮಾಜಿ ಯೋಧ ಮದುವೆ ಸಮಾರಂಭದಲ್ಲಿ ತನ್ನ ಲೈಸನ್ಸ್ ಪಿಸ್ತೂಲಿನಿಂದ 5 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಮಾಜಿ ಸೈನಿಕನ ಹುಚ್ಚಾಟದಿಂದ ಮದುವೆಗೆ ಆಗಮಿಸಿದ್ದರು ಒಂದು ಕ್ಷಣ ದಂಗಾಗಿದ್ದಾರೆ.
ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಮಾಜಿ ಯೋಧನ ವಿರುದ್ಧ ಸುಮಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುಂಡು ಹಾರಿಸಿರುವ ವಿಡಿಯೋ ವೈರಲ್ ಆಗಿದೆ.