This is the title of the web page
This is the title of the web page

Please assign a menu to the primary menu location under menu

Local News

ಕೋಟಿ ಕೋಟಿ ಲೋಟಿ ಮಾಡಿ ದುಬೈಗೆ ಹಾರಲು ಯತ್ನಿಸಿದ ವಂಚಕ ಅರೆಸ್ಟ್


ಬೆಳಗಾವಿ: 4 ಕೋಟಿ 41 ಲಕ್ಷ ರುಪಾಯಿ ವಂಚಿಸಿ ದುಬೈಗೆ ಹಾರಲು ಯತ್ನಿಸುತ್ತಿದ್ದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಮಸ್ಕಾತಿ ಮಹಲ್ ನಿವಾಸಿ ಭವ್ಯಹರೇನ್ ದೇಸಾಯಿ ಬಂಧಿತ ಆರೋಪಿ.
ಬೆಳಗಾವಿಯ ಆಟೋಮೋಟಿವ್ ಬಸ್ ಆಯಂಡ್ ಕೋಚ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಗ್ರೂಪ್ ಫೈನಾನ್ಸ್ ಮ್ಯಾನೇಜರ್ ಆಗಿದ್ದ ಆರೋಪಿ ಭವ್ಯಹರೇನ ದೇಸಾಯಿ ಕೆಲಸಕ್ಕೆ ಸೇರಿ 7 ತಿಂಗಳಲ್ಲಿ ಮಾಲೀಕನ ವಿಶ್ವಾಸ ಗಳಿಸಿದ್ದ.
ಹಲವು ಕಂಪನಿಗಳೊಂದಿಗಿನ ವ್ಯವಹಾರವನ್ನೇ ದಾಳವಾಗಿಸಿಕೊಂಡ ಆರೋಪಿ ನಕಲಿ ಇ-ಮೇಲ್ ಕಳುಹಿಸಿ ಪರಿಚಯಸ್ಥರ ವಿವಿಧ ಬ್ಯಾಂಕ್ ಖಾತೆಗೆ ಆರ್​ಟಿಜಿಎಸ್​ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ.
ಈ ವಿಚಾರ ಕಂಪನಿಯ ಮಾಲೀಕರ ಗಮನಕ್ಕೆ ಬರುತ್ತಿದ್ದಂತೆ ಆರೋಪಿ ಭವ್ಯಹರೇನ್ ದೇಸಾಯಿ ತಲೆಮರೆಸಿಕೊಂಡಿದ್ದಾನೆ.

ಈ ಬಗ್ಗೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆನಲೈನ್ ವಂಚನೆ ಆಗಿದ್ದರಿಂದ ಕೇಸ್ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತಕ್ಷಣವೇ ಆರೋಪಿ ದೇಶ ಬಿಟ್ಟು ಹೋಗದಂತೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು.

ಈ ನಡುವೆ ದುಬೈಗೆ ಹೋಗಲು ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದ್ದು, ಸದ್ಯ 2 ಕೋಟಿ 50 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


Gadi Kannadiga

Leave a Reply