ಹಿರೇಬಾಗೇವಾಡಿ ಯಲ್ಲಿ ನಡೆದ ಸೌಹಾರ್ದದ ಇಫ್ತಿಯಾರ್ ಕೂಟ ಕಾರ್ಯಕ್ರಮದಲ್ಲಿ ರಾಜ್ಯದ ಯುವ ಕಾಂಗ್ರೆಸ ಅಧ್ಯಕ್ಷರಾದ ಮೊಹಮ್ಮದ್ ನಲಪಾಡ್, ಮ್ರಿನಾಲ್ ಹೆಬ್ಬಾಳಕರ, ದರ್ಗಾ ಅಶ್ರಫ್ ಕಾದ್ರಿ , ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯರು, ಅರಳಿಕಟ್ಟಿ ಶಿವಮೂರ್ತಿ ದೇವರು, ಜಾಲಿ ಕರೆಮ್ಮ ಮಂದಿರದ ಉಳವಪ್ಪ ಅಜ್ಜನವರು ಭಾಗಿಯಾಗಿ ಜಾತಿ ಯಾವುದೇ ಇದ್ದರೂ ನಾವೆಲ್ಲ ಮನುಷ್ಯರು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಸಕಲ ಜೀವರಾಶಿಗಳಲ್ಲಿ ಮೇಲ್ ಸ್ತರದಲ್ಲಿರುವ ಮನುಷ್ಯ ಜನ್ಮವನ್ನು ಸದುಪಯೋಗಪಡಿಸಿಕೊಳ್ಳಬೇಕು. ಜಾತಿ ಜಾತಿ ಮಧ್ಯೆ ವೈಷಮ್ಯ ಹುಟ್ಟುಹಾಕುವುದು ಸರಿಯಲ್ಲ. ಶಾಂತಿ, ಸಹಬಾಳ್ವೆ ಇಂದು ಮುಖ್ಯವಾಗಿದೆ.
82 ಲಕ್ಷ ಜೀವ ರಾಶಿಗಳಲ್ಲಿ ಮನುಷ್ಯ ಜನ್ಮ ಸಿಕ್ಕಿರುವುದು ಪುಣ್ಯ. ಅದನ್ನು ಸದುಪಯೋಗಪಡಿಸಿಕೊಳ್ಳೋಣ. ಎಲ್ಲರೂ ಸೌಹಾರ್ದತೆಯಿಂದ ಬಾಳೋಣ.ಮುತ್ನಾಳದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಾವೆಲ್ಲ ಕುಡಿಯುವುದು ಒಂದೇ ನೀರು, ಬದುಕುವುದು ಒಂದೇ ನೆಲದಲ್ಲಿ, ಉಸಿರಾಡುವುದು ಒಂದೇ ಗಾಳಿಯನ್ನು. ಅದಕ್ಕೆ ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಹೆಸರಿರಬಹುದು. ನಾವೆಲ್ಲರೂ ಸಹೋದರತ್ವವನ್ನು ಮೈಗೂಡಿಸಿಕೊಂಡು ಬಾಳಬೇಕು. ಎಲ್ಲ ಧರ್ಮಗಳ ಸಂದೇಶವೂ ಅದೇ ಆಗಿದೆ ಎಂದರು… ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಗುರು ಹಿರಿಯರು ಹಾಗೂ ಮುಖಂಡರು ಯುವಕರು ಉಪಸ್ಥಿತಿ ಇದ್ದರೂ.