This is the title of the web page
This is the title of the web page

Please assign a menu to the primary menu location under menu

State

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕೈಬೀಸಿ ಕರೆಯುತಿದೆ ಫಲ-ಪುಷ್ಪ ಪ್ರದರ್ಶನ


ಕೊಪ್ಪಳ ಜನವರಿ 08:- ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಈ ಬಾರಿ ತೋಟಗಾರಿಕೆ ಇಲಾಖೆಯು ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನವು ತುಂಬಾ ಆಕರ್ಷಣೀಯವಾಗಿದ್ದು, ಜನರನ್ನು ತನ್ನತ್ತ ಕೈಬೀಸಿ ಕರೆಯುವಂತಿದೆ.
*ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ:* ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಜನವರಿ 08 ರಿಂದ ಜ. 10 ರವರೆಗೆ 3 ದಿನಗಳ ಕಾಲ ಶ್ರೀ ಮಠದ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನ-2023ಕ್ಕೆ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಚಾಲನೆ ನೀಡಿದರು. ಸಂಸದರಾದ ಕರಡಿ ಸಂಗಣ್ಣ ಅವರು ಸ್ಥಬ್ದ ಚಿತ್ರಗಳ ಉದ್ಘಾಟನೆ ನೆರವೇರಿಸಿದರು. ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಕಾಂತಾರ ಮಾದರಿ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
*ವಿವಿಧ ಬಗೆಯ ಹೂ ಮತ್ತು ಹಣ್ಣಿನ ಮಾದರಿಗಳು:* ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂವಿನ ಮತ್ತು ಹಣ್ಣಿನ ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ಹೂವಿನ ಜೋಡಣೆ ಮುಖಾಂತರ ಕಾಂತಾರ ಮಾದರಿಯನ್ನು ನಿರ್ಮಿಸಲಾಗಿದೆ ಹಾಗೂ ವಿವಿಧ ಮಾದರಿಯ ಅಲಂಕಾರಿಕ ಗಿಡಗಳ ಜೋಡಣೆ, ಕ್ಯಾಕ್ಟಸ್ ಮಾದರಿ, ವರ್ಟಿಕಲ್ ಮಾದರಿ, ತ್ರೀಕೋನಾಕಾರ ಅಲಂಕಾರಿಕ ಗಿಡಗಳ ಮಾದರಿ, 10 ರಿಂದ 18 ವಯಸ್ಸಿನ ಕುಬ್ಜ (ಬೋನ್ಸಾಯ್) ಗಿಡಗಳ ಮಾದರಿ, ಹುಲ್ಲಿನ ಮಾದರಿಯ ನೀರಿನ ಜಲಪಾತ ಅನಾವರಣ, ವಿವಿಧ ಹಣ್ಣು ಮತ್ತು ತರಕಾರಿಗಳ ಕೆತ್ತನೆ, ಜಿಲ್ಲೆಯ ರೈತರು ಬೆಳೆದ ತೋಟಗಾರಿಕೆ ಬೆಳೆಗಳ ಪ್ರದರ್ಶಿಕೆಗಳು, ವಿವಿಧ ಅಲಂಕಾರಿಕ ಕುಂಡಗಳ ಜೋಡಣೆ, ಬಣ್ಣ ಬಣ್ಣದ ಹೂವುಗಳ ಮತ್ತು ತರಕಾರಿಗಳ ಜೋಡಣೆ ಹಾಗೂ ಇಲಾಖೆಯ ಯೋಜನೆಗಳ ಮಾಹಿತಿಗಳ ಬಗ್ಗೆ ವಿವರಣೆ ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಪರಿಕರಗಳ ಪ್ರದರ್ಶನವನ್ನು ಈ ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಗಿದೆ.
ಎಲ್ಲಾ ಸಾರ್ವಜನಿಕರು ಮತ್ತು ರೈತರು ಫಲಪುಷ್ಪ ಪ್ರದರ್ಶನವನ್ನು ಕಣ್ಣುಂಬಿಕೊಳ್ಳಬೇಕೆಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.


Gadi Kannadiga

Leave a Reply