ಗದಗ : ಐತಿಹಾಸಿಕ ಲಕ್ಕುಂಡಿ ಉತ್ಸವದ ಅಂಗವಾಗಿ ಆಯೋಜಿಸಿದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಾಪನಾಶಿಯ ಆಯುಷ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ೧೦ ಜನ ಯೋಗಪಟುಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.
ಬಾಲಕಿಯರ ವಿಭಾಗದಲ್ಲಿ ಸವಿತಾ ಕುಕನೂರ ನಗದು ಬಹುಮಾನದೊಂದಿಗೆ ದ್ವಿತೀಯ ಹಾಗೂ ಜ್ಯೋತಿ ಹೊಸಮನಿ ನಗದು ಬಹುಮಾನದೊಂದಿಗೆ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಹಾಗೂ ತಂಡಕ್ಕೆ ಸಚಿವ ಸಿ.ಸಿ.ಪಾಟೀಲ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಪಂ ಸಿಇಓ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಪಾಪನಾಶಿಯ ಆಯುಷ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ ಮತ್ತಿಗಟ್ಟಿ, ಯೋಗ ತರಬೇತುದಾರರಾದ ಸುಧಾ ಪಾಟೀಲ ಹಾಗೂ ಶೋಭಾ ದಡವಾಡ ಸೇರಿದಂತೆ ಮುಂತಾದವರು ಇದ್ದರು.
Gadi Kannadiga > State > ಪಾಪನಾಶಿಯ ಯೋಗಪಟುಗಳ ಉತ್ತಮ ಪ್ರದರ್ಶನ