This is the title of the web page
This is the title of the web page

Please assign a menu to the primary menu location under menu

Local News

ಜೆ ಎಸ್ ಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ ನ್ಯಾಕ್ ನಿಂದ ‘ಎ’ ಗ್ರೇಡ್ ಮಾನ್ಯತೆ


ಬೆಳಗಾವಿ ಜೂ.೨೦.: ಗೋಕಾಕಿನ ಜೆ ಎಸ್ ಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್) ಕಮಿಟಿಯು ಡಾ. ರಾಜಕುಮಾರ್ ಅಧ್ಯಕ್ಷತೆಯಲ್ಲಿ ಡಾ. ಜಗನ್ ಕರಾಡೆ , ಡಾ. ಅನಿಲ್ ಅವರನ್ನೊಳಗೊಂಡ ತ್ರಿಸದಸ್ಯ ತಂಡ ಜೂನ್ ೨೭-೨೮, ೨೦೨೩ರಂದು ಭೇಟಿ ನೀಡಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಮೌಲ್ಯಮಾಪನ ಪರಿಶೀಲಿಸಿತು. ಆಮೂಲಾಗ್ರವಾಗಿ ಪರಿಶೀಲಿಸಿದ ತಂಡ ಮಹಾವಿದ್ಯಾಲಯಕ್ಕೆ ‘ಎ’ ಗ್ರೇಡ್ ಮಾನ್ಯತೆಯನ್ನು ನೀಡಿದೆ. ಸತತ ಮೂರನೇ ಬಾರಿಗೆ ಮಹಾವಿದ್ಯಾಲಯ ‘ ಎ’ ಗ್ರೇಡ್ ಪಡೆದುಕೊಂಡಿದೆ.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ಕಡಕೋಳ, ವಿಶ್ವಸ್ಥ ಮಂಡಳಿ ಅಧ್ಯಕ್ಷರಾದ ಡಾ. ಉದಯ ಆಜರಿ, ಕಾರ್ಯದರ್ಶಿ ಆರ್. ಎಂ. ವಾಲಿ, ನ್ಯಾಕ್ ಸಂಯೋಜಕರಾದ ಪ್ರೊ. ಆರ್. ಎಂ. ಮಹೇಂದ್ರಕರ ಉಪಸ್ಥಿತರಿದ್ದರು ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಆಶಾಲತಾ ಶಂಕರ ತೇರದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .


Leave a Reply