This is the title of the web page
This is the title of the web page

Please assign a menu to the primary menu location under menu

State

ಅದ್ದೂರಿಯಾಗಿ ಜರುಗಿದ ಜಾತ್ರಾ ಮಹೋತ್ಸವ


   ಕುಷ್ಟಗಿ:-  ತಾಲೂಕಿನ ಗುಮಗೇರಾ ಗ್ರಾಮದಲ್ಲಿ ಶ್ರೀ ಓಂಕಾರೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪುರಾಣ ಕಾರ್ಯಕ್ರಮ ವನ್ನು ದಿ.24/2/2023 ರಿಂದ 4/3/2023 ರವರೆಗೆ 9 ದಿನಗಳವರೆಗೆ ನಡೆಸಲಾಯಿತು.ಈಗಾಗಲೇ ಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮ, ವಿವಾಹ ಕಾರ್ಯಕ್ರಮ, ಸೀಮಂತ ಕಾರ್ಯಕ್ರಮ, ಬಿತ್ತುವ ಕಾರ್ಯಕ್ರಮ, ಹಾಗೂ ರಾಶಿ ಮಾಡುವ ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರರ ಕಾಲದಲ್ಲಿ ನಡೆಸುವಂತೆ ಗುಮಗೇರಾ ಗ್ರಾಮದಲ್ಲಿ ಸಕಲ ಸದ್ಭಕ್ತರು ಸೇರಿಕೊಂಡು ಬಹು ವಿಜೃಂಭಣೆಯಿಂದ ಮಾಡುತ್ತಿದ್ದಾರೆ. 9 ದಿನಗಳ ಕಾಲ ಪ್ರತಿನಿತ್ಯ ವಿವಿಧ ರೀತಿಯ ಪ್ರಸಾದವನ್ನು 8 ಎಂಟು ತಂಡದವರು ವಿವಿಧ ರೀತಿಯ ಖಾದ್ಯ ಪದಾರ್ಥಗಳನ್ನು ದಿನಿತ್ಯದ ಅನ್ನ ದಾಸೋಹಕ್ಕೆ ಸಕಲ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಪ್ರತಿ ವರ್ಷದಂತೆ ಈ ವರ್ಷವು ಕೂಡ ಮಾಡಿಸಿದ್ದರು.8 ನೇ ದಿನ ಸಾಯಂಕಾಲ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ಕಾರ್ಯಕ್ರಮ, 4/3/2023ರಂದು ಶ್ರೀ ಓಂಕಾರೇಶ್ವರನಿಗೆ ಮಹಿಳೆಯರು ಕುಂಭದೊಂದಿಗೆ ಗಂಗಾಸ್ನಾನ, ಮಹಾರುದ್ರಾಭಿಷೇಕ, ಮಧ್ಯಾಹ್ನ ಸ್ವಾಮಿಗಳಿಗೆ, ಭಕ್ತಾದಿಗಳಿಗೆ ಮಹಾಪ್ರಸಾದ ಕಾರ್ಯಕ್ರಮ, ಸಾಯಂಕಾಲ 6 ಗಂಟೆಗೆ ಶ್ರೀ ಓಂಕಾರೇಶ್ವರ ಮಹಾ ರಥೋತ್ಸವ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ಶ್ರೀ ಶರಣಬಸವೇಶ್ವರರ ಪುರಾಣ ಮಂಗಳ ಕಾರ್ಯಕ್ರಮ. ಈ ಸಂದರ್ಭದಲ್ಲಿ ಗ್ರಾಮದ ಸಕಲ ಸದ್ಭಕ್ತರು, ನೆರೆಯ ಗ್ರಾಮಸ್ಥರು ಆಗಮಿಸಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಯಿತು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply