ಸಂಡೂರು: ತಾಲೂಕಿನ ಭುಜಂಗನಗರ ಗ್ರಾಮದ £ವೃತ್ತ ಯೋಧ ವೆಂಕಟೇಶ್ ದಾಸರ್ ದೇಶದ ವಿವಿಧ ಭಾಗಗಳಲ್ಲಿ ೨೦ ವರ್ಷಗಳ ಸೇವೆ ಸಲ್ಲಿಸಿ ಗ್ರಾಮಕ್ಕೆ ಹಿಂದಿರುಗಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದ್ದೂರಿ ಸ್ವಾಗತವನ್ನು £Ãಡಿದರು.
ಗ್ರಾಮ ಮುಖ್ಯ ಬೀದಿಯಲ್ಲಿ ಪೂರ್ಣ ಕುಂಭದ ಆರತಿ ಎತ್ತಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಯೋಧ£ಗೆ ನಮಿಸಿ ಗ್ರಾಮಸ್ಥರು ಕೂಡ ದೇಶ ಪ್ರೇಮ ಮೆರೆದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ £ವೃತ್ತ ಯೋಧ ವೆಂಕಟೇಶ್ ದಾಸರ್, ನಾನು ದ್ವಿತೀಯ ಪಿಯುಸಿ ಇರುವಾಗಲೇ ಸೇನೆಗೆ ಆಯ್ಕೆಯಾದೆ ಮಹಾರಾಷ್ಟ್ರದ ನಾಗಪುರದಲ್ಲಿ ನನ್ನ ಪ್ರಥಮ ತರಬೇತಿಯೊಂದಿಗೆ, ಜಮ್ಮು ಕಾಶ್ಮೀರ ಪಾಕಿಸ್ತಾನದ ಗಡಿ, ನೇಪಾಳ, ಬಾಂಗ್ಲಾದೇಶ ಮುಂತಾದ ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಯಿತು ಎಂದು ತಮ್ಮ ಸೇನೆಯ ಸೇವಾ ಅವಧಿ ಯಲ್ಲಿನ ಅನುಭವವನ್ನು ಹಂಚಿಕೊಂಡರು.
ಗ್ರಾಪಂ ಅಧ್ಯಕ್ಷ ಬಿ.ಜಿ. ಪ್ರಕಾಶಗೌಡ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ, ಬಿ ಜಿ ಉಜ್ಜನಗೌಡ,
ಮಾದಿಗ ಸಮಾಜದ ಅಧ್ಯಕ್ಷ ಐಹೊಳೆ £ಂಗಪ್ಪ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕ ಡಾ.ಮಲ್ಲಯ್ಯ, ಡಿ ಎಸ್ ಎಸ್ ತಾಲೂಕು ಸಂಚಾಲಕ ರಾಮಕೃಷ್ಣ ಹೆಗಡೆ, ಸುಬ್ಬಣ್ಣ ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ ಮತ್ತಿತರರು ಇದ್ದರು. ಕಮತ್ತೂರು ಮಲ್ಲೇಶ್ £ರೂಪಿಸಿದರು. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಕಾರ್ಯಕ್ರಮ ಆಯೋಜಿಸಿದ್ದರು.
Gadi Kannadiga > State > ಸಂಡೂರು ತಾಲೂಕಿನ £ವೃತ್ತ ಯೋಧ£ಗೆ ಅದ್ಧೂರಿ ಸ್ವಾಗತ
ಸಂಡೂರು ತಾಲೂಕಿನ £ವೃತ್ತ ಯೋಧ£ಗೆ ಅದ್ಧೂರಿ ಸ್ವಾಗತ
Suresh04/09/2023
posted on

More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023