This is the title of the web page
This is the title of the web page

Please assign a menu to the primary menu location under menu

Local News

ಸಾಮರಸ್ಯ ಬದುಕು ಸ್ವಾಸ್ಥ ಸಮಾಜ £ರ್ಮಾಣ


ಯಮಕನಮರಡಿ: ಭಾರತ ದೇಶವು ವಿವಿಧತೆಯಲ್ಲಿ ಏಕತೆವುಳ್ಳ ದೇಶವಾಗಿದ್ದು, ಇಲ್ಲಿ ಜಾತೀಯ ವ್ಯವಸ್ಥೆ ತಾರತ್ಯಮ ತೊಡೆದು ಹಾಕಿ ಜಾತಿ ಜಾತಿಗಳ ಮಧ್ಯ ಸಾಮರಸ್ಯ ಸೌಹಾರ್ದತೆ ಜನರು ಬದುಕು ಕಟ್ಟಿಕೊಳ್ಳುವಂತೆ ಜಾಗೃತಿ ಕಾರ್ಯ ನಡೆಯಬೇಕಾಗಿದೆ ಎಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ದಿ. ೧೮ ರಂದು ಚಿಕಲದಿ£್ನಯ ಶ್ರೀ ಕಮಲಾದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ೨೦೨೩ ಪೆಬ್ರುವರಿ ೮ ಮತ್ತು ೯ ರಂದು ಎರಡು ದಿನಗಳ ಕಾಲ ಶ್ರೀ ಮಹರ್ಷಿ ವಾಲ್ಮೀಕಿಯವರ ವೈಚಾರಿಕ ಜಾತ್ರೆಯು ನಡೆಯಲಿದ್ದು, ಈ ಜಾತ್ರೆಯಲ್ಲಿ ವಿವಿಧ ವೈಚಾರಿಕ ಗೋಷ್ಠಿಗಳು ವಿವಿಧ ಕ್ಷೇತ್ರದಲ್ಲಿ ಸಾಧನಗೈದ ಸಾದಕರಿಗೆ ಸನ್ಮಾನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಶಾಸಕ ಸತೀಶ ಜಾರಕಿಹೊಳಿಯವರು ಬುದ್ದ ಬಸವ ಅಂಬೇಡ್ಕರ ತತ್ವಗಳನ್ನು ಅನುಸರಿಸಿ ಸಮಾಜದಲ್ಲಿ ಬೀಡು ಬಿಟ್ಟಿರುವ ಜಾತಿಯ ವ್ಯವಸ್ಥೆ ಮೌಡ್ಯತೆಗಳನ್ನು ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ ಎಂದು ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನಾನಂದ ಮಹಾಸ್ವಾಮಿಗಳು ಹೇಳಿದರು.
ಯುವದುರೀಣ ರಾಹುಲ ಜಾರಕಿಹೊಳಿಯವರು ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ ಅವರ £ರಂತರ ಹೋರಾಟದಿಂದಾಗಿ ಎಸ್.ಟಿ ಜನಾಂಗಕ್ಕೆ ಶೇ ೭ ರಷ್ಟು ಮೀಸಲಾತಿ ದೊರಕಿದ್ದು, ಆದರೆ ಕೆಲವರು ಇದನ್ನೇ ತಮ್ಮ ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಚಿಕ್ಕಲದಿ£್ನ- ತೊಲಗಿಯ ಶ್ರೀ ಅದೃಶ್ಯಾನಂದ ಮಹಾಸ್ವಾಮಿಗಳು ಮಾತನಾಡಿ ಸಮಾಜದ ಒಳಿತಗಾಗಿ ಮಾಡುವ ಕೆಲಸಗಳಿಗೆ ಗೌರವ ಸಿಗುತ್ತದೆ. ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಎಸ್.ಟಿ. ಜನಾಂಗದ ಪರವಾಗಿ £ರಂತರವಾಗಿ ಹೋರಾಡಿದ ಫಲವಾಗಿ ಶೇ ೭% ಮೀಸಲಾತಿ ತಂದುಕೊಟ್ಟಿದ್ದಾರೆ ಅವರು ಸಮಾಜಕ್ಕಾಗಿ ಮಾಡಿರುವ ಈ ಕಾರ್ಯವೂ ಪ್ರಶಂಸ£Ãಯವಾದದು ಎಂದು ಹೇಳಿದರು.
ಸಾಹಿತಿಗಳಾದ ಆರ್.ಎಸ್. ಪಂಗನ್ನವರ ಸ್ವಾಗತಿಸಿದರು. ಪ್ರೋ.ಆನಂದ ಪಾಟೀಲ ಮಾತನಾಡಿದರು. ಪ್ರೋ.ಎಸ್.ಎಸ್. ಮೂಕನ್ನವರ ಕಾರ್ಯಕ್ರಮ £ರೂಪಿಸಿದರು. ಸಭೆಯಲ್ಲಿ ಶಹಾಬಂದರ ಗ್ರಾ.ಪಂ. ಅಧ್ಯಕ್ಷ ಶಂಕರ ಡೊಂಬಾರ, ಗಂಗಾರಾಮ ಇರಬಾಂವಿ, ಮಾಜಿ ಉಪಾಧ್ಯಕ್ಷ ರಾಮಚಂದ್ರ ನಾಯಿಕ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ £ರ್ದೇಶಕ ಈರಣ್ಣಾ ಬಂಜಿರಾಮ, ಜಿ.ಪಂ ಮಾಜಿ ಸದಸ್ಯ ಮಂಜುನಾಥ ಪಾಟೀಲ, ಯಲ್ಲಪ್ಪ ಹಂಚಿನಮ£, ಪ್ರಕಾಶ ಮಠದವರ, ಲಗಮಣ್ಣಾ ಪಾಟೀಲ, ಹಣಮಂತ ದಾಸ, ಸಂಜಯ ಪಾಟೀಲ, ಬಸವರಾಜ ನಾಯಿಕ, ಲಗಮಪ್ಪ ಮಲ್ಲನಾಯಿಕ, ಚೋಳಪ್ಪ ಪಾಟೀಲ, ಯಲ್ಲಪ್ಪ ಬಾಗರಾಯಿ, ರೇಣುಕಾ ಕುಂಡೇದ, ಶಾಸಕರ ಆಪ್ತ ಸಹಾಯಕ ನಾಗರಾಜ ದುಂದುರ, ಯಲ್ಲಪ್ಪ ಪಂಗನವರ, ಕಿತ್ತೂರ ಬ್ಲಾಕ ಕಾಂಗ್ರೇಸ ಎಸ್.ಟಿ. ಘಟಕದ ಅಧ್ಯಕ್ಷ ಭೀಮರಾಯಿ ದುರಗನ್ನವರ, ಶಶಿಕಾಂತ ಸವಾನವರ, ಆನಂದ ಕೋಟಗಿ, ಅರುಣ ರಾವುಲ, ರಾಮಣ್ಣಾ ಗುಳ್ಳಿ, ಯಲ್ಲಪ್ಪ ಬುಡ್ರಿ, ಹಾಗೂ ಸಮಸ್ತ ವಾಲ್ಮೀಕಿ ಜನಾಂಗದ ಭಾಂದವರು ಸಭೆಯಲ್ಲಿ ಪಾಲ್ಗೊಂಡಿದ್ದರು.


Gadi Kannadiga

Leave a Reply