ಬೆಳಗಾವಿ: – ಮಹಿಳೆಯರು ಮಾನಸಿಕ ಹಾಗೂ ದೈಹಿಕ ಸಮಸ್ಯೆ ಗಳನ್ನು ಅಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆದು ಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ, ಯೋಗಾಭ್ಯಾಸ ದಿಂದ ಶರೀರವನ್ನು ಸದೃಢ ಗೊಳಿಸಿ ಕೊಳ್ಳಬೇಕೆಂದು ಅತಿಥಿ ಉಪನ್ಯಾಸಕರಾದ ಡಾ.ಸ್ವಪ್ನಾ ಕುಲಕರ್ಣಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ದ ಕಾರ್ಯಕ್ರಮ ದಲ್ಲಿ ಕರೆ ನೀಡಿದರು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘವು ಶ್ರೀಮತಿ ಸುನಂದಾ ಮುಳೆ, ಹಣಮಂತರಾವ ಕುಲಕರ್ಣಿ, ಮೃಣಾಲಿನಿ ಅಂಗಡಿ ಹಾಗೂ ವಿಶಾಲ ಹೇರೇಕರ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ” ” ಮಹಿಳೆ ಯರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ” ಎಂಬ ವಿಷಯ ದ ಕುರಿತು ಉಪನ್ಯಾಸ ಹಾಗೂ ಚಿತ್ರ ನೋಡಿ ಕಥೆ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಜಯಶೀಲಾ ಬ್ಯಾಕೊಡ ವಹಿಸಿದ್ದರು. ಕಾರ್ಯದರ್ಶಿ ಡಾ.ಭಾರತಿ ಮಠದ ಸರ್ವರನ್ನು ಸ್ವಾಗತಿಸಿದರು.ರಾಜನಂದಾ ಗಾರ್ಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಮಾ ಅಂಗಡಿ ಪ್ರಾರ್ಥಿಸಿದರು. ಅನ್ನಪೂರ್ಣಾಹಿರೇಮಠ , ಪ್ರಭಾ ಪಾಟೀಲ ದಾನಿಗಳಾದ ದೀಪಿಕಾ ಚಾಟೆ, ಮೃಣಾಲಿನಿ ಅಂಗಡಿ,ಸರಳಾ ಹೇರೇಕರ ಸುನಂದಾ ಮುಳೆ ಯವರ ಪರಿಚಯ ಮಾಡಿದರು.ಶುಭಾ ತೆಲಸಂಗ ಅತಿಥಿಗಳನ್ನು ಪರಿಚಯಿಸಿದರು.ಲಲಿತಾ ಪರ್ವತರಾವ ವಂದಿಸಿದರು ದಾನಮ್ಮ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಾಹಿತಿಗಳಾದ ಸುಮಾ ಕಿತ್ತೂರ, ಸುನಂದಾ ಎಮ್ಮಿ, ಜ್ಯೋತಿ ಬಾದಾಮಿ, ಪ್ರತಿಭಾ ಕಳ್ಳೀಮಠ. ಮುಂ.ಉಪಸ್ಥಿತರಿದ್ದರು.
Gadi Kannadiga > Local News > ಆರೋಗ್ಯಪೂರ್ಣ ಸಮಾಜ ನಿರ್ಮಾಣ ಆರೋಗ್ಯವಂತ ಮಹಿಳೆಯರಿಂದಲೇ ಸಾಧ್ಯ.